Advertisement

Ashtami Special: ಜನರಿಂದ ಹಣ ಪಡೆಯದೆ ಅಷ್ಟಮಿ ಶುಭಾಶಯ ಹಂಚಿಕೊಂಡ ರಾಕ್ಷಸ ವೇಷಧಾರಿಗಳು

01:09 PM Sep 08, 2023 | Team Udayavani |

ಉಡುಪಿ: ಉಡುಪಿ: ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಸಲುವಾಗಿ, ಆನೇಕ ಮಂದಿ ವಿದ ವಿಧವಾದ ವೇಷಗಳನ್ನು ಹಾಕಿಕೊಂಡು ಅದಕ್ಕೆ ತಕ್ಕ ಕಾಂಚಾಣ ಪಡೆಯುತ್ತಾರೆ. ಇನ್ನು ಕೆಲವರು ವೇಷ ಹಾಕಿ ಬಂದ ಹಣವನ್ನು ಒಳ್ಳೆಯ ಕಾರ್ಯಕ್ಕೆ (ವೈದ್ಯಕೀಯ ಚಿಕಿತ್ಸೆ) ಉಪಯೋಗಿಸುವ ಕೆಲಸ ಮಾಡುತ್ತಾರೆ. ಆದರೆ ಇಲ್ಲೊಂದು ಯುವಕರ ತಂಡ ರಕ್ಕಸರ ವೇಷ ಧರಿಸಿ ಮನೆ ಮನೆಗೆ ತೆರಳಿ ಮನೆಯ ಸದಸ್ಯರ ಬಳಿ ಹಣ ಪಡೆಯದೇ ಬದಲಿಗೆ ವೇಷಧಾರಿಗಳೇ ಮನೆಯ ಸದಸ್ಯರಿಗೆ ಶ್ರೀ ಕೃಷ್ಣ ಜನ್ಮಾಷ್ಠಮಿಯ ಶುಭಾಶಯ ಕೋರಿರುವ ಅಪರೂಪದ ಸನ್ನಿವೇಶ ಬೆಳಕಿಗೆ ಬಂದಿದೆ..

Advertisement

ಹೌದು ಬೈಲೂರಿನ ಶ್ರೀ ಧೂಮಾವತಿ ದೈವಸ್ಥಾನದ ಯುವಕರಾದ ಮನೋಜ್, ರಾಜೇಶ್ ಹಾಗೂ ವಸಂತ್ ರಾಜ್ ಇವರು ಅಷ್ಟಮಿಯ ದಿನದಂದು ರಕ್ಕಸರ ವೇಷ ಧರಿಸಿ, ಮನೆ ಮನೆಗಳಿಗೆ ತೆರಳಿ ಜನರಲ್ಲಿ ಯಾವುದೇ ಹಣ ಪಡೆಯದೆ, ನಮ್ಮ ಆಡಳಿತ ಮಂಡಳಿಯ ಸದಸ್ಯರ ಹಾಗೂ ಇತರರ ಮನೆಗಳ ಸದಸ್ಯರಿಗೆ ಹಬ್ಬದ ಶುಭಾಶಯಗಳನ್ನು ಹೇಳಿ ನಿರ್ಗಮಿಸಿದ್ದಾರೆ.

ಉಡುಪಿ ನಗರದಲ್ಲಿ ನಡೆದ ಒಂದು ವಿಶಿಷ್ಟ ಕಾರ್ಯಕ್ರಮವು ಸೂರ್ಯ ಚಿಕನ್ಸ್ ನ ಶ್ರೀ ಅರುಣ್ ಶೆಟ್ಟಿಗಾರ್ ಅವರ ಸಂಪೂರ್ಣ ಸಹಕಾರ ದೊಂದಿಗೆ ಯಶಸ್ವಿಯಾಗಿ ನಡೆಯಿತು.

ಇದನ್ನೂ ಓದಿ: Shah Rukh Khan; ಬಾಲಿವುಡ್ ದಾಖಲೆ ಅಳಿಸಿದ ‘ಜವಾನ್’; ಒಂದೇ ದಿನದಲ್ಲಿ 150 ಕೋಟಿ ಕಲೆಕ್ಷನ್

Advertisement

Udayavani is now on Telegram. Click here to join our channel and stay updated with the latest news.

Next