ಉಡುಪಿ: ನೃತ್ಯಾರ್ಪಣೆ ಮೂಲಕ ಸೇವೆ ನೀಡಿದರೆ ಶ್ರೀಕೃಷ್ಣ ನಿಗೆ ಸಂತೋಷವಾಗುತ್ತದೆ. ಅಲ್ಲದೆ ಶ್ರೀ ಕೃಷ್ಣನ ಅನುಗ್ರಹವೂ ಲಭಿಸ ಲಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಪರ್ಯಾಯ ಶ್ರೀ ಪುತ್ತಿಗೆ, ಶ್ರೀ ಕೃಷ್ಣಮಠ ಆಶ್ರಯದಲ್ಲಿ ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ರಾಜಾಂಗಣದಲ್ಲಿ ಆಯೋಜಿಸಲಾದ ಕುಣಿತ ಭಜನೆ ಸ್ಪರ್ಧೆಯನ್ನು ಸೋಮವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ತಾಮಸ ನೃತ್ಯದ ಪ್ರಭಾವ ಕಡಿಮೆ ಮಾಡಬೇಕಾದರೆ ಸಾತ್ವಿಕ ನೃತ್ಯವನ್ನುಹೆಚ್ಚು ಪ್ರಚುರಗೊಳಿಸಿ ಪೋಷಿಸಬೇಕಾ ಗಿದೆ. ಈ ನೆಲೆಯಲ್ಲಿ ಕುಣಿತ ಭಜನೆಗೆ ಮಹತ್ವ ನೀಡುವ ದೃಷ್ಟಿಯಿಂದ ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಕುಣಿತ ಭಜನೆ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಶ್ರೀ ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ದಿವಾನ ನಾಗರಾಜ ಆಚಾರ್ಯ, ರವೀಂದ್ರ ಆಚಾರ್ಯ, ಕೈಮಗ್ಗ ಸೀರೆಗಳ ಉತ್ಸವ ಆಯೋಜನೆ ಸಮಿತಿ ಅಧ್ಯಕ್ಷ ಡಾ| ಚಂದನ್ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಅವಿನಾಶ್ ಶೆಟ್ಟಿಗಾರ್ ಮಾರ್ಪಳ್ಳಿ, ಗೌರವಸಲಹೆಗಾರ ಪ್ರೇಮಾನಂದ ಶೆಟ್ಟಿಗಾರ್ ಚಿಟಾ³ಡಿ, ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಉಪಾಧ್ಯಕ್ಷೆ ಸರೋಜಾ ಯಶವಂತ್, ಗೌರವ ಸಲಹೆಗಾರ ಅಶೋಕ್ ಶೆಟ್ಟಿಗಾರ್, ಉಡುಪಿ ಪ್ರಾಥಮಿಕನೇಕಾರರ ಸೇವಾ ಸಹಕಾರ ಸಂಘದ ಸಿಇಒ ದಿನೇಶ್ ಕುಮಾರ್, ಗಣೇಶಶೆಟ್ಟಿಗಾರ್, ವಿದ್ಯಾಚರಣ್ ಶೆಟ್ಟಿಗಾರ್‌ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ಕುಣಿತ ಭಜನೆ ಸ್ಪರ್ಧೆ ಸಂಚಾಲಕ ರತ್ನಾಕರ ಇಂದ್ರಾಳಿ ಸ್ವಾಗತಿಸಿ, ಶ್ರೀ ಮಠದ ರಮೇಶ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುರಾಧಾ ಉದಯ್ ನಿರೂಪಿಸಿ, ವಂದಿಸಿದರು.
ಪುಟ್ಟ ಬಾಲನೆ ಮನೆ ಕಟ್ಟೀಲಾಡೋ…
ಬೀಜಾಡಿ ಗೋಪಾಡಿಯ ಶ್ರೀರಾಮ ಭಜನ ಮಂಡಳಿಯ 12 ಮಂದಿ ಮಹಿಳೆಯರು ಪುಟ್ಟ ಬಾಲನೆ ಮನೆ ಕಟ್ಟೀಲಾಡೋ…ಕೆಟ್ಟ ಗೋಪೇರ ಮಾತು ಕೇಳಲಾರೆ…ಎನ್ನುವ ಪದ್ಯ ಹಾಡುತ್ತಾ ತಾಳ ಹಾಕಿ ಕುಣಿದರೆ, ಪುತ್ತಿಗೆ ಶ್ರೀಪಾದರು ತಾಳ ಹಾಕಿ ಹುರಿದುಂಬಿಸಿದರು. ರಾಜಾಂಗಣದಲ್ಲಿ 5 ದಿನಗಳ ಕಾಲ 4 ತಂಡಗಳಂತೆ ಆಯ್ದ 20 ತಂಡಗಳಿಂದ ಕುಣಿತ ಭಜನೆ ಸ್ಪರ್ಧೆ ನಡೆಯಲಿದೆ.