Advertisement

ಉಡುಪಿ: 7 ಮಂದಿ ಆಸ್ಪತ್ರೆಗೆ ದಾಖಲು

02:27 AM Mar 29, 2020 | Sriram |

ಉಡುಪಿ: ಶಂಕಿತ ಕೋವಿಡ್ 19 ಸೋಂಕು ಲಕ್ಷಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶನಿವಾರ 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಇಬ್ಬರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಐದು ಮಂದಿಯ ವರದಿ ಕಳುಹಿಸಲು ಬಾಕಿ ಇದೆ. ರಾಜ್ಯದಲ್ಲಿ ಕೋವಿಡ್ 19 ಸೋಂಕು ಪರೀಕ್ಷೆ ನಡೆಸುವ ಕೇಂದ್ರಗಳ ಕೊರತೆ ಇದ್ದು, ಈ ಹಿನ್ನೆಲೆಯಲ್ಲಿ ಸರಕಾರವು ಕೋವಿಡ್ 19 ಶಂಕಿತರ ಸ್ಯಾಂಪಲ್‌ ಅನ್ನು ಪರೀಕ್ಷೆಗೆ ಒಳ ಪಡಿ ಸುವ ವಿಧಾನವನ್ನು ಬದಲಾವಣೆ ಮಾಡಿದೆ.

Advertisement

ಈ ವರೆಗೆ ಜಿಲ್ಲೆಯಲ್ಲಿ 126 ಮಂದಿ ಕೋವಿಡ್ 19 ಶಂಕಿತರನ್ನು ಪತ್ತೆ ಮಾಡಲಾಗಿದ್ದು, ಅದರಲ್ಲಿ 103 ಮಂದಿಯ ವೈದ್ಯಕೀಯ ವರದಿ ಬಂದಿದೆ. 23 ಮಂದಿಯ ವೈದ್ಯಕೀಯ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಈವರೆಗೆ 99,638 ಮನೆಗಳಿಗೆ ಭೇಟಿ ನೀಡಿ 4,43,632 ಮಂದಿ ಯನ್ನು ಸಂಪರ್ಕಿಸಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ. ವಿದೇಶದಿಂದ ಬಂದವರನ್ನು ಮನೆಯಲ್ಲಿಯೇ ಇರುವಂತೆ ತಿಳಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next