Advertisement

Theft Case ; ಚಿಟ್ಪಾಡಿ: ಗೂಡಂಗಡಿಯಿಂದ ಕಳವು

12:04 AM Feb 19, 2024 | Team Udayavani |

ಉಡುಪಿ: ಚಿಟ್ಪಾಡಿ ಗಜಾನನ ಹೊಟೇಲ್‌ ಬಳಿ ಸದಾನಂದ್‌ ಅವರು ಗೂಡಂಗಡಿ ನಡೆಸುತ್ತಿದ್ದು, ಫೆ.17-19ರ ನಡುವಿನ ರಾತ್ರಿ ಚಿಲಕ ಮುರಿದ ಕಳ್ಳರು ಬಿಸ್ಕೆಟ್‌, ಚಾಕೊಲೇಟ್‌ ಬಾಕ್ಸ್‌, ದೇವರ ಪೂಜೆ ಬಳಸುವ ವಸ್ತುಗಳು, ಇನ್ನಿತರ ತಿಂಡಿ ಪದಾರ್ಥ ಕಳವು ಮಾಡಿದ್ದಾರೆ. ಕಳವಾದ ವಸ್ತುಗಳ ಮೌಲ್ಯ 16,000 ರೂ. ಆಗಿದ್ದು, ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕೋಟ-ಸಾಸ್ತಾನದಲ್ಲಿ ಅಂಗಡಿಯಿಂದ ಕಳ್ಳತನ
ಕೋಟ: ಕೋಟ ಹಾಗೂ ಸಾಸ್ತಾನದಲ್ಲಿ ಅಂಗಡಿಯಲ್ಲಿ ಕಳ್ಳತನ ನಡೆದ ಘಟನೆ ಫೆ.17ರಂದು ಸಂಭವಿಸಿದೆ. ಚಿತ್ರಪಾಡಿ ಗ್ರಾಮದ ಕೋಟ ಮೂರುಕೈಯಲ್ಲಿರುವ ರವೀಂದ್ರ ಅವರಿಗೆ ಸೇರಿದ ಮೆಡಿಕಲ್ಸ್‌ವೊಂದರ ಬೀಗ ಒಡೆದ ಕಳ್ಳರು ಕ್ಯಾಶ್‌ ಡ್ರಾವರ್‌ ನಲ್ಲಿದ್ದ ಸುಮಾರು ಹತ್ತು ಸಾವಿರ ರೂ. ನಗದು ಹಣ ಕಳ್ಳತನ ಮಾಡಿದ್ದಾರೆ.
ಸಾಸ್ತಾನದಲ್ಲಿ ನಾರಾಯಣ ಎನ್ನುವವರಿಗೆ ಸೇರಿದ ಹಾರ್ಡವೇರ್‌ ಅಂಗಡಿಯಿಂದ 10 ಸಾವಿರ ರೂ. ಮೌಲ್ಯದ ಸಿಮೆಂಟ್‌ ಅನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next