Advertisement

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

11:34 PM Jun 15, 2024 | Team Udayavani |

ಉಡುಪಿ: ಜಿಲ್ಲೆಯ ಎಸೆಸೆಲ್ಸಿ ಫ‌ಲಿತಾಂಶದಲ್ಲಿ ಶ್ರೇಷ್ಠತೆ ಕಾಪಾಡಿಕೊಳ್ಳಲು ಶೈಕ್ಷಣಿಕ ವರ್ಷದ ಅರಂಭದಿಂದಲೇ ವಿನೂತನ ಪ್ರಯೋಗಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತ ಇಲಾಖೆ ಮುಂದಾಗಿದೆ. ಇದಕ್ಕಾಗಿ ಪ್ರತೀ ವಿದ್ಯಾರ್ಥಿಗಳಿಗೂ ಇ- ಮೇಲ್‌ ಐಡಿ ಸೃಜಿಸಿ, ರಜಾ ದಿನದ ಪಾಠವೂ ತಪ್ಪಿಸದಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ.

Advertisement

ರಾಜ್ಯದಲ್ಲೇ ಪ್ರಥಮ ಸ್ಥಾನ ದಲ್ಲಿರುವ ಉಡುಪಿ ಜಿಲ್ಲೆ, ಆ ಸಾಧನೆಯನ್ನು ಉಳಿಸಿಕೊಂಡು, ಫ‌ಲಿತಾಂಶದಲ್ಲಿ ಇನ್ನಷ್ಟು ಸುಧಾರಣೆ ಕಂಡುಕೊಳ್ಳಲು ಈ ಯೋಜನೆ ಜಾರಿಗೊಳಿಸುತ್ತಿದೆ.

ಜಿಲ್ಲೆಯಲ್ಲಿ ಸುಮಾರು 14 ಸಾವಿರ ವಿದ್ಯಾರ್ಥಿಗಳು ಎಸೆಸೆಲ್ಸಿಯ ಲ್ಲಿದ್ದಾರೆ. ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಈ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಎಲ್ಲ ಸರಕಾರಿ ಪ್ರೌಢಶಾಲೆಗಳಲ್ಲೂ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಬೆಳಗಿನ ಅವಧಿಯಲ್ಲಿ ವಿಶೇಷ ತರಗತಿ ಆರಂಭಿಸಿದ್ದು, ಶೈಕ್ಷಣಿಕ ವರ್ಷ ಆರಂಭ ದಿಂದಲೇ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗೆ ಸಜ್ಜು ಮಾಡಲಾಗುತ್ತಿದೆ.

9ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಹೇಗಿತ್ತು ಎಂಬ ಮಾಹಿತಿ ಪಡೆದು, ಅದರ ಆಧಾರದಲ್ಲಿ ಎಸೆಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿ ಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಯಾವ ವಿಷಯದಲ್ಲಿ ಯಾವ ವಿದ್ಯಾರ್ಥಿ ಮುಂದಿದ್ದಾರೆ ಮತ್ತು ಯಾರು ಸ್ವಲ್ಪ ಸುಧಾರಿಸಬೇಕಿದೆ ಎಂಬ ಪಟ್ಟಿ ಸಿದ್ಧವಾಗುತ್ತಿದೆ. ಇದಾದ ಬಳಿಕ ವಿದ್ಯಾರ್ಥಿಗಳಿಗೆ ವಿಷಯವಾರು ವಿಶೇಷ ತರಬೇತಿ ನೀಡಲಾಗುತ್ತದೆ.

ಪ್ರತೀ ವಿದ್ಯಾರ್ಥಿಗೂ ಇ-ಮೇಲ್‌
ಮೊದಲ ಬಾರಿಗೆ ಜಿಲ್ಲೆಯ ಎಲ್ಲ ಎಸೆಸೆಲ್ಸಿ ವಿದ್ಯಾರ್ಥಿಗಳಿಗೂ ಶಾಲೆಯಿಂ ದಲೇ ಇ-ಮೇಲ್‌ ಅಕೌಂಟ್‌ ತೆರೆದು ಕೊಡಲಾಗುತ್ತಿದೆ. ಈ ಇ-ಮೇಲ್‌ಗೆ ಶಾಲೆಯಿಂದ ಕಲಿಕೆಗೆ ಸಂಬಂಧಿಸಿದ ವೀಡಿಯೋಗಳನ್ನು ಕಳಿಸಲಾಗುತ್ತದೆ. ವಿದ್ಯಾರ್ಥಿಗಳು ತಮಗೆ ಬೇಕಾದದ್ದನ್ನು ಡೌನ್‌ಲೋಡ್‌ ಮಾಡಿಕೊಂಡು ಅಧ್ಯಯನ ಮಾಡಬಹುದು.

Advertisement

ಆರೋಗ್ಯ ಸಮಸ್ಯೆ ಸೇರಿದಂತೆ
ವಿವಿಧ ಕಾರಣಕ್ಕೆ ವಿದ್ಯಾರ್ಥಿಗಳು ರಜೆ ಮಾಡುವುದು ಸಹಜ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ಹಿನ್ನಡೆಯಾಗಬಾರದು ಎಂದು ಆ ದಿನದ ವೀಡಿಯೋ ಪಾಠವನ್ನು ವಿದ್ಯಾರ್ಥಿಗೆ ಇ-ಮೇಲ್‌ ಮಾಡಲಾಗುತ್ತದೆ. ಅನಿವಾರ್ಯ ಕಾರಣದಿಂದ ಶಾಲೆಗೆ ಹೋಗದವರು , ತರಗತಿ ಶಿಕ್ಷಣದಿಂದ ವಂಚಿತರಾಗದೇ ಇರುವಂತೆ ನೋಡಿಕೊಳ್ಳುವುದು ಇದರ ಉದ್ದೇಶ ಎನ್ನುತ್ತಾರೆ ಅಧಿಕಾರಿಗಳು.

ಆಫ್ ಲೈನ್‌ ಆ್ಯಂಡ್‌ ಆನ್‌ ಲೈನ್‌
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಬೋಧಿಸುವ ಜತೆಗೆ ವಿಷಯ ತಜ್ಞರ ವಿಡಿಯೋ ತರಗತಿಗಳು ಶೈಕ್ಷಣಿಕ ವರ್ಷ ಪೂರ್ತಿ ಸಿಗಲಿವೆ. ಇದಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಈಗಾಗಲೇ ವಿಷಯ ತಜ್ಞರಿಂದ ಆಯಾ ವಿಷಯದ ಪಾಠಗಳನ್ನು ಚಿತ್ರೀಕರಿಸಲಾಗಿದೆ. ಶಾಲೆಯಲ್ಲಿ ಶಿಕ್ಷಕರು ಒಂದೊಂದು ಪಾಠ ಮುಗಿಸುತ್ತಿದ್ದಂತೆ ಅಥವಾ ವಾರಾಂತ್ಯದಲ್ಲಿ ವೀಡಿಯೋ ತರಗತಿಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ . ಯಾವುದೇ ಸಂಶಯಗಳಿದ್ದರೂ ಅಲ್ಲಿಯೇ ಬಗೆಹರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ.

ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗೆ ಸಜ್ಜುಗೊಳಿಸಲು ಹಂತಹಂತ ವಾಗಿ ಕೆಲವು ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಎಲ್ಲ ಶಾಲೆಗಳಲ್ಲೂ ವಿಶೇಷ ತರಗತಿ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ವೀಡಿಯೋ ಆಧಾ ರಿತ ಕಲಿಕೆಯನ್ನೂ ಕೈಗೊಳ್ಳಲಾಗುತ್ತಿದೆ.
– ಕೆ. ಗಣಪತಿ, ಡಿಡಿಪಿಐ, ಉಡುಪಿ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next