Advertisement

ಮರಳಿಗಾಗಿ ಅಹೋರಾತ್ರಿ ಧರಣಿ ಆರಂಭ

07:15 AM Aug 31, 2017 | |

ಉಡುಪಿ: ಜಿಲ್ಲೆಯ ಸಾಂಪ್ರದಾಯಕ ಮರಳುತೆಗೆಯಲು ಅರ್ಜಿ ಸಲ್ಲಿಸಿದ ಹಾಗೂ ಹಸಿರುಪೀಠದಿಂದ ನಿರಾಪೇಕ್ಷಣಾ ಪತ್ರ ಪಡೆದಿರುವ ಎಲ್ಲ 171 ಜನರಿಗೂ ಮರಳು ತೆಗೆಯಲು ಅವಕಾಶ ನೀಡಬೇಕೆಂದು ಕೋರಿ ಉಡುಪಿ ಜಿಲ್ಲಾ ಬಿಜೆಪಿ ವಿವಿಧ ಪ್ರಕೋಷ್ಠಗಳವತಿಯಿಂದ ಆ. 30ರಂದು ಉಡುಪಿಯಲ್ಲಿ ಅಹೋರಾತ್ರಿ ಆರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ವರೆಗೂ ಪಾದಯಾತ್ರೆ ಮೆರವಣಿಗೆ ಜರಗಿತು.

Advertisement

ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ ರಾಜ್ಯದ ವಿವಿಧೆಡೆ ಮರಳುಗಾರಿಕೆಯ ಸಮಸ್ಯೆಇಲ್ಲ. ಉಡುಪಿ ಜಿಲ್ಲೆಯಲ್ಲಿ ಮಾತ್ರ ಈ ಸಮಸ್ಯೆ ಉಲ½ಣಿಸಿದೆ. ಎಂ ಸ್ಯಾಂಡ್‌ ಲಾಬಿ ಇದರಹಿಂದೆ ಕೆಲಸಮಾಡುತ್ತಿದೆ. ಮರಳುಗಾರಿಕೆ ಸಮಸ್ಯೆ ಇತ್ಯರ್ಥವಾಗುವ ವೆರಗೂ ಈ ಮುಷ್ಕರವನ್ನು ಕೈಬಿಡುವುದಿಲ್ಲವೆಂದು ಅವರು ಹೇಳಿದರು.

ಮಾಜಿ ಸಚಿವ-ಸಂಸದ ಜಯಪ್ರಕಾಶ್‌ ಹೆಗ್ಡೆ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಉಡುಪಿ ಜಿ.ಪಂ. ಅಧ್ಯಕ್ಷ ದಿನಕರಬಾಬು, ಉಡುಪಿ ತಾ.ಪಂ.ಅಧ್ಯಕ್ಷರೆದ ನಳಿನಿ ಪ್ರದೀಪ್‌ ರಾವ್‌, ಹಿಂದುಳಿದ ವರ್ಗ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸತ್ಯಜಿತ್‌, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕಿರಣ್‌ಕುಮಾರ್‌,ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ನಗರ ಹಿಂದುಳಿದ ವರ್ಗಗಳ  ಉಮೇಶ್‌ ಪೂಜಾರಿ ಬಡಾ ನಿಡಿಯೂರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಮುಖಂಡರಗಳಾದ ಗೀತಾಂಜಲಿ ಸುವರ್ಣ, ಉಮೇಶ್‌ ಮೋಹನ್‌ ಕುಮಾರ್‌ ಕೆಪ್ಪೆಟ್ಟು,ಕೋಶಾಧ್ಯಕ್ಷ ಧನಂಜಯ ರವಿ ಅಮಿನ್‌, ಮೀನುಗಾರಿಕಾ ಫೆಡರೇಶನ್‌ ಅಧ್ಯಕ್ಷ ಯಶಪಾಲ ಸುವರ್ಣಮತ್ತಿತರರು ಉಪಸ್ಥಿತರಿದ್ದರು.ಉಡುಪಿ ಗಾಂಧಿ ವೃತ್ತದಿಂದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಚೇರಿ ವರೆಗೂಸಾಗಿದ ಪಾದಯಾತ್ರೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಪುನಃ ಉಡುಪಿಯಲ್ಲಿ ಆಹೋರಾತ್ರಿ ಧರಣಿಯನ್ನು ಆರಂಭಿಸಿತು.
 

Advertisement

Udayavani is now on Telegram. Click here to join our channel and stay updated with the latest news.

Next