ಉಡುಪಿ: ಮಂಗಳವಾರದಿಂದ ಆರಂಭಗೊಂಡ ಅಂತರ್‌ಜಿಲ್ಲಾ ಕೆಎಸ್ಸಾರ್ಟಿಸಿ ಯಾನ ಬುಧವಾರವೂ ಮುಂದುವರಿದಿದೆ.
ಉಡುಪಿಯಿಂದ ಬುಧವಾರ ಬೆಂಗಳೂರಿಗೆ ಎಂಟು ಬಸ್ಸುಗಳು ತೆರಳಿವೆ. ಶಿವಮೊಗ್ಗಕ್ಕೆ ಮೂರು, ಹುಬ್ಬಳ್ಳಿಗೆ ಎರಡು, ಮೈಸೂರಿಗೆ ಒಂದು ಬಸ್ಸುಗಳು ಸಂಚರಿಸಿವೆ.
ಸ್ಥಳೀಯವಾಗಿ ಉಡುಪಿಯಿಂದ ಕಾರ್ಕಳ, ಕುಂದಾಪುರ, ಹೆಬ್ರಿ, ಕಾಪು- ಹೆಜಮಾಡಿ ಕಡೆಗೆ ಕೆಎಸ್ಸಾರ್ಟಿಸಿ ಬಸ್ಸುಗಳು ಓಡಾಡಿವೆ. ವಿವಿಧ ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಕಡಿಮೆ ಇತ್ತು. ಲಾಕ್‌ಡೌನ್ ಆರಂಭವಾಗುವ ಮೊದಲು ಉಡುಪಿ-ಕುಂದಾಪುರ- ಮಂಗಳೂರಿಗೆ ನಿಮಿಷಕ್ಕೊಮ್ಮೆ ಓಡಾಡುತ್ತಿದ್ದ ಬಸ್ಸುಗಳು ಈಗ ಒಂದು ಗಂಟೆಗೆ ಒಮ್ಮೆ ಬಸ್ಸುಗಳು ಸಂಚರಿಸುತ್ತಿವೆ. ಹೀಗಾಗಿ ಕೆಲವು ಬಸ್ಸುಗಳಲ್ಲಿ ಜನಸಂದಣಿಯೂ ಇತ್ತು. ಭಾರತೀ ಬಸ್ ಎಂದಿನಂತೆ ಸಂಚರಿಸುತ್ತಿದೆ.
ಮಲ್ಪೆ, ಶಂಕರನಾರಾಯಣ, ಬೈಂದೂರು ಮೊದಲಾದೆಡೆಗಳಿಂದ ಝಾರ್ಖಂಡ್‌ಗೆ ಹೋಗುವ ಪ್ರಯಾಣಿಕರನ್ನು ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಉಡುಪಿ ರೈಲ್ವೆ ನಿಲ್ದಾಣಕ್ಕೆ ಬಿಡಲಾಯಿತು.