ನವದೆಹಲಿ:ಶಿವಸೇನಾ ಹಿರಿಯ ಮುಖಂಡ, ಉದ್ಧವ್ ಠಾಕ್ರೆ ಆಪ್ತರಲ್ಲಿ ಒಬ್ಬರಾದ ಅರ್ಜುನ್ ಖೋಟ್ಕರ್ ಶೀಘ್ರದಲ್ಲಿಯೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯ ಬಂಡಾಯದ ಗುಂಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಕೇಂದ್ರ ಸಚಿವ, ಬಿಜೆಪಿ ಮುಖಂಡ ರಾವ್ ಸಾಹೇಬ್ ದಾನ್ವೆ ತಿಳಿಸಿದ್ದಾರೆ.
ಇದನ್ನೂ ಓದಿ:ಅಶ್ಲೀಲವಾಗಿ ಫೋಟೋ ಮಾರ್ಫಿಂಗ್ ಮಾಡಿ ಸಂದೇಶ ರವಾನೆ
ಸೋಮವಾರ ದೆಹಲಿಯಲ್ಲಿ ಅರ್ಜುನ್ ಖೋಟ್ಕರ್ ಅವರು ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿ ಹೇಳಿದೆ. ಖೋಟ್ಕರ್ ಅವರು ಶಿಂಧೆ ಗುಂಪಿಗೆ ಸೇರ್ಪಡೆಯಾಗುತ್ತಾರೋ ಅಥವಾ ಇಲ್ಲವೊ ಎಂಬ ಪ್ರಶ್ನೆಗೆ ಸಚಿವ ದಾನ್ವೆ, ಖೋಟ್ಕರ್ ಶಿಂಧೆಗೆ ಗುಂಪಿಗೆ ಸೇರ್ಪಡೆಯಾಗಲಿದ್ದಾರೆ. ಶಿಂಧೆ ಜತೆಗಿನ ಮಾತುಕತೆ ವೇಳೆ ನಾನು ಕೂಡಾ ಹಾಜರಿದ್ದೆ, ಈಗ ಭಿನ್ನಾಭಿಪ್ರಾಯಗಳು ಬಗೆಹರಿದಿದೆ ಎಂದು ಹೇಳಿದರು.
ಅರ್ಜುನ್ ಖೋಟ್ಕರ್ ಏಕನಾಥ್ ಶಿಂಧೆ ಗುಂಪಿಗೆ ಸೇರ್ಪಡೆಯಾಗುತ್ತಿರುವುದು ಉದ್ಧವ್ ಠಾಕ್ರೆಗೆ ಭಾರೀ ಹಿನ್ನಡೆಯಾಗಲಿದೆ. ಜಲ್ನಾ ಜಿಲ್ಲೆಯಲ್ಲಿ ಖೋಟ್ಕರ್ ಪ್ರಭಾವಿ ಶಿವಸೇನಾ ಮುಖಂಡರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಶಿವಸೇನೆ ಇಬ್ಭಾಗವಾಗಲಿದೆಯೇ ಎಂಬ ಪ್ರಶ್ನೆಗೆ, ಹೌದು ಶಿಂಧೆಯ ಶಿವಸೇನಾ ಸೂಕ್ತವಾದ ಪಕ್ಷವಾಗಿದ್ದು, ಜನರು ಕೂಡಾ ಶಿಂಧೆ ಬಣದ ಶಿವಸೇನಾಕ್ಕೆ ಮತ ಚಲಾಯಿಸಲಿದ್ದಾರೆ ಎಂಬ ವಿಶ್ವಾಸ ಹೊಂದಿರುವುದಾಗಿ ದಾನ್ವೆ ತಿಳಿಸಿದ್ದಾರೆ.