ಹೊಸಪೇಟೆ: ದಾಸರಲ್ಲಿಯೇ ಶ್ರೇಷ್ಠರಾದ ಕನಕದಾಸ ಮತ್ತು ಉಡುಪಿ ಶ್ರೀಕೃಷ್ಣ ದೇವಸ್ಥಾನದ ನಡುವೆ ಐತಿಹಾಸಿಕ ಸಂಬಂಧ ವಿದ್ದು, ಇವರ ನಡುವೆ ಹುಳಿ ಹಿಂಡುವ ಕೆಲಸ ವನ್ನು ಯಾರೂ ಮಾಡಬಾರದು ಎಂದು ಉಡುಪಿ ಪಲಿಮಾರು ಮಠಾಧೀಶರಾದ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ಶ್ರೀ ಉತ್ತರಾದಿ ಮಠದ ಸಭಾಂಗಣದಲ್ಲಿ ಉಡುಪಿ ಪರ್ಯಾಯ ಪೂಜಾ ಮಹೋತ್ಸವ ಸ್ವಾಗತ ಸಮಿತಿ ಹಾಗೂ ತಾಲೂಕು ಬ್ರಾಹ್ಮಣ ಸಮಾಜದ ಸಹಯೋಗದಲ್ಲಿ ಪರ್ಯಾಯ ಪೂರ್ವ ಸಂಚಾರ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಉಡುಪಿ ಶ್ರೀಕೃಷ್ಣ ದೇವಸ್ಥಾನದಲ್ಲಿ ದಿನದ 24 ಗಂಟೆಯೂ ಶ್ರೀಕೃಷ್ಣನ ದರ್ಶನ ಪಡೆ ಯುವ ಭಾಗ್ಯವನ್ನು ಕನಕದಾಸರು ಕನಕನ ಕಿಂಡಿ ಮೂಲಕ ನೀಡಿದ್ದರೆ, ಶ್ರೀಕೃಷ್ಣ ಉಡುಪಿ ಯಲ್ಲಿ ಕನಕದಾಸರ ದೇವಸ್ಥಾನ ನಿರ್ಮಿಸಲು ಕಾರಣೀಕರ್ತರಾಗಿ¨ªಾರೆ. ಶ್ರೀಕೃಷ್ಣನನ್ನು ತಿರುಗಿ ಸುವ ಶಕ್ತಿ ಕನಕದಾಸರಿಗೆ ಇತ್ತು. ಕನಕದಾಸರು ಮತ್ತು ಶ್ರೀಕೃಷ್ಣ ನಡುವೆ ಉತ್ತಮ ಬಾಂಧವ್ಯ ಇತ್ತು. ಕನಕದಾಸರು ಅಂದು ಶ್ರೀಕೃಷ್ಣನಿಗೆ ನೀಡುತ್ತಿದ್ದ ಗಂಜಿ ಅರ್ಪಣೆ ಕಾರ್ಯಕ್ರಮ ಇಂದು ಕೂಡ ಶ್ರೀಕೃಷ್ಣ ದೇವಸ್ಥಾನದಲ್ಲಿ ನಡೆದುಕೊಂಡು ಬರುತ್ತಿದೆ. ಇಂದು ಶ್ರೀಕೃಷ್ಣ ದೇವಸ್ಥಾನದಲ್ಲಿ ಏನೇ ಅರ್ಪಣೆ ಮಾಡಿದರೂ ಅದರ ಜೊತೆಗೆ ಗಂಜಿಯನ್ನು ಅರ್ಪಣೆ ಮಾಡ ಲಾಗುತ್ತಿದೆ. ಇದನ್ನು ಪುರಾತನ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಉಡುಪಿ ಶ್ರೀಕೃಷ್ಣನಿಲ್ಲದೆ ಕನಕನಿಲ್ಲ, ಕನಕ ನಿಲ್ಲದೆ ಉಡುಪಿ ಇಲ್ಲ. ಅವೆರಡರ ಸಂಬಂಧ ಶಾಶ್ವತವಾದದ್ದು. ಜಗತ್ತಿನ ಯಾವುದೇ ದೇವ ಸ್ಥಾನಕ್ಕೆ ತೆರಳಿದರೂ ದೇವರ ದರ್ಶನಕ್ಕೆ ಸಮಯ ನಿಗದಿ ಇದೆ. ಆದರೆ ಉಡುಪಿ ಶ್ರೀಕೃಷ್ಣ ದರ್ಶನವನ್ನು ಮಧ್ಯರಾತ್ರಿ ಹೋದರೂ ಮಾಡಬಹುದು. ಇದಕ್ಕೆ ಕಾರಣ ಕನಕದಾಸರ ಭಕ್ತಿಗೆ ಮೆಚ್ಚಿದ ಶ್ರೀಕೃಷ್ಣ ದರ್ಶನ ನೀಡಿದ್ದೇ ಸಾಕ್ಷಿ. ಕನಕ ಕಿಂಡಿ ಮೂಲಕ ಶ್ರೀಕೃಷ್ಣ ದರ್ಶನ ಯಾವುದೇ ಸಂದರ್ಭದಲ್ಲಿಯೂ ಮಾಡಬಹುದು ಎಂದರು.
ಉತ್ತರ ಭಾರತದಲ್ಲಿ ರಾಮ ಜನ್ಮಭೂಮಿ ಇದ್ದರೆ, ದಕ್ಷಿಣದಲ್ಲಿ ಹನುಮಂತ ಅವತರಿಸಿದ ಸ್ಥಳ ಹಂಪಿಯಾಗಿದೆ. ಹಂಪಿ ಅತ್ಯಂತ ಪುಣ್ಯ ಸ್ಥಳವಾಗಿದೆ. ಇಲ್ಲಿಗೆ ರಾಮ, ಸೀತೆ, ಲಕ್ಷ್ಮಣ ಬಂದು ಹೋಗಿದ್ದಾರೆ. ಇದಕ್ಕೆ ಹಲವಾರು ಕುರುಹುಗಳಿವೆ. 2018ರ ಜನವರಿ 18ರಿಂದ ಉಡುಪಿಯಲ್ಲಿ ಎರಡು ವರ್ಷಗಳ ಕಾಲ ಶ್ರೀಕೃಷ್ಣನ ಪೂಜೆ ನಡೆಯಲಿದೆ. ಈ ಸಂದರ್ಭದಲ್ಲಿ ನಿತ್ಯ ಲಕ್ಷ ತುಳಸಿ ಅರ್ಚನೆ, ಎರಡು ವರ್ಷಗಳ ಕಾಲ ನಿರಂತರ ದಿನದ 24 ತಾಸು ಅಖಂಡ ಭಜನೆ ನಡೆಯಲಿದೆ. ಇದಕ್ಕೆ ತಿರುಪತಿ, ತಿರುಮಲ ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಮಂತ್ರಾಲಯ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ಗಳಿಂದ ಭಜನಾ ಮಂಡಳಿಗಳು ಭಾಗವಹಿಸಲಿದ್ದಾರೆ. ಈ ಅವಧಿಯಲ್ಲಿ ಶ್ರೀಕೃಷ್ಣ ಮಠದ ಚಾವಣಿಗೆ 100 ಕೆ.ಜಿ. ಬಂಗಾರದ ಹೊದಿಕೆ ಅಳವಡಿಸಲು ಸಂಕಲ್ಪಿಸಲಾಗಿದೆ. ಇದರ ಜತೆಗೆ ಹಲವು ಸಾಮಾಜಿಕ ಕಾರ್ಯಗಳು ಉಡುಪಿಯಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದರು.