ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೊರೊನಾದಿಂದ ಎರಡು ಸಾವು ಸಂಭವಿಸಿವೆ. ಸೋಮವಾರ 83 ಜನರಿಗೆ ಪಾಸಿಟಿವ್ ಮತ್ತು 220 ಜನರಿಗೆ ನೆಗೆಟಿವ್ ವರದಿಯಾಗಿದೆ. 20 ದಿನಗಳ ಬಳಿಕ ಕಡಿಮೆ ಸಂಖ್ಯೆಯಲ್ಲಿ ಪಾಸಿಟಿವ್ ವರದಿಯಾಗಿರುವುದು ಇದೇ ಮೊದಲು. ಆ. 10ರಂದು 90 ಮಂದಿಗೆ ಪಾಸಿಟಿವ್ ವರದಿಯಾಗಿತ್ತು.
ಉಡುಪಿಯ 43 ಮತ್ತು 40 ವರ್ಷ ಪ್ರಾಯದ ಪುರುಷರಿ ಬ್ಬರು ಮೃತಪಟ್ಟವರು. ಅವರಿಗೆ ಉಸಿರಾಟದ ಸಮಸ್ಯೆ, ಮಧು
ಮೇಹದಂತಹ ಸಮಸ್ಯೆಗಳಿದ್ದವು. ಜಿಲ್ಲಾಡಳಿತದ ವರದಿಯಂತೆ ಇದುವರೆಗೆ 97 ಮಂದಿ ಕೊರೊನಾ ಕಾರಣದಿಂದ ಮೃತಪಟ್ಟಿದ್ದಾರೆ.
ಸೋಂಕಿತರಲ್ಲಿ ರೋಗ ಲಕ್ಷಣವಿರುವ 21 ಪುರುಷರು, 9 ಮಹಿಳೆಯರು, ರೋಗ ಲಕ್ಷಣ ಇರದ 29 ಪುರುಷರು, 24 ಮಹಿಳೆ ಯರಿದ್ದಾರೆ. ಉಡುಪಿ ತಾಲೂಕಿನ 28, ಕುಂದಾಪುರ ತಾಲೂಕಿನ 35, ಕಾರ್ಕಳ ತಾಲೂಕಿನ 18 ಹಾಗೂ ಇತರ ಜಿಲ್ಲೆಗಳ ಇಬ್ಬರು ಇದ್ದಾರೆ.
26 ಜನರನ್ನು ಆಸ್ಪತ್ರೆಗಳಿಗೂ 57 ಜನರನ್ನು ಮನೆಗಳ ಐಸೊಲೇಶನ್‌ಗೂ ಒಳಪಡಿಸಲಾಗಿದೆ. 235 ಜನರ ಗಂಟಲ ದ್ರವ ಮಾದರಿಗಳನ್ನು ಸಂಗ್ರಹಿಸಿದ್ದು 172 ಜನರ ವರದಿಗಳು ಬರಬೇಕಾಗಿವೆ. 81 ಜನರು ಆಸ್ಪತ್ರೆಗಳಿಂದಲೂ 222 ಜನರು ಹೋಂ ಐಸೊಲೇಶನ್‌ನಿಂದಲೂ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.