ಉಡುಪಿ: ಚುನಾವಣೆ ಅಕ್ರಮ ತಡೆಯಲು ಆಯೋಗ ಎಲ್ಲ ಕಡೆಗಳಲ್ಲಿ ಹದ್ದಿನ ಕಣ್ಣು ಇರಿಸಿದ್ದು, ಜಿಲ್ಲೆಯ ವಿವಿಧೆಡೆ ಚೆಕ್‌ಪೋಸ್ಟ್ ಆರಂಭಿಸಿ, ತಪಾಸಣೆ ಬಿಗಿಗೊಳಿಸಲಾಗಿದೆ.
ಆಮಿಷ ಒಡ್ಡುವ ವಸ್ತುಗಳ ಸಾಗಾಟ, ಪೂರೈಕೆಯನ್ನು ತಡೆಯಲು ಜಿಲ್ಲಾದ್ಯಂತ 17 ಚೆಕ್‌ಪೋಸ್ಟ್‌ಗಳಲ್ಲಿ ದಿನಪೂರ್ತಿ ತಪಾಸಣೆಗೆ ಪೊಲೀಸರ ನಿಯೋಜನೆ ಮಾಡಲಾಗಿದೆ.
ಮಲೆನಾಡು ಸಂಪರ್ಕ, ಗಡಿಭಾಗ ಮತ್ತು ನಕ್ಸಲ್ ಬಾಧಿತ ಪ್ರದೇಶ ಕಾರ್ಕಳ ಭಾಗದಲ್ಲಿ ಚೆಕ್‌ಪೋಸ್ಟ್ ಸಂಖ್ಯೆಯನ್ನು ಹೆಚ್ಚಿಸಿರುವುದು ವಿಶೇಷ. ಬೈಂದೂರು ಕ್ಷೇತ್ರದ ಶಿರೂರು, ಕೊಲ್ಲೂರು, ಹೊಸಂಗಡಿಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದ್ದು, ಎಲ್ಲ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ಕುಂದಾಪುರ ಕ್ಷೇತ್ರದ ಕಂಡಲೂರು, ತೆಕ್ಕಟ್ಟೆ, ಉಡುಪಿ ಕ್ಷೇತ್ರದ ನೇಜಾರು, ಬಲೈಪಾದೆ, ಉದ್ಯಾವರ, ಅಲೆವೂರು, ಕಟಪಾಡಿ, ಕಾಪು ಕ್ಷೇತ್ರದ ಹೆಜಮಾಡಿ, ಮೂಡುಬೆಳ್ಳೆ, ಅಂಜಾರು ಮತ್ತು ಕಾರ್ಕಳ ಕ್ಷೇತ್ರದಲ್ಲಿ ನಾಡಾ³ಲು, ಸೋಮೇಶ್ವರ, ಸಾಣೂರು, ಮುರತ್ತಂಗಡಿ, ಈದು, ಹೊಸ್ಮಾರು, ಬೆಳ್ಮಣ್ ಭಾಗದಲ್ಲಿ ಚುನಾವಣ ಉದ್ದೇಶಕ್ಕಾಗಿಯೇ ಚೆಕ್‌ಪೋಸ್ಟ್ ರೂಪಿಸಲಾಗಿದೆ.
ಚೆಕ್‌ಪೋಸ್ಟ್‌ನಲ್ಲಿ ರಾತ್ರಿ -ಹಗಲು ಪಾಳಿಯಲ್ಲಿ ಪೊಲೀಸರು ದಿನದ 24 ಗಂಟೆ ಕರ್ತವ್ಯ ನಿರ್ವ ಹಿಸುತ್ತಿದ್ದಾರೆ. ಜಿಲ್ಲಾ ಕೇಂದ್ರವಾಗಿರುವ ಉಡುಪಿ ನಗರದಲ್ಲಿಯೂ ತಪಾಸಣೆ ಚುರುಕುಗೊಂಡಿದೆ. ಹೆಜಮಾಡಿಯಲ್ಲಿ ಮಂಗಳೂರು ಹೋಗಿ ಬರುವ ವಾಹನಗಳ ಮೇಲೆ ನಿಗಾ ಇಡಲಾಗುತ್ತಿದ್ದು, ವಾಹನಗಳ ತಪಾಸಣೆ, ದಾಖಲೆಗಳ ಪರಿಶೀಲನೆ ಕಾರ್ಯ ಚುರುಕುಗೊಂಡಿದೆ. ಪೊಲೀಸ್ ತಂಡ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದಲ್ಲೂ ವಿಶೇಷ ಗಸ್ತು ನಡೆಸುತ್ತಿದೆ.
ಗ್ರಾಮೀಣ ಭಾಗದಲ್ಲಿ ತಪಾಸಣೆ ಬಿಗಿ
ಗ್ರಾಮೀಣ ಭಾಗದಲ್ಲಿಯೂ ತಪಾಸಣೆ ಬಿಗಿಗೊಂಡಿದೆ. ಅಬಕಾರಿ ಅಕ್ರಮ ತಡೆ ಯಲು ಜಿಲ್ಲಾ ಅಬಕಾರಿ ಇಲಾಖೆ ವಿಶೇಷ ತಂಡ ರಚಿಸಿದ್ದು, ಅಕ್ರಮ ಮದ್ಯ ಕೂಟ, ಸಾಗಾಟದ ಮೇಲೆ ನಿಗಾ ಇರಿಸಿದೆ. ರಾತ್ರಿ ವೇಳೆ ವಾಹನಗಳ ತಪಾಸಣೆ ಚುರುಕುಗೊಂಡಿದೆ.
ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಚೆಕ್‌ಪೋಸ್ಟ್‌ಗಳಲ್ಲೂ ತಪಾಸಣೆ ಬಿಗಿಗೊಳಿಸಿ ದ್ದೇವೆ. ನೀತಿ ಸಂಹಿತೆ ಜಾರಿಯಾಗಿರುವುದರಿಂದ ಭದ್ರತೆಯ ಜತೆಗೆ ಸುರಕ್ಷೆಗೂ ಆದ್ಯತೆ ನೀಡಲಾಗುವುದು.
– ಹಾಕೆ ಅಕ್ಷಯ್ ಮಚ್ಚೀಂದ್ರ, ಎಸ್‌ಪಿ, ಉಡುಪಿ