Advertisement
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 7 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಐದರಲ್ಲೂ ಎಡರಂಗದ ಶಾಸಕರಿದ್ದಾರೆ. ಪಕ್ಷದ ಗ್ರಾಮವೆಂದೇ ಕರೆಯಲ್ಪಡುವ ಕಣ್ಣೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಾದ ಕಲ್ಯಾಶೆÏàರಿ ಮತ್ತು ತೃಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲೂ ಎಡರಂಗ ಕುಸಿದಿದ್ದು ಅಚ್ಚರಿ ಹುಟ್ಟಿಸಿದೆ. 35,000 ಮತಗಳ ಮುನ್ನಡೆ ನಿರೀಕ್ಷಿಸಿದ್ದ ಕಲ್ಯಾಶೆÏàರಿಯಲ್ಲಿ ಎಡರಂಗಕ್ಕೆ ಕೇವಲ 13,694 ಮತಗಳನ್ನು ಮಾತ್ರವೇ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ಎಡರಂಗದ ಪಿ. ಕರುಣಾಕರನ್ 22,782 ಮತಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದರು. 2016ರಲ್ಲಿ ನಡೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಎಡರಂಗದ ಅಭ್ಯರ್ಥಿ 42,891 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
Related Articles
Advertisement
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ. ಸಿದ್ದಿಕ್ ತೀವ್ರ ಪೈಪೋಟಿ ನೀಡಿದ್ದರೂ ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂನ ಪಿ. ಕರುಣಾಕರನ್ 835 ಮತಗಳ ಮುನ್ನಡೆಯನ್ನು ಉಳಿಸಿ ಕೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಡರಂಗ 3,832 ಮತಗಳ ಅಂತರ ದಿಂದ ಗೆಲುವು ಸಾಧಿಸಿತ್ತು. ಈ ಮುನ್ನಡೆ ಯನ್ನು ಕಾಯ್ದುಕೊಂಡದ್ದು ಬಲಿಷ್ಠ ಅಭ್ಯರ್ಥಿಯಾಗಿದ್ದ ಕೆ.ಸುಧಾಕರನ್ ವಿರುದ್ಧ ಎಂಬುದು ಗಮನಾರ್ಹ.
ಯುಡಿಎಫ್‌ನ ಕೋಟೆಯಾಗಿರುವ ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಗಿಂತ ಇಮ್ಮಡಿ ಮತಗಳ ಮುನ್ನಡೆಯನ್ನು ಕಾಯ್ದುಕೊಳ್ಳಲು ರಾಜ್‌ಮೋಹನ್ ಉಣ್ಣಿತ್ತಾನ್‌ಗೆ ಸಾಧ್ಯವಾಯಿತು. ಈ ಎರಡೂ ಕ್ಷೇತ್ರಗಳಲ್ಲಿ ಎಡರಂಗ ಮೂರನೇ ಸ್ಥಾನದಲ್ಲಿತ್ತು. ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನದಲ್ಲಿದ್ದರು. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ 23,160 ಮತಗಳ ಮುನ್ನಡೆಯನ್ನು ಪಡೆದಿದೆ. ಕಳೆದ ಲೋಕಸಭಾ ಚುನಾವಣೆ ಯಲ್ಲಿ ಯುಡಿಎಫ್ 13190 ಮತಗಳ ಮುನ್ನಡೆಯನ್ನು ಸಾಧಿಸಿತ್ತು. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ 11,113 ಮತಗಳ ಮುನ್ನಡೆಯನ್ನು ಪಡೆದಿದೆ. ಕಳೆದ ಬಾರಿ ಕೇವಲ 5,828 ಆಗಿತ್ತು. ಕಳೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಕೇವಲ 89 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು ಎಂಬುದು ಗಮನಾರ್ಹ.
ಇದೇ ವೇಳೆ ಪಯ್ಯನ್ನೂರು ವಿಧಾನಸಭಾ ಕ್ಷೇತ್ರ ಮಾತ್ರ ಎಲ್‌ಡಿಎಫ್‌ನ ಕೈಬಿಡಲಿಲ್ಲ. ನಿರೀಕ್ಷೆ ಹುಸಿಯಾಗಲಿಲ್ಲ. ಇಲ್ಲಿ 35,000 ಮತಗಳ ಮುನ್ನಡೆ ಸಾಧಿಸಬಹುದೆಂದು ಲೆಕ್ಕ ಹಾಕಲಾಗಿದ್ದರೂ 26,131 ಮತಗಳನ್ನು ಪಡೆಯಿತು. ಕಳೆದ ಬಾರಿಗಿಂತ ಸುಮಾರು ಎರಡೂವರೆ ಸಾವಿರ ಮತಗಳಷ್ಟು ಕಡಿಮೆಯಾಗಿದೆ. 2014 ರಲ್ಲಿ 28,142 ಮತಗಳ ಮುನ್ನಡೆಗಳಿಸಿತ್ತು. ಆದರೆ ಕಳೆದ ಅಂದರೆ 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಡರಂಗದ ಅಭ್ಯರ್ಥಿ 40,263 ಅಂತರದಿಂದ ಗೆಲುವು ಸಾಧಿಸಿದ್ದರು.