Advertisement
ಕೃಷ್ಣಾಪುರ ಮಠದಲ್ಲಿ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಒಂದು ಭತ್ತದ ಮುಡಿಯನ್ನು ಚಿನ್ನದ ಪಾಲಕಿಯಲ್ಲಿರಿಸಿ, ಉಳಿದ ಭತ್ತದ ಮುಡಿಗಳನ್ನು ಹೊತ್ತೂಯ್ದು ಮೆರವಣಿಗೆ ನಡೆಯಿತು. ಚಂದ್ರಮೌಳೀಶ್ವರ, ಅನಂತೇಶ್ವರ, ಕೃಷ್ಣಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಭತ್ತದ ಮುಡಿಗಳನ್ನು ಕೃಷ್ಣಮಠದ ಬಡಗುಮಾಳಿಗೆ ಯಲ್ಲಿರಿಸಿ ವೈದಿಕರು ಪೂಜೆ ಸಲ್ಲಿಸಿದರು. ನವಗ್ರಹ ದಾನಗಳನ್ನು ನೀಡಿದ ಬಳಿಕ ಮುಹೂರ್ತ ನಡೆಸಲಾಯಿತು. ಬಳಿಕ ಕಟ್ಟಿಗೆ ರಥಕ್ಕೆ ಮುಗುಳಿ (ಶಿಖರ) ಮುಹೂರ್ತ ನಡೆಸಲಾಯಿತು.
ಜಿಲ್ಲೆಯಲ್ಲಿ ಈಗಾಗಲೇ ಶೇ.95ರಷ್ಟು ಪ್ರಥಮ ಡೋಸ್ ವ್ಯಾಕ್ಸಿನೇಶನ್ ನಡೆದಿ ರುವ ಕಾರಣ ಪರ್ಯಾಯೋತ್ಸವಕ್ಕೆ ತೊಂದರೆಯಾಗದು. ತಯಾರಿಯನ್ನು ಸಹಜವಾಗಿ ಮಾಡಲಾಗುತ್ತದೆ. ಸರಕಾರ ಕೊನೇ ಕ್ಷಣದಲ್ಲಿ ಯಾವ ನಿರ್ದೇಶನ ನೀಡುತ್ತದೋ ಅದರಂತೆ ನಡೆಸಲಾಗುತ್ತದೆ ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಕೆ. ರಘುಪತಿ ಭಟ್ ತಿಳಿಸಿದರು. ಹೊರೆಕಾಣಿಕೆ
ಹೊರೆಕಾಣಿಕೆಯು ಜ. 11ರಿಂದ 16ರ ವರೆಗೆ ನಡೆಯಲಿದೆ. ಕಡಿಮೆ ದಿನ ಇರುವು ದರಿಂದ ದಿನದಲ್ಲಿ 3 ಕಡೆಗಳ ಹೊರೆಕಾಣಿಕೆ ನಡೆಯಲಿದೆ ಎಂದು ಪ್ರ.ಕಾರ್ಯದರ್ಶಿ ವಿಷ್ಣುಪ್ರಸಾದ ಪಾಡಿಗಾರ್ ತಿಳಿಸಿದರು.
Related Articles
Advertisement
ಇದನ್ನೂ ಓದಿ:ರಾವತ್ ಒಬ್ಬ ಅತ್ಯುತ್ತಮ ಸೈನಿಕ,ನಿಜವಾದ ದೇಶಭಕ್ತ: ಪ್ರಧಾನಿ ಮೋದಿ
195 ಟನ್ ಕಟ್ಟಿಗೆ ರಥಮಧ್ವಸರೋವರದ ದಂಡೆಯಲ್ಲಿ ನೂತನವಾಗಿ ನಿರ್ಮಿಸಿದ ಕಟ್ಟಿಗೆ ರಥಕ್ಕೆ 195 ಟನ್ ಕಟ್ಟಿಗೆಯನ್ನು ಬಳಸಲಾಗಿದೆ. ಮುಗುಳಿ ಸಹಿತ 55 ಅಡಿ ಎತ್ತರದ ರಥದ ಬುಡದ ವ್ಯಾಸ 20 ಅಡಿ, ಮಧ್ಯದ ವ್ಯಾಸ 30 ಅಡಿ. ಚಳಿ, ಮಳೆ, ಬಿಸಿಲನ್ನು ಸಹಿಸಿಕೊಳ್ಳುವ ಗೋಣಿನಾರಿನ ಉಂಡೆಯನ್ನು ಮಾಡಿ ಅದರ ಮೇಲೆ ಬಣ್ಣ ಕೊಡಲಾಗಿದೆ. ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತದ ಬಳಿಕ ನಾಲ್ಕನೆಯದಾದ ಭತ್ತದ ಮುಹೂರ್ತ ನಡೆದ ದಿನವೇ ಕಟ್ಟಿಗೆ ರಥಕ್ಕೆ ಮುಗುಳಿ (ಶಿಖರ) ಇರಿಸಿ ಮುಹೂರ್ತ ಮಾಡಲಾಯಿತು. ಮಠದ ಮೇಸಿŒ ಪದ್ಮನಾಭ ಎಸ್. ಅವರು ಮುಹೂರ್ತ ಮಾಡಿದರು. ಕಟ್ಟಿಗೆ ರಥದ ಮುಹೂರ್ತವನ್ನು ಜು. 11ರಂದು ನಡೆಸಲಾಗಿತ್ತು. ಸುಮಾರು ಐದು ತಿಂಗಳಲ್ಲಿ ರಥವನ್ನು ನಿರ್ಮಿಸಲಾಗಿದೆ.