Advertisement
ಮಹಾಲಕ್ಷ್ಮೀ ಬ್ಯಾಂಕ್ ನಿರಂತರ 14 ವರ್ಷಗಳಿಂದ ಅತಿ ಹೆಚ್ಚು ಡಿವಿಡೆಂಡ್ ನೀಡುವ ಕರಾವಳಿ ಭಾಗದ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೇ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಯಗಳಲ್ಲಿ ಕಾರ್ಯಕ್ಷೇತ್ರ ಹೊಂದಿದ್ದು, ಶೀಘ್ರದಲ್ಲಿಯೇ ಬೆಂಗಳೂರಿನಲ್ಲೂ ಶಾಖೆಯನ್ನು ಆರಂಭಿಸುವ ಯೋಜನೆ ಇದೆ ಎಂದು ಯಶ್‌ಪಾಲ್ ಹೇಳಿದರು.
ವರದಿ ವರ್ಷದಲ್ಲಿ ಆದಾಯ ತೆರಿಗೆಗೆ ಹಾಗೂ ನಿಯಮದಂತೆ ಇತರ ಸಲುವಳಿಗಳಿಗೆ ಅನುವು ಮಾಡುವ ಮೊದಲು 15.24 ಕೋ.ರೂ. ವ್ಯಾವಹಾರಿಕ ಲಾಭ ಗಳಿಸಿದ್ದು, ಅನುವು ಮಾಡಿದ ಅನಂತರ 5.92 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 2022-23ನೇ ವರ್ಷಾಂತ್ಯಕ್ಕೆ ಠೇವಣಿಯು 473 ಕೋ.ರೂ., ಸಾಲ ಮತ್ತು ಮುಂಗಡವು 338 ಕೋ.ರೂ.ಗೆ ತಲುಪಿದ್ದು ಒಟ್ಟು ವಹಿವಾಟು 9,463 ಕೋ.ರೂ., ದುಡಿಯುವ ಬಂಡವಾಳವು ರೂ. 552 ಕೋ.ರೂ. ಗೆ ಏರಿಕೆಯಾಗಿದೆ. ಬ್ಯಾಂಕ್ “ಎ’ ದರ್ಜೆಯಲ್ಲಿ ವರ್ಗೀಕೃತವಾಗಿದ್ದು, ಸದಸ್ಯರಿಗೆ ಶೇ. 15 ಡಿವಿಡೆಂಡ್ ಘೋಷಿಸಿದೆ ಎಂದರು. ಸಮ್ಮಾನ
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಅಂತಾರಾಷ್ಟ್ರೀಯ ದೇಹದಾಡ್ಯìಪಟು ನಿತ್ಯಾನಂದ ಕೋಟ್ಯಾನ್, ಶೈಕ್ಷಣಿಕ ಕ್ಷೇತ್ರದ ಸಾಧಕಿ ರಕ್ಷಿತಾ ಜೆ., ವಯೋನಿವೃತ್ತಿ ಹೊಂದಿದ ಬ್ಯಾಂಕಿನ ಸಿಬಂದಿಗಳಾದ ಪ್ರಭಾಕರ ಸಾಲ್ಯಾನ್, ನರೇಂದ್ರ ಸಾಲ್ಯಾನ್ ಅವರನ್ನು ಸಮ್ಮಾನಿಸಲಾಯಿತು.
Related Articles
Advertisement
ಲಕ್ಷ ಗ್ರಾಹಕರು, ಸಾವಿರ ಕೋಟಿ ರೂ. ಠೇವಣಿಮಹಾಲಕ್ಷ್ಮೀ ಬ್ಯಾಂಕ್ ಎಲ್ಲ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಸಾಧಿಸಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು ಗ್ರಾಹಕ ಸ್ನೇಹಿಯಾಗಿ ವ್ಯವಹಾರ ನಡೆಸುತ್ತಿದೆ. ಬ್ಯಾಂಕ್ ಮುಂದಿನ 5 ವರ್ಷಗಳಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ 1 ಲಕ್ಷ ಗ್ರಾಹಕರೊನ್ನೊಳಗೊಂಡು 1000 ಕೋ. ರೂ. ಠೇವಣಿ ಸಂಗ್ರಹಣೆಯ ಗುರಿ ಹೊಂದಿದೆ ಎಂದು ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ ತಿಳಿಸಿದರು.