ಉಡುಪಿ: ಶ್ರೀ ಕೃಷ್ಣನ ಸ್ವರ್ಣ ರಥಕ್ಕೆ ಬೇಕಾದ ಚಿನ್ನವನ್ನು ತಮ್ಮ ತಮ್ಮ ಶಕ್ತ್ಯನುಸಾರ ನೀಡಲು ಉತ್ಸುಕರಾದ ಭಕ್ತರಿಗಾಗಿ ಖರೀದಿಸಲು ಬೇಕಾದ ಚಿನ್ನದ ನಾಣ್ಯ ಸಂಗ್ರಹದ ಸ್ವರ್ಣಾಲಯವನ್ನು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಗೌರವ ಉಪಸ್ಥಿತಿಯಲ್ಲಿ ಭಂಡಾರಿಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಗುರುವಾರ ದೀಪ ಬೆಳಗಿಸಿ ಲೋಕಾರ್ಪಣೆ ಗೊಳಿಸಿದರು .
ಮೇ 10 ರಂದು(ಶುಕ್ರವಾರ) ಅಕ್ಷಯ ತೃತೀಯದ ಪರ್ವ ದಿನವಾದ ಪ್ರಯುಕ್ತ ಪೂಜ್ಯ ಪರ್ಯಾಯ ಶ್ರೀಪಾದರ ಅಪೇಕ್ಷೆಯಂತೆ, ಭಕ್ತರ ಕೋರಿಕೆಯಂತೆ ಅತಿ ಶೀಘ್ರದಲ್ಲಿ ಈ ಕೌಂಟರ್ ತೆರೆಯಲಾಯಿತು.
ಪರ್ಯಾಯ ಶ್ರೀಪಾದರು ಸಂಕಲ್ಪಿಸಿರುವ ಶ್ರೀ ಕೃಷ್ಣನಿಗೊಂದು ಸ್ವರ್ಣ ಪಾರ್ಥಸಾರಥಿ ರಥಕ್ಕೆ ದೇಣಿಗೆ ನೀಡ ಬಯಸುವ ಭಕ್ತರು ಈ ಅಕ್ಷಯ ತೃತೀಯದ ಪರ್ವ ಕಾಲವನ್ನು ಸ್ವರ್ಣ ದಾನ ಮಾಡುವ ಮೂಲಕ ಸದುಪಯೋಗ ಪಡೆದು ಕೊಂಡು ಶ್ರೀಕೃಷ್ಣನ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಪೂಜ್ಯ ಪರ್ಯಾಯ ಶ್ರೀಪಾದರು ಕರೆ ನೀಡಿದ್ದಾರೆ .
ಕಾರ್ಯಕ್ರಮದಲ್ಲಿ GST ಕಮಿಷನರ್ ಡಾ.ಕುಮಾರ್ ನಾಯಕ್ ಮತ್ತು ಉಡುಪಿ ಜ್ಯೂವೆಲರ್ ಅಸೋಸಿಯೇಷನ್ ಅಧ್ಯಕ್ಷರಾದ ವಸಂತ್ ರವರು ಉಪಸ್ಥತಿತರಿದ್ದು ಪ್ರಥಮ ಸ್ವರ್ಣ ಖರೀದಿ ಮೂಲಕ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು.ಪೂಜ್ಯ ಪುತ್ತಿಗೆ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರತೀರ್ಥರು ಉಪಸ್ಥಿತರಿದ್ದು ಹರಸಿದರು.