Advertisement
ಬಸ್ ನಿಲ್ದಾಣದಲ್ಲಿ ಒಂದು ಕ್ಷಣ ಕೂತುಕೊಂಡರೆ ಭಿಕ್ಷುಕರು ಸಹಿತ ಕೆಲವರು ವಿನಾ ಕಾರಣ ಕಿರುಕುಳ ನೀಡುವ ಘಟನೆಗಳು ನಡೆಯುತ್ತಿವೆ. ಬಸ್ ತಂಗುದಾಣದಲ್ಲಿ ಶುಚಿತ್ವ ಇಲ್ಲದಿರುವುದು ಹಾಗೂ ಎಲ್ಲೆಂದರಲ್ಲಿ ತಂಬಾಕು ಸೇವಿಸಿ ಉಗುಳುವುದು ಕೂಡ ನಗರದ ಅಂದಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಪ್ರಯಾಣಿಕರ ತಂಗುದಾಣದಲ್ಲಿಯೇ ದಾರಿಹೋಕರು ವಿಶ್ರಾಂತಿ ಪಡೆಯು ತ್ತಿದ್ದು, ಪ್ರಯಾಣಿಕರಿಗೆ ಇರಿಸುಮುರುಸು ಉಂಟುಮಾಡುತ್ತಿದೆ.
ಈ ಎರಡೂ ಬಸ್ ತಂಗುದಾಣದ ಬಳಿ ವೇಶ್ಯಾವಾಟಿಕೆ ದಂಧೆ ನಡೆಯು ತ್ತಿವೆ. ಪ್ರಯಾಣಿಕರ ಆಸೀನದಲ್ಲಿ ಕುಳಿತು ಕೊಳ್ಳುವವರನ್ನೂ ವಕ್ರ ದೃಷ್ಟಿಯಿಂದ ನೋಡಲಾಗುತ್ತಿದೆ. ಸರ್ವಿಸ್ ಬಸ್ ನಿಲ್ದಾಣದ ಎರಡೂ ಬದಿಯೂ ದಿನಂಪ್ರತಿ ಇಂತಹ ಘಟನೆಗಳು ಕಾಣಸಿಗುತ್ತಿವೆ. ಅಲ್ಲದೆ ಕೆಎಸ್ಸಾರ್ಟಿಸಿ ಬಸ್ ತಂಗು ದಾಣದಲ್ಲಿಯೂ ಇವರ ಉಪಟಳ ನಿರಂ ತರವಾಗಿ ನಡೆಯುತ್ತಿದೆ. ವಿದ್ಯಾರ್ಥಿನಿಯರಿಗೂ ತೊಂದರೆ
ನಗರ ವ್ಯಾಪ್ತಿಯಲ್ಲಿ ಹಲವಾರು ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪ್ರಯಾಣಕ್ಕೆ ಈ ಬಸ್ ತಂಗುದಾಣ ವನ್ನೇ ಆಶ್ರಯಿಸಿದ್ದಾರೆ. ವಿದ್ಯಾರ್ಥಿನಿಯ ರೊಂದಿಗೆ ಮೈಕೈ ತಾಗಿಸಿ ಮಾತುಕತೆ ನಡೆಸಿ ಪರಿಚಿತರಂತೆ ವರ್ತಿಸುತ್ತಿದ್ದಾರೆ. ಹಿಂದಿ- ಕನ್ನಡ ಮಾತನಾಡುವ ಮಂದಿಯಿಂದಲೇ ಈ ಕೃತ್ಯ ನಡೆಯುತ್ತಿದೆ ಎನ್ನುತ್ತಾರೆ
-ಕಾಲೇಜು ವಿದ್ಯಾರ್ಥಿನಿಯೊಬ್ಬರು.
Related Articles
ಬಸ್ ತಂಗುದಾಣದಲ್ಲಿ ಕಿರುಕುಳ ನೀಡುವ ಬಗ್ಗೆ ದೂರುಗಳು ಬಂದಿದ್ದು, ಈಗಾಗಲೇ ಕೆಲವರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಪೊಲೀಸರು ಈ ಭಾಗದಲ್ಲಿ ಬೀಟ್ ಕಾರ್ಯಾಚರಣೆಯಲ್ಲಿದ್ದಾರೆ. ಇಬ್ಬರು ಸಿಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಸಾರ್ವಜನಿಕರು ಅಥವಾ ಪ್ರಯಾಣಿಕರಿಗೆ ತೊಂದರೆ ಉಂಟಾದರೆ ಕೂಡಲೇ 112ಗೆ ಕರೆ ಮಾಡಬಹುದು. 5 ನಿಮಿಷದೊಳಗೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿ ಸಲಿದ್ದಾರೆ. ನಗರ ಠಾಣೆಗೆ ಮುಖತಃ ಭೇಟಿಯಾಗಿಯೂ ದೂರು ನೀಡಬಹುದಾಗಿದೆ.
-ಪ್ರಮೋದ್ ಕುಮಾರ್,
ಪೊಲೀಸ್ ನಿರೀಕ್ಷಕರು,
ಉಡುಪಿ ನಗರ ಠಾಣೆ
Advertisement
ರಾತ್ರಿ ವೇಳೆ ಉಪಟಳ ಹೆಚ್ಚಳಸಿಟಿ ಬಸ್ ತಂಗುದಾಣದಿಂದ ಸರ್ವಿಸ್ ಬಸ್ ತಂಗುತಾಣಕ್ಕೆ ತೆರಳುವ ಭಾಗದಲ್ಲಿ ವೇಶ್ಯೆಯರು ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುತ್ತಾರೆ. ಕೆಲವೊಂದು ಬಾರಿ ಈ ಭಾಗದಲ್ಲಿ ಬೀದಿದೀಪಗಳೂ ಉರಿಯದ ಕಾರಣ ಪ್ರಯಾಣಿಕರೂ ತೊಂದರೆ ಎದುರಿಸಬೇಕಾಗುತ್ತದೆ. ವಸ್ತು ಮಾರಾಟದ ನೆಪದಲ್ಲಿ ಕಿರುಕುಳ
ಪರ್ಸ್, ಕೀಚೈನ್ ಮಾರಾಟದ ನೆಪದಲ್ಲಿ ಬಸ್‌ನೊಳಗೆ ಆಗಮಿಸಿ ಪ್ರಯಾ ಣಿಕರೊಂದಿಗೆ ಅನುಚಿತವಾಗಿ ವರ್ತಿಸುವ ಘಟನೆಗಳೂ ನಿರಂತರವಾಗಿ ನಡೆಯುತ್ತಿದೆ. ವಸ್ತುಗಳನ್ನು ಖರೀದಿಸುವಂತೆ ಒತ್ತಡ ಹಾಕುವುದು ಹಾಗೂ ಕಿರುಕುಳವನ್ನೂ ನೀಡಲಾಗುತ್ತಿದೆ ಎನ್ನುತ್ತಾರೆ ನಿತ್ಯ ಪ್ರಯಾಣಿಕರೊಬ್ಬರು. – ಪುನೀತ್ ಸಾಲ್ಯಾನ್