Advertisement
ಜೂ.21ರಂದು ರಾತ್ರಿ ಸಿಎಂ ಉದ್ಧವ್, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‌ಗೆ ಕರೆ ಮಾಡಿದ್ದರು. ಈ ವೇಳೆ ಬಿಜೆಪಿ ಜತೆಗೆ ರಾಜಿ ಮಾಡುವ ಪ್ರಯತ್ನ ಮಾಡಿದ್ದರು ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಯ ಹೊಯ್ದಾಟದ ನಡುವೆಯೇ ಶಿವಸೇನೆಯ ವಕ್ತಾರ ಸಂಜಯ ರಾವತ್ ಅವರಿಗೆ ಇ.ಡಿ.ನೋಟಿಸ್ ಜಾರಿ ಮಾಡಿದೆ. ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಮಂಗಳವಾರವೇ ವಿಚಾರಣೆಗೆ ಬರುವಂತೆ ಸೂಚಿಸಿದೆ. “ಜೂ. 28ರಂದು ವಿಚಾರಣೆಗೆ ಹಾಜರಾಗಲು ಅಸಾಧ್ಯ. ಸಮಯಾವಕಾಶ ಬೇಕು’ ಎಂದು ರಾವತ್ ಮನವಿ ಮಾಡಿದ್ದಾರೆ. ಹಾಗೆಯೇ “ಇದೊಂದು ಸಂಚು. ರಾಜಕೀಯ ವಿರೋಧಿಗಳ ವಿರುದ್ಧ ಹೋರಾಟ ನಡೆಸದಂತೆ ತಡೆಯುವ ಕ್ರಮ. ಇ.ಡಿ. ವಿಚಾರಣೆಗೆ ಹಾಜ ರಾಗುವಂತೆ ಸಮನ್ಸ್ ನೀಡಿದೆ. ನಾವು, ಬಾಳಾ ಸಾಹೇಬರ ಶಿವಸೈನಿಕರು ಈಗ ದೊಡ್ಡ ಯುದ್ಧದಲ್ಲಿ ತೊಡಗಿದ್ದೇವೆ. ನನ್ನ ತಲೆಯನ್ನು ಕಡಿದರೂ, ಗುವಾಹಾಟಿ ದಾರಿ ಹಿಡಿಯಲಾರೆ. ನನ್ನನ್ನು ಬಂಧಿಸಿ ‘ ಎಂದು ಪ್ರತಿಕ್ರಿಯೆ ನೀಡಿದ್ದಾರೆ.