Advertisement

“ಉದಯವಾಣಿ”ಹೆಸರು,ಟ್ರೇಡ್‌ಮಾರ್ಕ್‌ನ ಅಕ್ರಮ ಬಳಕೆಗೆ ತಡೆಯಾಜ್ಞೆ

11:34 AM Dec 18, 2022 | Team Udayavani |

ಉಡುಪಿ: “ಉದಯವಾಣಿ’ಯ ಹೆಸರು ಮತ್ತು ಟ್ರೇಡ್‌ ಮಾರ್ಕ್‌ ಅನ್ನು (Udayavani.com) ಯಾವುದೇ ವ್ಯಕ್ತಿಗಳು ಮತ್ತು ಸಂಸ್ಥೆಗಳು ಬಳಸಿಕೊಳ್ಳದಂತೆ ನಿರ್ಬಂಧ ವಿಧಿಸಿ ಉಡುಪಿ ಜಿಲ್ಲಾ ನ್ಯಾಯಾಲಯ ಶುಕ್ರವಾರ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

Advertisement

ಇತ್ತೀಚೆಗೆ ಅಮರೇಶ್‌ ಕಮನಕೇರಿ ಎಂಬವರು “ಉದಯವಾಣಿ ಕನ್ನಡ ಮತ್ತು ಇಂಗ್ಲಿಷ್‌ ನ್ಯೂಸ್‌ ಮೀಡಿಯಾ’ ಹೆಸರನ್ನೇ ತಮ್ಮ ಡಿಜಿಟಲ್‌ ಮತ್ತು ಮಾಧ್ಯಮ ಸಂಸ್ಥೆಗೆ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಸಾರ್ವಜನಿಕರಲ್ಲಿ “ಉದಯವಾಣಿ’ ದೈನಿಕದ ಕುರಿತು ಗೊಂದಲ ಸೃಷ್ಟಿಸುವುದಲ್ಲದೇ, ತಪ್ಪು ಅಭಿಪ್ರಾಯವನ್ನೂ ಮೂಡಿಸಲಿದೆ. ಈ ಹಿನ್ನೆಲೆಯಲ್ಲಿ ಉದಯವಾಣಿ ಹೆಸರನ್ನು ಅನ್ಯರು ಅಕ್ರಮವಾಗಿಬಳಸುತ್ತಿರುವುದರ ವಿರುದ್ಧ ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ. ಉಡುಪಿಯ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ (ಒ.ಎಸ್‌. 2/2022) ದಾಖಲಿಸಿತ್ತು.

ಡಿ. 16 ರಂದು ನ್ಯಾಯಾಧೀಶರು ಅಮರೇಶ್‌ ಕಮನಕೇರಿ ಸಹಿತ ಇನ್ನಾವುದೇ ವ್ಯಕ್ತಿಗಳು ಮುಂದಿನ ತಾರೀಕಿನವರೆಗೆ”ಉದಯವಾಣಿ’ ಹೆಸರು ಮತ್ತು ಟ್ರೇಡ್‌ಮಾರ್ಕ್‌ ಬಳಕೆ ಮಾಡದಂತೆ ನಿರ್ಬಂಧಿಸಿ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ.

ಮುದ್ರಣ ಮತ್ತು ಪ್ರಕಾಶನ ಸಂಸ್ಥೆಯಾದ ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌(ಎಂಎಂಎನ್‌ಎಲ್‌) 1970ರಿಂದ ಹೆಸರಾಂತಕನ್ನಡ ದೈನಿಕ “ಉದಯವಾಣಿ’ಯನ್ನು ಪ್ರಕಟಿಸುತ್ತಿದೆ. ಜತೆಗೆ ಮಣಿ ಪಾಲ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ, ಮುಂಬಯಿಯಲ್ಲಿ ಉದಯವಾಣಿಯ ಆವೃತ್ತಿಗಳು ಏಕಕಾಲದಲ್ಲಿ ನಿತ್ಯವೂ ಪ್ರಕಟವಾಗುತ್ತಿವೆ.

ಇದರ ಜತೆ “ತರಂಗ’, “ತುಷಾರ’, “ತುಂತುರು’ ನಿಯತಕಾಲಿಕೆಗಳನ್ನು ಎಂಎಂಎನ್‌ಎಲ್‌ ಮುದ್ರಿಸಿ ಪ್ರಕಟಿಸುತ್ತಿದೆ. ಎಂಎಂಎನ್‌ ಎಲ್‌ ಸಂಸ್ಥೆಯು ಟ್ರೇಡ್‌ಮಾರ್ಕ್‌ನ ಮಾಲಕತ್ವವನ್ನು ಹೊಂದಿದೆ. ಈ ಟ್ರೇಡ್‌ಮಾರ್ಕ್‌ ಅನ್ನು ದೇಶ-ವಿದೇಶಗಳಲ್ಲಿ ಸಂಸ್ಥೆಯು ತನ್ನ ಎಲ್ಲಕಾರ್ಯಚಟುವಟಿಕೆಗಳಲ್ಲಿ ಬಳಸುತ್ತಿದ್ದು, ಇನ್ನು ಮುಂದೆಯೂ ಇದೇ ಸಂಸ್ಥೆಯ ಭಾಗವಾಗಿರಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next