Advertisement

Udupi; ಗಣೇಶ ವಿಗ್ರಹಗಳ ತಯಾರಿಕ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ

08:47 PM Sep 15, 2023 | |

ಉಡುಪಿ: ನಗರದ ಕಡಿಯಾಳಿಯ ಗಣೇಶ ವಿಗ್ರಹಗಳ ಹಾಗೂ ಮೂರ್ತಿ ತಯಾರಿಕ ಘಟಕ ಹಾಗೂ ಮಾರಾಟ ಸಂಸ್ಥೆಗೆ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ. ಕೆ ಅವರು ಇಂದು ಸಂಜೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.

Advertisement

ಇದೇ ಸಂದರ್ಭದಲ್ಲಿ ಗಣಪತಿ ವಿಗ್ರಹ ತಯಾರಿಕರೊಂದಿಗೆ , ವಿಗ್ರಹ ತಯಾರಿಕೆಗೆ ಬಳಸುತ್ತಿರುವ ವಸ್ತುಗಳು ಹಾಗೂ ಬಣ್ಣದ ಲೇಪನದ ಬಗ್ಗೆ ಮಾಹಿತಿ ಪಡೆದು ಮಾತನಾಡಿ ಬಣ್ಣವಿಲ್ಲದ ವಿಗ್ರಹಗಳ ತಯಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣದ ವಿಗ್ರಹಗಳನ್ನು ಜಲಮೂಲಗಳಿಗೆ ವಿಸರ್ಜಿಸುವುದರಿಂದ ಲೆಡ್, ಕ್ರೋಮಿಯಂ ಅಪಾಯಕಾರಿ ರಾಸಾಯನಿಕಗಳಿಂದ ನೈಸರ್ಗಿಕ ಜಲ ಮೂಲಕ್ಕೆ ತೊಂದರೆಯಾಗುತ್ತದೆ. ಇವುಗಳ ಭೌತಿಕ ಹಾಗೂ ರಾಸಾಯನಿಕ ಗುಣಗಳು ಪರಿಸರದಲ್ಲಿ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೆ ಪ್ರಾಣಿ ಪಕ್ಷಿ, ಜಲಚರಗಳ ಜೀವಕ್ಕೆ ಅಪಾಯವನ್ನುಂಟು ಮಾಡಲಾಗುತ್ತದೆ ಅಲ್ಲದೆ ಸಾರ್ವಜನಿಕರ ಆರೋಗ್ಯಕ್ಕೂ ಧಕ್ಕೆ ಉಂಟಾಗುತ್ತದೆ ಈ ಬಗ್ಗೆ ಕಂಡುಬಂದರೆ ಕೂಡಲೇ ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಣ್ಣಿನಿಂದ ಹಾಗೂ ಬಣ್ಣ ಲೇಪಿತವಲ್ಲದ ವಿಗ್ರಹಗಳನ್ನು ಮಾತ್ರ ಜಲಮೂಲ ಗಳ ಬಳಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಬೇಕು ಹಾಗೂ ಘನ ತ್ಯಾಜ್ಯಗಳನ್ನು ವಿಗ್ರಹದ ಜತೆಗೆ ವಿಸರ್ಜಿಸಲು ಅವಕಾಶ ನೀಡಬಾರದು ಎಂದರು.

ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಗಣೇಶ ವಿಗ್ರಹಗಳ ವಿಸರ್ಜನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದರು.

Advertisement

ಸಾರ್ವಜನಿಕರು ಗಣೇಶ ಚತುರ್ಥಿಯನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ, ಪರಿಸರ ಸ್ನೇಹಿಯಾಗಿ ಆಚರಣೆ ಮಾಡಬೇಕೆಂದರು. ಈ ಸಂದರ್ಭದಲ್ಲಿ ಪ್ರಾದೇಶಿಕ ಪರಿಸರ ಅಧಿಕಾರಿ ಕೆ.ಎಂ. ರಾಜು, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next