Advertisement

Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…

06:15 PM Dec 16, 2024 | Team Udayavani |

ಕೌಮಾರ್ಯ, ಯೌವ್ವನ, ವಾರ್ಧಕ್ಯ ಎನ್ನುವಾಗ “ನಾನು’ ಎನ್ನುವುದು ಅವಸ್ಥಾಭೇದದಲ್ಲಿ ಏಕತ್ವವಾಗಿ ಕಾಣುತ್ತದೆ. ದೇಹಾಂತರ ಪ್ರಾಪ್ತಿಯಲ್ಲಿಯೂ ಒಬ್ಬನೇ ಆತ್ಮ. ದುಃಖವಾಗಲು ಕಾರಣ “ನಾನೇ’ ಇಲ್ಲವೆಂದಾಗುತ್ತೇನೋ ಎನ್ನುವಾಗ. ಕೌಮಾರ್ಯ, ಯೌವ್ವನದ ವ್ಯತ್ಯಾಸವಾಗುವುದು ದೇಹಕ್ಕೆ ಮಾತ್ರ. ಆತ್ಮನಿಗೆ ವ್ಯತ್ಯಾಸವಿಲ್ಲ. ಆತ್ಮ ನಿತ್ಯನಾದದ್ದರಿಂದ ದುಃಖ ಪಡಬೇಕಾದ ಸಂದರ್ಭವಿಲ್ಲ. ಕೌಮಾರಾದಿ ದೆಸೆಗಳಲ್ಲಿ ದೇಹವೇ ನಾನಾಗಿದ್ದರೆ ಬಾಲ್ಯ, ಕೌಮಾರ್ಯದ ಅನುಭವ ಬೇರೆಯಾಗಬೇಕಿತ್ತು.

Advertisement

ಆತ್ಮನ ಅನುಭವದಲ್ಲಿ ಒಂದೇ ಇದ್ದದ್ದರಿಂದ ತನ್ನ ದೇಹದಲ್ಲಿ ಆದ ಮಾರ್ಪಾಡನ್ನು ಒಬ್ಬನೇ ಆಗಿ ಕಾಣುತ್ತಾನೆ. ಇಲ್ಲಿ ಆತ್ಮನೂ ಬೇರೆ ಬೇರೆಯಾಗಿ ಕಾಣಬೇಕಿತ್ತು. ಆತ್ಮನೇ ಬೇರೆ, ದೇಹವೇ ಬೇರೆ, ಆದ್ದರಿಂದ ಆತ್ಮನಿಗೆ ನಾಶವಿಲ್ಲ, ದೇಹವಿಲ್ಲವಾಗುತ್ತದೆ ವಿನಾ “ನಾನು’, “ಅವರು’ ಇಲ್ಲವಾಗುವುದಿಲ್ಲ ಎಂಬ ಉತ್ತರ ಶ್ರೀಕೃಷ್ಣನದು. ಸಂಬಂಧಗಳು ಹೋಗುತ್ತದೆ ಎನ್ನುವುದಾದರೆ ಅದು ಎಂದಾದರೂ ಹೋಗುವಂಥದ್ದೇ. ಕೌಮಾರ್ಯ, ಯೌವ್ವನ ಹೋದಾಗಲೂ ದುಃಖಬಂದಿತ್ತೇ? ವಾರ್ಧಕ್ಯದಲ್ಲಿ ದುಃಖವಾಗುತ್ತದೆ ಏಕೆಂದರೆ ಇದುವರೆಗೆ ಏನೂ ಸಾಧನೆ ಮಾಡಲಿಲ್ಲ. ಸಾಧನೆಯನ್ನು ಮುಂದೆ ಮಾಡೋಣ ಎಂದು ಮುಂದೂಡುತ್ತಿರುತ್ತಾರೆ. ಮುಂದೆ ಮಾಡಲಿಕ್ಕಾಗಲಿಲ್ಲ, ಇದುವರೆಗೆ ಮಾಡಲಿಲ್ಲವೆಂದು ವಾರ್ಧಕ್ಯದಲ್ಲಿ ಚಿಂತೆ ಮೂಡುತ್ತದೆ. ಇದರಿಂದ ದುಃಖ ಬರುವುದೆ ವಿನಾ ವಾರ್ಧಕ್ಯಕ್ಕಾಗಿಯಲ್ಲ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next