ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 219 ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 1,203 ವರದಿಗಳು ನೆಗೆಟಿವ್ ಬಂದಿದೆ. ಉಡುಪಿಯ 115, ಕುಂದಾಪುರದ 68, ಕಾರ್ಕಳದ 33, ಅನ್ಯ ಜಿಲ್ಲೆಯ 3 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 140 ಮಂದಿ ಪುರುಷರು ಹಾಗೂ 79 ಮಂದಿ ಮಹಿಳೆಯರು ಇದರಲ್ಲಿ ಸೇರಿದ್ದಾರೆ.
ಸೋಂಕು ದೃಢಪಟ್ಟವರಲ್ಲಿ 128 ಮಂದಿ ಕೋವಿಡ್ ಕೇರ್ ಸೆಂಟರ್ ಹಾಗೂ ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಾರೆ. 91 ಮಂದಿ ಹೋಂ ಐಸೋಲೇಷನ್ ಚಿಕಿತ್ಸೆಯಲ್ಲಿದ್ದಾಾರೆ.
1,845 ಮಂದಿಯ ಗಂಟಲು ದ್ರವಮಾದರಿ ಸಂಗ್ರಹ
ಸೋಂಕು ಲಕ್ಷಣವುಳ್ಳ 1,020 ಜನರು, ಸೋಂಕಿತರ ಸಂಪರ್ಕವುಳ್ಳ 423, ಸುಸ್ತು ಹಾಗೂ ಇನ್ನಿತರ ಸಮಸ್ಯೆಯುಳ್ಳ 77, ಹಾಟ್ ಸ್ಪಾಾಟ್ ಸಂಪರ್ಕದ 325 ಮಂದಿ ಸಹಿತ ಒಟ್ಟು 1,845 ಮಂದಿಯ ಗಂಟಲು ದ್ರವ ಮಾದರಿಯನ್ನು ಇಂದು ಸಂಗ್ರಹಿಸಲಾಗಿದೆ. ಆಸ್ಪತ್ರೆಯಲ್ಲಿದ್ದ 112 ಮಂದಿ ಹಾಗೂ ಹೋಂ ಐಸೋಲೇಷನ್‌ನಲ್ಲಿದ್ದ 71 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 183 ಮಂದಿ ಬಿಡುಗಡೆಯಾಗಿದ್ದಾರೆ.
ಕಂಟೈನ್‌ಮೆಂಟ್ ವಲಯಗಳು
ಉಡುಪಿ ತಾಲೂಕಿನ ಪೆಣಂರ್ಕಿಲ, ಕುದಿ, ಬೈರಂಪಳ್ಳಿಯಲ್ಲಿ ತಲಾ 1, ಅಂಜಾರು, 80 ಬಡಗಬೆಟ್ಟು, ಪೆರ್ಡೂರು, ಕುತ್ಪಾಾಡಿ, ಅಲೆವೂರಿನಲ್ಲಿ ತಲಾ 2, ಕಡೆಕಾರು, ಪುತ್ತೂರು, 76 ಬಡಗಬೆಟ್ಟು ತಲಾ 3 ಹಾಗೂ ಮೂಡನಿಡಂಬೂರಿನಲ್ಲಿ 4 ಸಹಿತ ಒಟ್ಟು 27 ಕಡೆಗಳಲ್ಲಿ ಕಂಟೈನ್‌ಮೆಂಟ್ ವಲಯ ಮಾಡಲಾಗಿದೆ.