Advertisement

ಉಡುಪಿ: ಬನ್ನಂಜೆಯ ಮೃತರ ವರದಿ ನೆಗೆಟಿವ್‌

02:05 AM May 18, 2020 | Sriram |

ಉಡುಪಿ: ಶನಿವಾರ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ನಿಧನ ಹೊಂದಿದ ಬನ್ನಂಜೆಯ 44 ವರ್ಷ ಪ್ರಾಯದ ವ್ಯಕ್ತಿಯೊಬ್ಬರಿಗೆ ಕೋವಿಡ್-19 ಸೋಂಕು ಇಲ್ಲದಿರುವುದು ರವಿವಾರ ದೃಢ ಪಟ್ಟಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ ಒಟ್ಟು 341 ಜನರ ಮಾದರಿಗಳ ವರದಿ ಬರಬೇಕಾಗಿರುವುದು ಸಾರ್ವಜನಿಕರಲ್ಲಿ ಕಳವಳ ಉಂಟು ಮಾಡಿದೆ.

Advertisement

ರವಿವಾರ 230 ಜನರಿಂದ ಮಾದರಿಗಳನ್ನು ಸಂಗ್ರಹಿಸಿದ್ದು ಒಟ್ಟು ಸಂಗ್ರಹಿಸಿದ ಮಾದರಿಗಳು 2,000 ದಾಟಿವೆ. ಇದುವರೆಗೆ ಸಂಗ್ರಹಿಸಿದ ಮಾದರಿಗಳ ಸಂಖ್ಯೆ 2,201. ರವಿವಾರ ಎಂಟು ಮಂದಿ ತೀವ್ರ ಉಸಿರಾಟದ ಸಮಸ್ಯೆಯವರು, ಇಬ್ಬರು ಕೋವಿಡ್-19 ಸಂಪರ್ಕಿತರು, ಐವರು ಜ್ವರ ಪೀಡಿತರು, ಬರೋಬ್ಬರಿ 215 ಮಂದಿ ಹಾಟ್‌ ಸ್ಪಾಟ್‌ ಸಂಪರ್ಕದವರ ಮಾದರಿ ಗಳನ್ನು ಸಂಗ್ರಹಿಸಲಾಗಿದೆ. ಹಾಟ್‌ಸ್ಪಾಟ್‌ ಸಂಪರ್ಕದವರಲ್ಲಿ ಬಹುತೇಕರು ಮಹಾರಾಷ್ಟ್ರದಿಂದ ಬಂದವ ರಿರುವುದೇ ಕಳವಳಕ್ಕೆ ಮೂಲ ಕಾರಣ.

ಬನ್ನಂಜೆಯ ವ್ಯಕ್ತಿಗೆ ಕೋವಿಡ್-19 ಸೋಂಕು ಇದೆ ಎಂಬ ಗುಮಾನಿ ಹರಡಿತ್ತು. ಅವರಿಗೆ ಶೀತ, ಕೆಮ್ಮು, ಜ್ವರ ಬಾಧೆ ಇತ್ತು. ಹೃದಯಾಘಾತದಿಂದ ನಿಧನ ಹೊಂದಿದ್ದರು. ಅವರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ರವಿವಾರ ಅವರಿಗೆ ನೆಗೆಟಿವ್‌ ವರದಿ ಬಂದ ಕಾರಣ ಸದ್ಯ ನಿಟ್ಟುಸಿರು ಬಿಡುವಂತಾಯಿತು. ಮೃತ ಶರೀರವನ್ನು ವಾರಸುದಾರರ ವಶಕ್ಕೆ ನೀಡಲಾಗಿದೆ.

ಸಾವಿನ ಕಾರಣ ಶೋಧ
ಇದುವರೆಗೆ ಬಂದ ಸ್ಥಳೀಯ ಎಲ್ಲರ ವರದಿ ನೆಗೆಟಿವ್‌ ಆಗಿವೆ. ಈಗಾಗಲೇ ಕಂಡು ಬಂದ ಹತ್ತು ಪ್ರಕರಣಗಳು ಮೂಲತಃ ಉಡುಪಿ ಜಿಲ್ಲೆಗೆ ಹೊರತಾದುದು – ಹೊರ ಸಂಪರ್ಕದಿಂದ ಬಂದವು. ತೀವ್ರ ಉಸಿರಾಟದ ಎಲ್ಲ ಪ್ರಕರಣಗಳನ್ನು ಮತ್ತು ಉಸಿರಾಟ ಸಂಬಂಧಿ ಎಲ್ಲ ಸಾವಿನ ಪ್ರಕರಣಗಳನ್ನು ಪರಿಶೋಧಿಸಲಾಗುತ್ತಿದೆ. ಇದುವರೆಗೆ 279 ಉಸಿರಾಟದ ಪ್ರಕರಣಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದುವರೆಗೆ ಉಸಿರಾಟದ ಸಮಸ್ಯೆಗೆ ಸಂಬಂಧಿಸಿ 21 ಸಾವು ಉಂಟಾಗಿದ್ದು ಇವರೆಲ್ಲರ ವರದಿ ನೆಗೆಟಿವ್‌ ಆಗಿವೆ ಎಂದು ಜಿಲ್ಲಾ ನೋಡಲ್‌ ಅಧಿಕಾರಿ ಡಾ| ಪ್ರಶಾಂತ ಭಟ್‌ ತಿಳಿಸಿದ್ದಾರೆ.

85 ಜನರು 28 ದಿನಗಳ ಮತ್ತು 106 ಮಂದಿ
14 ದಿನಗಳ ಕ್ವಾರಂಟೈನ್‌ ಮುಗಿಸಿದ್ದಾರೆ. 6 ಜನರು ಆಸ್ಪತ್ರೆ ಕ್ವಾರಂಟೈನ್‌ಗೆ ಮತ್ತು 16 ಮಂದಿ ಐಸೊಲೇಶನ್‌ ವಾರ್ಡ್‌ಗೆ ಸೇರಿದ್ದು, 7 ಮಂದಿ ವಾರ್ಡ್‌ನಿಂದ ಬಿಡುಗಡೆ ಗೊಂಡಿದ್ದಾರೆ.ಪ್ರಸ್ತುತ 621 ಮಂದಿ ಮನೆಯಲ್ಲಿ, 47 ಮಂದಿ ಆಸ್ಪತ್ರೆಯಲ್ಲಿ ಮತ್ತು 84 ಮಂದಿ ಐಸೊಲೇಶನ್‌ ವಾರ್ಡ್‌ ಕ್ವಾರಂಟೈನ್‌ನಲ್ಲಿದ್ದಾರೆ.

Advertisement

ಶಿಷ್ಟಾಚಾರ ಪ್ರಕಾರ ಅಂತ್ಯಕ್ರಿಯೆ
ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿ, ಬಳಿಕ ಕೋವಿಡ್-19 ದೃಢಪಟ್ಟ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ರವಿವಾರ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಸರಕಾರಿ ಶಿಷ್ಟಾಚಾರದ ಪ್ರಕಾರ ಜಿಲ್ಲಾಡಳಿತದ ವತಿಯಿಂದ ನಡೆಸಲಾಯಿತು.

ಲ್ಯಾಬ್‌ ಆರಂಭ ಸಾಧ್ಯತೆ
ರವಿವಾರ 21 ವರದಿಗಳು ನೆಗೆಟಿವ್‌ ಆಗಿ ಬಂದಿವೆ. ಸೋಮವಾರ ಭಾರೀ ಪ್ರಮಾಣದ ವರದಿಗಳು ಕೈಸೇರುವ ಸಾಧ್ಯತೆ ಇರುವುದರಿಂದ ಆತಂಕವನ್ನು ಉಂಟು ಮಾಡಿದೆ. ಈ ನಡುವೆ ಸೋಮವಾರದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಮಂಜೂರುಗೊಂಡ ಪ್ರಯೋಗಾಲಯ ಕೇಂದ್ರವೂ ಕಾರ್ಯಾರಂಭವಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next