Advertisement

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಲಿ: ನಚಿಕೇತ್‌

01:20 AM Dec 04, 2018 | Karthik A |

ಕೋಟ : ಕನ್ನಡ ಭಾಷೆ ನಮ್ಮ ಸಂಸ್ಕೃತಿ ಬೆನ್ನೆಲುಬು. ಭಾಷೆ ಬಡವಾದರೆ ನಮ್ಮ ಸಂಸ್ಕೃತಿ ಬಡವಾಗುತ್ತದೆ. ಆದ್ದರಿಂದ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಭಾಷೆಯಾಗಿ ಕಲಿಸುವ ಕಾನೂನು ಜಾರಿಯಾಗಬೇಕು ಮತ್ತು ಕನ್ನಡ ಪರ ಹೋರಾಟಗಾರರು ಮೊದಲು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣ ನೀಡುವ ಮೂಲಕ ಬೇರೆಯವರಿಗೆ ಮಾದರಿಯಾಗಬೇಕು ಎಂದು ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷ  ನಚಿಕೇತ್‌ ನಾಯಕ್‌  ತಿಳಿಸಿದರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ಕೋಟ ವಿದ್ಯಾಸಂಘ, ಸಾಲಿಗ್ರಾಮ ಡಾ| ಕೆ. ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕೋಟದಲ್ಲಿ ನಡೆದ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಇಂದು ಹೆತ್ತವರು ಮಕ್ಕಳನ್ನು ಅಂಕಗಳಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವ ತವಕದಲ್ಲಿ ಪ್ರತಿಭೆ, ಚಟುವಟಿಕೆಗಳಿಗೆ ಬ್ರೇಕ್‌ ಹಾಕುತ್ತಿದ್ದಾರೆ. ಹೀಗಾಗಿ ಪಿ.ಯು.ಸಿ. ಅನಂತರ ಯಾವುದೇ ಪಠ್ಯೇತರ ಚಟುವಟಿಕೆಗೆ ಅವಕಾಶವಿಲ್ಲವಾಗಿದೆ. ಇದರಿಂದ ಯುವಜನಾಂಗದ ಬಹುಮುಖೀ ಪ್ರತಿಭೆ ನಾಶವಾಗಿ ಕೇವಲ ವೃತ್ತಿಗಳಿಗೆ ಸೀಮಿತವಾಗುವಂತಾಗಿದೆ ಎಂದರು.

ಸಾಹಿತ್ಯದ ಕುರಿತು ಆಸಕ್ತಿ ಬೆಳೆಸಿಕೊಳ್ಳಿ
ಕನ್ನಡ ಭಾಷೆ, ಸಾಹಿತ್ಯಕ್ಕೆ ಸಾವಿರಾರು ವರ್ಷ ಶ್ರೀಮಂತ ಇತಿಹಾಸವಿದೆ. ಇದನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕಾದರೆ ಯುವ ಜನಾಂಗ ಸಾಹಿತ್ಯದ ಕುರಿತು ಆಸಕ್ತಿ ಬೆಳೆಸಿಕೊಳ್ಳಬೇಕು. ಕೀಳರಿಮೆ ಬಿಟ್ಟು ಇಂತಹ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಕೋಟ ಸಾಧಕರ ಊರು
ಕೋಟ ಸಾಧಕರ ಊರು ಎನ್ನುವುದಕ್ಕೆ ಡಾ| ಶಿವರಾಮ ಕಾರಂತರಿಗಿಂತ ಬೇರೆ ಉದಾಹರಣೆ ಬೇಕಾಗಿಲ್ಲ. ಈ ಮಣ್ಣಿನ ಒಡನಾಟ, ಇಲ್ಲಿ ಸಮ್ಮೇಳನಾಧ್ಯಕ್ಷನಾಗಿ ಭಾಗವಹಿಸುತ್ತಿರುವುದೇ ನನ್ನ ಪಾಲಿನ ಭಾಗ್ಯ ಎಂದು ನಿಚಿಕೇತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next