Advertisement

Udupi ಡಿ.7: ರೋಹಿಣಿ ನಕ್ಷತ್ರ ಸಮೀಪದಲ್ಲೇ ಗುರುಗ್ರಹ

12:17 AM Dec 06, 2024 | Team Udayavani |

ಉಡುಪಿ: ಗುರು ಗ್ರಹ 13 ತಿಂಗಳಿಗೊಮ್ಮೆ ಭೂಮಿಗೆ ಸಮೀಪ ಬರುವುದಿದೆ. ಡಿಸೆಂಬರ್‌ನಲ್ಲಿ ಈ ಭವ್ಯ ಗ್ರಹ ಭೂಮಿಗೆ ಸಮೀಪಿಸಲಿದೆ.

Advertisement

ಡಿ.7ರಂದು ಗುರುಗ್ರಹದ ಒಪೋಸಿಷನ್‌, ಸೂರ್ಯ ಹಾಗೂ ಗುರು ಗ್ರಹ ಪೂರ್ವ ಪಶ್ಚಿಮದಲ್ಲಿ ಬಂದು ಸಂಪೂರ್ಣ ಸೂರ್ಯಾಸ್ತವಾದೊಡನೆ ಪೂರ್ವ ದಲ್ಲಿ ಉದಯಿಸಿ ಇಡೀ ರಾತ್ರಿ ಕಾಣಿಸಿಕೊಳ್ಳಲಿದೆ.

ಸೂರ್ಯನಿಂದ ಸುಮಾರು 65 ಜ್ಯೋತಿರ್‌ವರ್ಷ ದೂರದಲ್ಲಿರುವ ರೋಹಿಣಿ ನಕ್ಷತ್ರ ಹಳದಿ ಬಣ್ಣದಿಂದ ಹೊಳೆಯುವಂಥದ್ದು. ಡಿ. 7ರಂದು ಅದರ ಪಕ್ಕದಲ್ಲೇ ಗುರುಗ್ರಹವನ್ನು ನೋಡಬಹುದು ಹೀಗಾದಾಗ ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಕಂಡುಬರಲಿದೆ.

ಸೂರ್ಯನಿಂದ ಸರಾಸರಿ ಸುಮಾರು 78 ಕೋಟಿ ಕಿ.ಮೀ. ದೂರದಲ್ಲಿರುವ ಗುರುಗ್ರಹ ಈಗ ಭೂಮಿಯಿಂದ ಕೇವಲ 61 ಕೋಟಿ ಕಿ.ಮೀ. ದೂರದಲ್ಲಿದೆ. ಈಗ ಗುರು ಗ್ರಹ ಸುಂದರವಾಗಿ ಹೊಳೆದು ಎಲ್ಲರನ್ನೂ ಆಕರ್ಷಿಸಲಿದೆ. ದೂರದರ್ಶಕ ಹಾಗೂ ಬೈನಾಕ್ಯುಲರ್‌ಗಳಲ್ಲಿ ಗುರುಗ್ರಹದ ಪಟ್ಟಿ ಚಂದ್ರ ಸೊಗಸಾಗಿ ಕಾಣಲಿವೆ. ಸೌರವ್ಯೂಹಗಳಲ್ಲೇ ಬೃಹದಾಕಾರದ ಗ್ರಹ ಗುರು ಎಂದು ಖಗೋಳಶಾಸ್ತ್ರಜ್ಞ ಡಾ| ಎ.ಪಿ.ಭಟ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next