Advertisement
ಬುಕ್ ಬ್ಯಾಂಕ್ ಮೂಲಕ ವಿತರಣೆ ಕಳೆದ ವರ್ಷದ ಸ್ಯಾಟ್ಸ್ (ಸ್ಟೂಡೆಂಟ್ ಎಚೀವ್‌ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್) ಆಧಾರದ ಮೂಲಕ ವಿದ್ಯಾರ್ಥಿಗಳ ಸಂಖ್ಯೆ ಗಳಿಗೆ ಅನುಗುಣವಾಗಿ ಇಂಡೆಂಟನ್ನು ಸರಕಾರವೇ ನೀಡಿ ಪಠ್ಯಪುಸ್ತಕ ಸರಬರಾಜಾಗಿದೆ. ಎಸೆಸೆಲ್ಸಿ ಬದಲಾದ ಪಠ್ಯಪುಸ್ತಕಗಳಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಸ್ವಲ್ಪ ಕೊರತೆಯಾಗಿದೆ. ಇದೂ ಹಿಂದಿನ ಸ್ಯಾಟ್ಸ್ ಆಧಾರದಲ್ಲಿ ಸರಬರಾಜಾಗಿದೆ.ಉಳಿದ ತರಗತಿಗಳಿಗೆ ಹಿಂದಿನ ವರ್ಷದ ಪುಸ್ತಕಗಳನ್ನು “ಬುಕ್ ಬ್ಯಾಂಕ್’ ಮಾಡಿ ವಿತರಿಸಲಾಗಿದೆ. ಮುದ್ರಣ ಸಂಸ್ಥೆಗಳಿಂದ ಇನ್ನೂ ಸರಬರಾಜು ಆಗದ್ದರಿಂದ ಪುಸ್ತಕ ಹಂಚಿಕೆಯಾಗಿಲ್ಲ.
3ನೇ ತರಗತಿಯ ಇಂಗ್ಲಿಷ್, 2 ಮತ್ತು 4ನೇ ತರಗತಿಯ ಕಲಿಕಾ ಕನ್ನಡ, ಪ್ರಥಮ ಭಾಷಾ ಪಠ್ಯಪುಸ್ತಕ (ಸಂಸ್ಕೃತ, ಉರ್ದು ಇತ್ಯಾದಿ) ಬಾಕಿ ಇವೆ. ಭಾಷಾ ವಿಷಯದಲ್ಲಿ ಕೆಲವೇ ಪುಸ್ತಕಗಳು ಬರಲು ಬಾಕಿ ಇವೆ. ಶೂ/ಸಾಕ್ಸ್ ವಿತರಣೆಗೆ ಚಾಲನೆ
ವಿದ್ಯಾರ್ಥಿಗಳಿಗೆ ಗುಣಮಟ್ಟದ ಪಾದರಕ್ಷೆಗಳನ್ನು ಸ್ಥಳೀಯ ಮಟ್ಟದಲ್ಲಿ ಖರೀದಿಸಿ ವಿತರಿಸುವ ಜವಾಬ್ದಾರಿಯನ್ನು ಆಯಾಯಾ ಶಾಲಾಭಿವೃದ್ಧಿ/ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗಳಿಗೆ ವಹಿಸಲಾಗಿದೆ. ಎಸ್‌ಡಿಎಂಸಿ ಖರೀದಿ ಸಮಿತಿ ರಚಿಸಿ, ಅದರ ಮೂಲಕವೇ ಖರೀದಿ ಪ್ರಕ್ರಿಯೆ ನಡೆಸಿ ವಿತರಿಸುವಂತೆ ಇಲಾಖೆ ಸೂಚಿಸಿದೆ. 1 ಜೊತೆ ಕಪ್ಪು ಬಣ್ಣದ ಶೂ, 2 ಜೊತೆ ಬಿಳಿ ಬಣ್ಣದ ಕಾಲು ಚೀಲ ಖರೀದಿಸುವಾಗ ಉತ್ತಮ ಗುಣಮಟ್ಟದವುಗಳನ್ನೇ ಖರೀದಿಸಿ ವಿತರಿಸುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟ ಕಾಯ್ದಿರಿಸಲು ಎಫ್ಡಿಡಿಐ (ನೋಯಿಡಾ)ರವರು ನೀಡಿರುವ ತಾಂತ್ರಿಕ ಗುಣಮಟ್ಟವನ್ನು ಅನುಸರಿಸುವಂತೆ ಇಲಾಖೆಯಿಂದ ಸೂಚನೆಯಿದೆ. ಹಿಂದಿನ ವರ್ಷದ ಸ್ಯಾಟ್ಸ್ ಆಧಾರದಲ್ಲಿ ಎಸ್‌ಡಿಎಂಸಿ ಖಾತೆಗೆ ಸರಕಾರವೇ ನೇರವಾಗಿ ಹಣ ಜಮಾ ಮಾಡಿದೆ.
Related Articles
ಭಾಷಾ ವಿಷಯದಲ್ಲಿ ಕೆಲವೇ ಪಠ್ಯಪುಸ್ತಗಳ ಮಾತ್ರ ಬರಲು ಬಾಕಿಯಿದ್ದು, ಈ ವಾರವೇ ಕೈ ಸೇರಲಿದೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಶೂ/ಸಾಕ್ಸ್ ವಿತರಣೆಗೆ ಸಂಬಂಧಿಸಿದಂತೆ ಎಸ್‌ಡಿಎಂಸಿಗೆ ಪೂರ್ಣ ಜವಾಬ್ದಾರಿ ವಹಿಸಲಾಗಿದ್ದು, ಜು. 31ರೊಳಗೆ ಉತ್ತಮ ಗುಣಮಟ್ಟದ ಶೂ/ಸಾಕ್ಸ್ ಖರೀದಿಸಿ ವಿತರಿಸುವಂತೆ ಸೂಚಿಸಲಾಗಿದೆ. – ಶೇಷಶಯನ ಕಾರಿಂಜ, ಡಿಡಿಪಿಐ
Advertisement
– ಎಸ್.ಜಿ. ನಾಯ್ಕ