Advertisement

Udupi: ಗಾಂಜಾ ಮಾರಾಟಕ್ಕೆ ಯತ್ನ: ಓರ್ವ ಬಂಧನ

07:54 PM Oct 27, 2024 | Team Udayavani |

ಉಡುಪಿ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಅಬ್ದುಲ್‌ ಜಬ್ಟಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಪೆರಂಪಳ್ಳಿಯ ಬಳಿ ಆರೋಪಿಯು ಸ್ಕೂಟರ್‌ನಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಬೆನ್ನಿಗೆ ಹಾಕುವ ಚೀಲದಲ್ಲಿ ಮಾರಾಟ ಮಾಡಲು ನಿಂತಿದ್ದ.

ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ಆತನಿಂದ ಯಾವುದೇ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 2.344 ಕೆ.ಜಿ. ತೂಕದ ಗಾಂಜಾ, ಮೊಬೈಲ್‌ ಪೋನ್‌, ಗಾಂಜಾವನ್ನು ಸಾಗಾಟ ಮಾಡಲು ಬಳಸಿದ್ದ ಬ್ಯಾಗ್‌, ಪ್ಲಾಸ್ಟಿಕ್‌ ಕವರ್‌, ತೂಕದ ಯಂತ್ರ, ಚೂರಿ, 5810 ರೂ. ಮತ್ತು ಗಾಂಜಾ ಸಾಗಾಟಕ್ಕೆ ಬಳಸಿರುವ ಸ್ಕೂಟರ್‌ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯು ಅಕ್ರಮ್‌ ಭಟ್ಕಳ ಎಂಬಾತನಿಂದ ಗಾಂಜಾ ಖರೀದಿಸಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next