Advertisement

ಮತ್ತೆ 5 ಮಂಗಗಳ ಶವ ಪತ್ತೆ

01:00 AM Feb 13, 2019 | Harsha Rao |

ಉಡುಪಿ: ಮಂಗಳವಾರ ಬ್ರಹ್ಮಾವರದ ಅಗ್ರಹಾರ ಚಾಂತಾರು, ಕರ್ಜೆಯ ಕೆಂಜೂರು, ಕೊರ್ಗಿಯ ಕಾಳಾವರ, ಅಜೆಕಾರಿನ ಮುಂಡ್ಕೂರು ಹಾಗೂ ಕೊಳಲಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹಾವಂಜೆಯಲ್ಲಿ ತಲಾ ಒಂದೊಂದು ಸೇರಿದಂತೆ ಒಟ್ಟು 5 ಮಂಗಗಳ ಶವಗಳು ಪತ್ತೆಯಾಗಿವೆ.

Advertisement

ಇದುವರೆಗೆ ಜಿಲ್ಲೆಯ ಮನುಷ್ಯರಲ್ಲಿ ಯಾರಲ್ಲಿಯೂ ಮಂಗನ ಕಾಯಿಲೆ ವೈರಸ್‌ ಪತ್ತೆಯಾಗಿಲ್ಲ. ಇದುವರೆಗೆ 31 ಮಂದಿಯನ್ನು ಶಂಕಿತ ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ತಪಾಸಣೆಗೊಳಪಡಿಸಲಾಗಿದೆ. ಎಲ್ಲವೂ ನೆಗೆಟಿವ್‌ ವರದಿಗಳು ಬಂದಿವೆ. ಜಿಲ್ಲೆಯಲ್ಲಿ ಮಂಗನಕಾಯಿಲೆ ನಿಯಂತ್ರಣಕ್ಕಾಗಿ ಡಿಎಂಪಿ ತೈಲ, ಔಷಧ ಸೇರಿದಂತೆ ಅಗತ್ಯ ವಸ್ತುಗಳ ದಾಸ್ತಾನು ಸಾಕಷ್ಟಿದೆ. ಪಶುಸಂಗೋಪನೆ, ಅರಣ್ಯ ಇಲಾಖೆ ಮತ್ತು ಗ್ರಾ.ಪಂ.ಗಳ ಸಹಯೋಗದಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವಿಶೇಷ ಗ್ರಾಮಸಭೆಗಳು ಕೂಡ ನಡೆಯುತ್ತಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next