ಉಡುಪಿ: ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸ ವದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲೆ ಹಾಗೂ ಯುವ ಮೋರ್ಚಾ ಉಡುಪಿ ನಗರ ಇವುಗಳ ಜಂಟಿ ಆಶ್ರಯದಲ್ಲಿ ರವಿವಾರ ಬೆಳಗ್ಗೆ ಯುವ ಸಂಕಲ್ಪ ಯಾತ್ರೆ ಬೃಹತ್ ಸೈಕಲ್ ಜಾಥಾ 150ಕ್ಕೂ ಮಿಕ್ಕಿ ಸೈಕಲ್ ಸವಾರರೊಂದಿಗೆ ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಆರಂಭಗೊಂಡು ಮಲ್ಪೆ ಬೀಚ್ ಬಳಿ ಸಮಾಪನಗೊಂಡಿತು.
ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನಿಲ್ ಕುಮಾರ್ ಚಾಲನೆ ನೀಡಿದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ನಡೆದ ಯುವ ಸಂಕಲ್ಪ ಯಾತ್ರೆ ಬೃಹತ್ ಸೈಕಲ್ ಜಾಥಾದಲ್ಲಿ 150ಕ್ಕೂ ಅಧಿಕ ಸೈಕಲ್ ಸವಾರರೊಂದಿಗೆ ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದ ಪ್ರಾರಂಭಗೊಂಡು ಮಲ್ಪೆ ಬೀಚ್ ಮೂಲಕ ಹಾದು ಕಡಿಯಾಳಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸಮಾಪನಗೊಂಡಿತು. ಸಚಿವರು ಬಿಜೆಪಿ ಕಚೇರಿಯವರೆಗೆ ಸೈಕಲ್‌ನಲ್ಲಿಯೇ ತೆರಳಿದರು.
ಇದನ್ನೂ ಓದಿ:ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಜಮ್ಮು ಕಣಿವೆ ನಾಡಿನಲ್ಲಿ ಬಾನೆತ್ತರಕ್ಕೆ ಹಾರಿದ ತಿರಂಗಾ
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಶ ನಾಯಕ್, ಜಿಲ್ಲಾ ವಕ್ತಾರ ಗುರು ಪ್ರಸಾದ್ ಶೆಟ್ಟಿ ಕಟಪಾಡಿ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ ಪೂಜಾರಿ, ಮಣಿಪಾಲ ನಗರಸಭಾ ಸದಸ್ಯೆ ಕಲ್ಪನಾ ಸುಧಾಮ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಅಮೀನ್, ಮಂಜುನಾಥ್ ಮಣಿಪಾಲ, ನಗರ ಯುವ ಮೋರ್ಚಾ ಅಧ್ಯಕ್ಷ ರೋಶನ್ ಶೆಟ್ಟಿ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅಕ್ಷಿತ್ ಶೆಟ್ಟಿ, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ನಿಧೀಶ್ ಶ್ರೀಯಾನ್, ಸುಶಾಂತ್ ಪೂಜಾರಿ, ಉಪಾಧ್ಯಕ್ಷ ಯೋಗೀಶ್ ದೇವಾಡಿಗ, ಪ್ರಜೀತ್ ಆಚಾರ್ಯ, ಕಾರ್ಯದರ್ಶಿ ಶ್ರೀವತ್ಸ, ಜಿಲ್ಲಾ ಕಾರ್ಯದರ್ಶಿ ಅಭಿರಾಜ್ ಸುವರ್ಣ, ಹಿಂದುಳಿದ ವರ್ಗಗಳ ಮೋರ್ಚಾದ ದಯಾನಂದ್ ದೇವಾಡಿಗ, ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸೂರಜ್ ಪೂಜಾರಿ, ಯಶೋಧರ್ ಅಮೀನ್, ಪ್ರವೀಣ್ ನಾಯಕ್, ಸಂದೇಶ ಪ್ರಭು, ನಿಖೀಲ್ ಮಡಿವಾಳ, ಗುರುರಾಜ್, ಮನೀಶ್, ಪ್ರಕಾಶ್, ಇಂದ್ರೇಶ್, ಚಂದನ್, ಸತ್ಯನಾರಾಯಣ್ ಇತರ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಜಾಥಾವು ಮಲ್ಪೆಯ ಕಡಲ ಕಿನಾರೆಯ ಗಾಂಧಿ ಪ್ರತಿಮೆಗೆ ಹಾರ ಹಾಕುವುದರ ಮೂಲಕ ಸಮಾಪನಗೊಂಡಿತು. ಅನಂತರ ಮಲ್ಪೆಯ ಪೊಲೀಸ್ ಠಾಣೆಯ ಬಳಿರುವ ಹುತಾತ್ಮ ಸೈನಿಕ ಉಪೇಂದ್ರ ಅವರ ಸ್ಮಾರಕಕ್ಕೆ ಹಾರ ಹಾಕಿ ಗೌರವ ಸಲ್ಲಿಸಲಾಯಿತು. ಜಿಲ್ಲಾಯು ವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ ವಂದಿಸಿದರು.