Advertisement

ಮತ್ತೊಂದು ಆಘಾತ: ಉದ್ಧವ್ ಠಾಕ್ರೆ ಸಹೋದರನ ಮಗ ಸಿಎಂ ಶಿಂಧೆ ಬಣಕ್ಕೆ

10:20 PM Jul 29, 2022 | Team Udayavani |

ಮುಂಬಯಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೆ ಮತ್ತೊಂದು ಆಘಾತದಲ್ಲಿ, ಅವರ ನಿಹಾರ್ ಠಾಕ್ರೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಸೇನಾ ಪಾಳಯಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ನಿಹಾರ್ ಶುಕ್ರವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿ ತಮ್ಮ ಬೆಂಬಲವನ್ನು ನೀಡಿದ್ದಾರೆ.

Advertisement

ನಿಹಾರ್ ಠಾಕ್ರೆ ಅವರು ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಹಿರಿಯ ಪುತ್ರ ದಿವಂಗತ ಬಿಂದುಮಾಧವ್ ಠಾಕ್ರೆ ಅವರ ಪುತ್ರ ಎಂಬುದನ್ನು ಸ್ಮರಿಸಬಹುದು.

ಸಭೆಯ ನಂತರ ಬಿಡುಗಡೆಯಾದ ಶಿಂಧೆ ಅವರ ಕಚೇರಿಯ ಹೇಳಿಕೆಯಲ್ಲಿ ”ನಿಹಾರ್ ಠಾಕ್ರೆ ಅವರು ಸಿಎಂ ನೇತೃತ್ವದಲ್ಲಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಲಿದ್ದಾರೆ” ಎಂದು ಹೇಳಿದೆ. ಬಿಜೆಪಿ ನಾಯಕ ಹಾಗೂ ಮಾಜಿ ರಾಜ್ಯ ಸಚಿವ ಹರ್ಷವರ್ಧನ್ ಪಾಟೀಲ್ ಅವರ ಪುತ್ರಿಯನ್ನು ವಿವಾಹವಾಗಿರುವ ನಿಹಾರ್ ಠಾಕ್ರೆ ಅವರು ಇಷ್ಟು ದಿನ ರಾಜಕೀಯದಿಂದ ದೂರ ಉಳಿದಿದ್ದರು.

ಪೂಜ್ಯ ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಅವರ ಮೊಮ್ಮಗ ಮತ್ತು ಬಿಂದುಮಾಧವ್ ಠಾಕ್ರೆ ಅವರ ಅಳಿಯ ನಿಹಾರ್ ಠಾಕ್ರೆ ಅವರು ಇಂದು ಸಮ್ಮಿಶ್ರ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ಅವರ ಮುಂದಿನ ಸಾಮಾಜಿಕ ಮತ್ತು ರಾಜಕೀಯ ಜೀವನಕ್ಕೆ ಶುಭ ಹಾರೈಸಲಾಯಿತು.ಎಂದು ಸಿಎಂ ಏಕನಾಥ್ ಶಿಂಧೆ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next