Advertisement
ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಅವರು ಶ್ರೀ ವಿಶ್ವನಾಥ ದೇವರ ದರ್ಶನ ಪಡೆದರು. ಅನಂತರ ಕ್ಷೇತ್ರದ ಅರ್ಚಕರು ಮತ್ತು ಕ್ಷೇತ್ರಾಡಳಿತ ಮಂಡಳಿಯ ಪದಾಧಿಕಾರಿಗಳ ಬಳಿ ನಾರಾಯಣ ಗುರುಗಳ ತತ್ವ, ಆದರ್ಶ ಮತ್ತು ಸಂದೇಶಗಳ ಅನುಷ್ಠಾನ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬ ಮಾಹಿತಿ ಪಡೆದು, ನಾರಾಯಣ ಗುರುಗಳ ದರ್ಶನ ಕೈಗೊಂಡು, ಪೂಜೆಯಲ್ಲಿ ಪಾಲ್ಗೊಂಡರು. ಕ್ಷೇತ್ರ ನವೀಕರಣ ಸಮಿತಿಯ ಗೌರವಾಧ್ಯಕ್ಷ, ಶಾಸಕ ವಿನಯಕುಮಾರ್ ಸೊರಕೆ ಮುಖ್ಯಮಂತ್ರಿಗಳಿಗೆ ಕ್ಷೇತ್ರ ನವೀಕರಣ ಮತ್ತು ಕ್ಷೇತ್ರದ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಅಭಿವೃದ್ಧಿಯ ಸೇವೆಗಳ ಕುರಿತು ಮಾಹಿತಿ ನೀಡಿದರು.
ಶಾಸಕ ವಿನಯ ಕುಮಾರ್ ಸೊರಕೆ ಮತ್ತು ಸಚಿವ ಪ್ರಮೋದ್ ಅವರು ವಿಶೇಷ ಆಸಕ್ತಿ ವಹಿಸಿ ಜಿಲ್ಲಾ ಸಮುದಾಯ ಭವನ ಉದ್ಘಾಟನೆಗೆ ಮುಖ್ಯಮಂತ್ರಿ ಅವರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದರು. ಮುಖ್ಯಮಂತ್ರಿಗಳು ಸಮುದಾಯ ಭವನವನ್ನು ಉದ್ಘಾಟಿಸಿದ ಬಳಿಕ ಅವರ ಮಾತು ಕೇಳಲೆಂದು ಅನೇಕರು ಸಮುದಾಯ ಭವನದ ಒಳಗೆ ಕಾದು ಕುಳಿತಿದ್ದರಾದರೂ ಭದ್ರತೆಯ ದೃಷ್ಟಿಯಿಂದ ಸಭಾ ಕಾರ್ಯಕ್ರಮ ನಡೆಸಲು ಅನನುಕೂಲ ಉಂಟಾಯಿತು. ಹೀಗಾಗಿ ಸಭಾ ಕಾರ್ಯಕ್ರಮವನ್ನು ಕೊನೆಯ ಕ್ಷಣದಲ್ಲಿ ರದ್ದುಪಡಿಸಬೇಕಾಯಿತು ಎಂದು ಕ್ಷೇತ್ರಾಡಳಿತ ಮಂಡಳಿ ಸ್ಪಷ್ಟೀಕರಣ ನೀಡಿದೆ.
Related Articles
ಪ್ರಥಮ ಬಾರಿಗೆ ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಆಗಮಿಸಿ, ಹಿಂದಿರುಗುವ ವೇಳೆ ಸಿದ್ದರಾಮಯ್ಯ ಅವರಿಗೆ ಮೈಮುನಾ ಹೂಗುತ್ಛ ನೀಡಿ ಸ್ವಾಗತ
ಕೋರಿದ್ದು, ಆ ಬಗ್ಗೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿ ದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಇದೇ
ಮಾದರಿಯಲ್ಲಿ ಜಾತ್ಯತೀತ ತತ್ವ ಹಾಗೂ ಸೌಹಾರ್ದ ಮನೋಭಾವವನ್ನು ಮುಂದುವರಿಸಿ ಕೊಂಡು ಹೋಗುವಂತೆ ಕ್ಷೇತ್ರಾಡಳಿತ ಮಂಡ ಳಿಯ ಪದಾಧಿಕಾರಿಗಳಿಗೆ ಕರೆ ನೀಡಿದರು.
Advertisement