Advertisement

ಉದ್ಯೋಗ ನಿಮಿತ್ತಂ-ಜಾಲತಾಣಂ! : ಮೋಜಿನ ತಾಣವನ್ನು ಉದ್ಯೋಗ ತಾಣ ಮಾಡಿದ ಅಚ್ಯುತಾನಂದ

06:36 PM Mar 15, 2021 | Team Udayavani |

ಇತ್ತೀಚಿನ ದಿನಗಳಲ್ಲಿ ಫೇಸ್‌ ಬುಕ್‌, ವಾಟ್ಸ್‌ ಆ್ಯಪ್‌, ಇನ್‌ಸ್ಟಾಗ್ರಾಂ ಮುಂತಾದ ಜಾಲತಾಣಗಳಿಂದ ಅವಾಂತರವೇ ಸೃಷ್ಟಿಯಾಗುತ್ತಿದೆ. ಯುವಜನತೆ ಜಾಲತಾಣದ ಹಿಂದೆ ಬಿದ್ದು ಬಹಳಷ್ಟು ಸಮಯ ವ್ಯರ್ಥಮಾಡುತ್ತಿದ್ದಾರೆ. ಆದರೆ, ಇದೇ ಜಾಲತಾಣವನ್ನುಬಳಸಿಕೊಂಡು ಒಳ್ಳೆಯ ಕೆಲಸವನ್ನೂ ಮಾಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಮೈಸೂರಿನ ಅಚ್ಚುತಾನಂದ ಅವರಿದ್ದಾರೆ.

Advertisement

ಉಳಿದವರೆಲ್ಲಾ, ವಾಟ್ಸ್‌ ಆ್ಯಪ್‌ನಲ್ಲಿ ಗ್ರೂಪ್‌ಗ್ಳನ್ನುಮಾಡಿಕೊಂಡು ಬೇಡದ ವಿಚಾರಗಳನ್ನೇಚರ್ಚಿಸುತ್ತಿರುವ ಈ ದಿನಗಳಲ್ಲಿ,ವಾಟ್ಸ್‌ ಆ್ಯಪ್‌ ಜಾಲತಾಣಉಪಯೋಗಿಸಿಕೊಂಡು ಉದ್ಯೋಗಾಕಾಂಕ್ಷಿಗಳಿಗೆಉಚಿತವಾಗಿ ಉದ್ಯೋಗ ದೊರಕಿಸಿಕೊಂಡುವ ಮೂಲಕ ನಿರುದ್ಯೋಗಿಗಳ ಪಾಲಿನ ಆಶಾಕಿರಣವಾಗಿದ್ದಾರೆ ಅಚ್ಚುತಾನಂದ್‌.

ಗ್ರಾಮೀಣ ಪ್ರದೇಶದ ಉದ್ಯೋಗಾಂಕಾಂಕ್ಷಿಗಳಿಗೆ ಸೂಕ್ತ ನೌಕರಿ ದೊರಕಿಸಿಕೊಂಡಬೇಕೆಂಬ ಉದ್ದೇಶದಿಂದ ಮೂರು ವರ್ಷಗಳ ಹಿಂದೆ ವಾಟ್ಸ್‌ ಆ್ಯಪ್‌ನಲ್ಲಿ ಉದ್ಯೋಗ ನಿಮಿತ್ತಂ ಎಂಬಗ್ರೂಪ್‌ ಒಂದನ್ನು ಅವರು ಪ್ರಾರಂಭಿಸಿದರು. ನಂಬಿದ್ರೆ ನಂಬಿ, ಬಿಟ್ರೆ ಬಿಡಿ; ಆ ಗ್ರೂಪ್‌ ಮೂಲಕ ಇಲ್ಲಿಯವರೆಗೆ 1800ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರಕಿದೆ!

ಕೈಗಾರಿಕೆಗಳಿಗೆ ಅಗತ್ಯವಿರುವ ಹುದ್ದೆಗಳನ್ನು ಒದಗಿಸುವ ಮೂಲಕ ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ ಸೇತುವೆಯಾಗಿ ಅಚ್ಚುತಾನಂದ್‌ ಕೆಲಸ ಮಾಡುತ್ತಿದ್ದಾರೆ. ಅವರುಆರಂಭಿಸಿರುವ “ಉದ್ಯೋಗ ನಿಮಿತ್ತಂ ಜಾಲತಾಣಂ’ ವಾಟ್ಸ್‌ ಆ್ಯಪ್‌ ಗುಂಪು 13 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳನ್ನು ಹೊಂದಿದೆ. ಈ ಗುಂಪಿನಲ್ಲಿ 14 ತಂಡಗಳಿವೆ. ವಿವಿಧ ಕಂಪನಿಯಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುವ 450ಕ್ಕೂ ಹೆಚ್ಚು ಸಿಬ್ಬಂದಿ ಈ ಗುಂಪಿನ ಸದಸ್ಯರಾಗಿರುವುದರಿಂದ, ಉದ್ಯೋಗಿಗಳ ಆಯ್ಕೆಗೆ ಅನುಕೂಲವಾಗಿದೆ.

ಹೀಗೆ ನಡೆಯುತ್ತೆ ಆಯ್ಕೆ ಪ್ರಕ್ರಿಯೆ: ಉದ್ಯೋಗಾಕಾಂಕ್ಷಿಗಳು ಮೊದಲು ಈ ವಾಟ್ಸ್‌ ಆ್ಯಪ್‌ ಗುಂಪಿನ ಸದಸ್ಯರಾಗಬೇಕು. ಇದಕ್ಕೆ ಯಾವುದೇ ಬಗೆಯ ಶುಲ್ಕವಿಲ್ಲ. ನಂತರ ತಮ್ಮ ರೆಸ್ಯುಮೆಯನ್ನು ಫೈಲ್‌ ಮಾಡಬೇಕು. ವಿವಿಧ ಕಂಪನಿಗಳು ತಮ್ಮ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆ, ಅದಕ್ಕೆ ಬೇಕಾದ ವಿದ್ಯಾರ್ಹತೆ, ಅಗತ್ಯವಿರುವ ಸಿಬ್ಬಂದಿಗಳ ಸಂಖ್ಯೆ, ಸಿಗುವ ವೇತನ ಮತ್ತಿತರ ಮಾಹಿತಿಗಳನ್ನು ಈ ಗುಂಪಿನಲ್ಲಿ ಪ್ರಕಟಿಸುತ್ತವೆ. ಉದ್ಯೋಗಗಳ ಬಗ್ಗೆ ಮಾಹಿತಿ ಪಡೆವ ವಾಟ್ಸ್‌ಆ್ಯಪ್‌ ತಂಡ, ತಮ್ಮಲ್ಲಿರುವ ರೆಸ್ಯುಮೆಗಳನ್ನು ಆಯಾ ಕಂಪನಿಯ ಎಚ್‌.ಆರ್‌. ವಿಭಾಗಕ್ಕೆ ಕಳಿಸುತ್ತದೆ.

Advertisement

ತಮ್ಮಲ್ಲಿರುವ ಉದ್ಯೋಗ ನಿರ್ವಹಣೆಗೆ ಅರ್ಜಿದಾತರು ಸೂಕ್ತ ಅನ್ನಿಸಿದರೆ, ಎಚ್‌ ಆರ್‌ ವಿಭಾಗದಿಂದ ಅವರಿಗೆ ಕರೆ ಬರುತ್ತದೆ. ಅಲ್ಲಿ ನಡೆವ ಪರೀಕ್ಷೆ / ಮಾತುಕತೆಯಲ್ಲಿ ಅರ್ಜಿದಾರರು ಯಶ ಕಂಡರೆ, ಉದ್ಯೋಗ ಸಿಕ್ಕಿತೆಂದೇ ಅರ್ಥ. ನಂಬಿ; ಉದ್ಯೋಗನಿಮಿತ್ತಂ… ವಾಟ್ಸ್ ‌ಆ್ಯಪ್‌ ಗುಂಪಿನ ಮೂಲಕ ಕಳೆದ ಮೂರು ವರ್ಷಗಳಲ್ಲಿ 1810 ಮಂದಿಗೆ ಉದ್ಯೋಗ ದೊರಕಿದೆ. ವಿವಿಧ ಕಂಪನಿಗಳ ಎಚ್‌.ಆರ್‌. ವಿಭಾಗದ ಸಿಬ್ಬಂದಿಯ ಸಹಕಾರ ಸಿಕ್ಕರೆ ಇನ್ನೂ ಹೆಚ್ಚು ಜನರಿಗೆ ಉದ್ಯೋಗ ಕೊಡಿಸಲುಸಹಾಯವಾಗುತ್ತದೆ ಎನ್ನುತ್ತಾರೆ ಅಚ್ಚುತಾನಂದ್‌. ಮೆಚ್ಚುಗೆಗೆ ಅರ್ಹರು: ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನವಿಲ್ಲ.ಅವರು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಅವರ ಅರ್ಹತೆಗೆ ತಕ್ಕಂಥ ಉದ್ಯೋಗ ಕೊಡಿಸಬೇಕು ಅನ್ನುವುದು ನನ್ನಾಸೆ. ಅದಕ್ಕಾಗಿ ಶ್ರಮಿಸುತ್ತಿದ್ದೇನೆ ಎನ್ನುವ ಅಚ್ಚುತಾನಂದ್‌, ಖಾಸಗಿಕಂಪೆನಿಯ ಉದ್ಯೋಗಿ ಎಂಬುದು ವಿಶೇಷ. ಅವರಸೇವೆಯನ್ನು ಮೆಚ್ಚಿ ಹಲವು ಸಂಘ-ಸಂಸ್ಥೆಗಳುಸನ್ಮಾನಿಸಿವೆ. ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ಹಣ ಪಡೆದು ಪರಾರಿಯಾಗುವ ನಕಲಿಕಂಪೆನಿಗಳೇ ಹೆಚ್ಚಾಗಿರುವ ಈ ಹೊತ್ತಿನಲ್ಲಿ,ಜಾಲತಾಣದ ಆ್ಯಪ್‌ಒಂದನ್ನು ಬಳಸಿಕೊಂಡು ಉಚಿತವಾಗಿ ಉದ್ಯೋಗ ಕೊಡಿಸುತ್ತಿರುವ ಅಚ್ಚುತಾನಂದ್‌ ಹಾಗೂ ಅವರ ಗುಂಪಿನಲ್ಲಿರುವ ಎಲ್ಲಾ ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿಗೆ ಅಭಿನಂದನೆಗಳು ಸಲ್ಲಲೇಬೇಕು. ಉದ್ಯೋಗ

ನಿಮಿತ್ತಂ ಗುಂಪಿನ ಸದಸ್ಯರಾಗಲು ಸಂಪರ್ಕಿಸಿ: 9902024614, www.udhyoganimitham.com  ಮೂಲಕ ಜಾಲತಾಣವನ್ನು ಸಂಪರ್ಕಿಸಬಹುದು.

ಮರೆಯಲು ಸಾಧ್ಯವಿಲ್ಲ… :

ಸಾಮಾಜಿಕ ಜಾಲತಾಣವನ್ನು ಒಳ್ಳೆಯ ಕೆಲಸಕ್ಕೆ ಹೇಗೆ ಬಳಸಿ ಕೊಳ್ಳಬಹುದು ಎಂಬುದನ್ನು ಅಚ್ಯುತಾನಂದ್‌ ತೋರಿಸಿ ಕೊಟ್ಟಿದ್ದಾರೆ. ಉದ್ಯೋಗ ನಿಮಿತ್ತಂ ಜಾಲತಾಣಂ ವಾಟ್ಸ್‌ಆ್ಯಪ್‌ ಗ್ರೂಪಿನ ಮೂಲಕ ನೌಕರಿ ಪಡೆದವರಲ್ಲಿ ನಾನೂ ಒಬ್ಬ. ಅಚ್ಯುತಾನಂದ್‌ ಅವರ ಸಹಾಯವನ್ನು ನಾನೆಂದೂ ಮರೆಯಲಾರೆ ಅನ್ನುತ್ತಾರೆ  ಬಸವರಾಜ್‌ ಪೂಜಾರ್‌.

 

– ಪ್ರಕಾಶ್‌ ಕೆ.ನಾಡಿಗ್‌

Advertisement

Udayavani is now on Telegram. Click here to join our channel and stay updated with the latest news.

Next