Advertisement

Udhayanidhi ವಿವಾದಾತ್ಮಕ ಹೇಳಿಕೆಗೆ ತಕ್ಕ ಉತ್ತರ ನೀಡಬೇಕು: ಸಚಿವರಿಗೆ ಪ್ರಧಾನಿ ಮೋದಿ

04:13 PM Sep 06, 2023 | Team Udayavani |

ಹೊಸದಿಲ್ಲಿ : ಡಿಎಂಕೆ ನಾಯಕ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ವಿರುದ್ದದ ವಿವಾದಾತ್ಮಕ ಹೇಳಿಕೆಗೆ ”ತಕ್ಕ ಉತ್ತರ ನೀಡಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಅವರು ಮಾತನಾಡಿದರು.

Advertisement

“ಇತಿಹಾಸಕ್ಕೆ ಹೋಗಬೇಡಿ, ಆದರೆ ಸಂವಿಧಾನದ ಪ್ರಕಾರ ಸತ್ಯಗಳಿಗೆ ಅಂಟಿಕೊಳ್ಳಿ.ಸಮಸ್ಯೆಯ ಸಮಕಾಲೀನ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿ,” ಎಂದು ಪ್ರಧಾನಿ ಹೇಳಿದ್ದಾರೆ.

”ಹೊಸ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನವನ್ನು ಕೇಂದ್ರ ಸರಕಾರ ನೀಡದೇ ಇರುವುದು ಸನಾತನ ಧರ್ಮದ ಸಾಧಕರ ತಾರತಮ್ಯಕ್ಕೆ ಉದಾಹರಣೆ” ಎಂದು ಉದಯನಿಧಿ ಸ್ಟಾಲಿನ್ ಉಲ್ಲೇಖಿಸಿದ ಒಂದು ದಿನದ ನಂತರ ಪ್ರಧಾನಿ ಮೋದಿ ಈ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next