Advertisement
ಚಿಕ್ಕಮಗಳೂರು: ಕರಾವಳಿ, ಮಲೆನಾಡು, ಬಯಲುಸೀಮೆ ವಿಭಿನ್ನ ಭೌಗೋಳಿಕ ಪ್ರದೇಶವನ್ನು ಹೊಂದಿರುವ ಉಡುಪಿ- ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರ ಅನೇಕ ವೈಶಿಷ್ಟ್ಯ ಹೊಂದಿದ್ದು, ಅದರಂತೆ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಪುರುಷ ಮತದಾರರಿಗೆಹೋಲಿಸಿದರೆ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರು ವುದು ಇಲ್ಲಿನ ವಿಶೇಷವಾಗಿದೆ.
Related Articles
Advertisement
ಉಡುಪಿ ಕರಾವಳಿ ಪ್ರದೇಶವನ್ನು ಹೊಂದಿದ್ದರೆ, ಚಿಕ್ಕಮಗ ಳೂರು ಜಿಲ್ಲೆ ಅಪ್ಪಟ ಮಲೆ ನಾಡು ಮತ್ತು ಬಯಲುಸೀಮೆ ಪ್ರದೇಶವನ್ನು ಒಳಗೊಂಡಿದೆ. ಏ.26ಕ್ಕೆ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊ ಳ್ಳಲಾಗಿದೆ. ಎರಡು ಜಿಲ್ಲೆಗಳು ಸೇರಿ 15,85,162 ಮತದಾರರನ್ನು ಒಳಗೊಂಡಿವೆ. ಇದರಲ್ಲಿ 8,16,910ಮಹಿಳಾ ಮತದಾರರನ್ನು ಹೊಂದಿದ್ದರೆ, 7,68,215 ಪುರುಷ ಮತದಾರರನ್ನು ಒಳಗೊಂಡಿದ್ದು, ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯ ಲ್ಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 8,19,234 ಒಟ್ಟು ಮತದಾರರಿದ್ದು, ಇವರಲ್ಲಿ 4,25,484 ಮಹಿಳಾ ಮತದಾದರರು ಹಾಗೂ 3,93, 738 ಪುರುಷ ಮತದಾರರಿದ್ದಾರೆ. ಇವರಲ್ಲಿ 31,746 ಮಹಿಳಾ ಮತದಾರರ ಸಂಖ್ಯೆ ಜಾಸ್ತಿ ಇದೆ. ಹಾಗೇ ಚಿಕ್ಕಮಗಳೂರು ಜಿಲ್ಲೆಯಲ್ಲಿ 7,65,928 ಒಟ್ಟು ಮತದಾರರಿದ್ದು, ಇವರಲ್ಲಿ 3,91,423 ಮಹಿಳೆಯರು ಹಾಗೂ 3,74,477 ಪುರುಷ ಮತದಾರರಿದ್ದು, 16,946 ಮಹಿಳಾ ಮತದಾರರು ಪುರುಷ ಮತದಾರಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 48695 ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರದಲ್ಲಿ ಮಹಿಳಾ ಮತದಾರರು ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು ಮಹಿಳಾ ಮತದಾರರ ಮನವೊಲಿಸಲು ಮುಂದಾಗಿದ್ದಾರೆ. ಅಭ್ಯರ್ಥಿಗಳ ಪ್ರಚಾರ ಕಾರ್ಯವೂ ಭರದಿಂದ ಸಾಗುತ್ತಿದ್ದು, ಮತದಾನದ ದಿನ ಸಮೀಪಿಸುತ್ತಿದ್ದಂತೆ ಎರಡು ಜಿಲ್ಲೆಗಳಲ್ಲಿ ರಾಜಕೀಯ ರಂಗು ಜೋರಾಗುತ್ತಿದೆ. ■ ಸಂದೀಪ ಜಿ.ಎನ್. ಶೇಡ್ಗಾರ್