Advertisement
ಉದ್ಯಾವರದ 60 ವರ್ಷದವರೊಬ್ಬರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರಿಗೆ ಮಧುಮೇಹದ ಸಮಸ್ಯೆ ಇತ್ತು. ಮಂದಾರ್ತಿ ಸಮೀಪದ 49 ವರ್ಷದ ಮಹಿಳೆಯೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅನಂತರ ಡಾ|ಟಿಎಂಎ ಪೈ ಆಸ್ಪತ್ರೆಗೆ ದಾಖಲಾಗಿದ್ದರು. ಕುಂದಾಪುರ ಕಿರಿಮಂಜೇಶ್ವರದ 80 ವರ್ಷದ ಮಹಿಳೆಯೊಬ್ಬರು ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಉಡುಪಿ ಇಂದಿರಾನಗರದ 44 ವರ್ಷದವರೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಇದುವರೆಗಿನ ಒಟ್ಟು ಸಾವು 44ಕ್ಕೇರಿದೆ. ಇದರಲ್ಲಿ ಉಡುಪಿ ಜಿಲ್ಲೆಯಲ್ಲಿ ಮೃತಪಟ್ಟ ಹೊರ ಜಿಲ್ಲೆಯವರು ಸೇರಿಲ್ಲ.ಪಾಸಿಟಿವ್ ಪ್ರಕರಣಗಳಲ್ಲಿ 58 ಮಂದಿ ಉಡುಪಿ ತಾಲೂಕಿನವರು, 34 ಮಂದಿ ಕುಂದಾಪುರ ತಾಲೂಕಿನವರು, 28 ಮಂದಿ ಕಾರ್ಕಳ ತಾಲೂಕಿನವರು. ಆರು ಮಂದಿ ಇತರ ಜಿಲ್ಲೆಯವರಿದ್ದಾರೆ. 70 ಪುರುಷರು, ಒಬ್ಬ ಬಾಲಕ, 52 ಮಹಿಳೆಯರು, ಮೂವರು ಬಾಲಕಿಯರು.