Advertisement

Udupi: ನ್ಯಾಯಾಲಯದ ಆವರಣದೊಳಗೆ ಹಲ್ಲೆ

07:33 PM Jun 09, 2023 | Team Udayavani |

ಉಡುಪಿ: ನ್ಯಾಯಾಲಯದ ಆವರಣದೊಳಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

Advertisement

ಕೊಡವೂರಿನ ಕುಶಾಲಾಕ್ಷಿ ಪೂಜಾರಿಯವರು ದಾಂಪತ್ಯ ಜೀವನದಲ್ಲಿ ವೈಮನಸ್ಸು ಉಂಟಾಗಿ ನ್ಯಾಯಾಲಯದಲ್ಲಿ ಜೀವನ ನಿರ್ವಹಣೆಗಾಗಿ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಜೂ. 7ರಂದು ಸಂಬಂಧಿ ಜಯ ಪೂಜಾರಿಯವರೊಂದಿಗೆ ಕುಶಾಲಾಕ್ಷಿಯವರು ನ್ಯಾಯಾಲಯದಿಂದ ವಾಪಸು ಹೋಗುವ ಸಮಯದಲ್ಲಿ ಉಡುಪಿ ನ್ಯಾಯಾಲಯದ ಆವರಣದ ಒಳಗೆ ಇರುವ ಪಾರ್ಕಿಂಗ್‌ ಸ್ಥಳದ ಸಮೀಪ ಕುಶಾಲಾಕ್ಷಿಯವರಿಗೆ ಆರೋಪಿ ಸತೀಶ್‌ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದು, ಈ ವೇಳೆ ಜಯ ಪೂಜಾರಿ ಅವರು ತಡೆಯಲು ಹೋದಾಗ ಆರೋಪಿ ಅವರ ಎದೆಗೆ ಕಾಲಿನ ಬೂಟಿನಿಂದ ಒದ್ದು ನೆಲಕ್ಕೆ ಬೀಳಿಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾಗಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿದೂರು
ಉಡುಪಿ: ಸತೀಶ್‌ ಶೇರಿಗಾರ್‌ ಅವರು ಉಡುಪಿ ನ್ಯಾಯಾಲಯದ ಆವರಣದಲ್ಲಿರುವ ಕಾರ್‌ ಪಾರ್ಕಿಂಗ್‌ಗೆ ತನ್ನ ಕಾರಿನಲ್ಲಿ ಹೊರಡುತ್ತಿರುವಾಗ ಆರೋಪಿಗಳಾದ ಜಯ ಪೂಜಾರಿ ಮತ್ತು ಕುಶಾಲಾಕ್ಷಿ ಅವರು ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ ಎಂದು ಸತೀಶ್‌ ಶೇರಿಗಾರ್‌ ನಗರ ಠಾಣೆಗೆ ಪ್ರತಿದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next