Advertisement

ಫೈನಾನ್ಸ್ ಸಾಲ ಕಟ್ಟಿ ಸುಸ್ತಾದ ಯುವ ರೈತ ಪತ್ರ ಬರೆದಿಟ್ಟು ಆತ್ಮಹತ್ಯೆ

12:09 PM Aug 24, 2021 | Team Udayavani |

ಯಾದಗಿರಿ : ಸಾಲಕ್ಕೆದರಿದ್ದರೂ ಹಾಗೂ ಹೀಗೂ ಮಾಡಿ ಫೈನಾನ್ಸ್ ನಲ್ಲಿ ತೆಗೆದುಕೊಂಡ ಸಾಲ ಕಟ್ಟಿದ್ದರೂ ಇನ್ನೂ ಬಡ್ಡಿ ಕಟ್ಟಬೇಕು ಇಲ್ಲವಾದಲ್ಲಿ ಬ್ಲ್ಯಾಂಕ್ ಚಕ್ ಕೊಟ್ಟಿದಿಯಲ್ಲ ಕೇಸ್ ಹಾಕ್ತಾವೇ ಎಂದು ಧಮಕಿ ಹಾಕಿದ ಬ್ಯಾಂಕ್ ನವರ ವಸೂಲಾತಿಗೆ ಅಂಜಿ ಪತ್ರ ಬರೆದು ವಿಷ ಸೇವಿಸಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಹಾಪುರ ನಗರದ ಹಳಿಸಗರ ಭಾಗದಲ್ಲಿ ನಡೆದಿದೆ.

Advertisement

ನಿಂಗಪ್ಪ ಹಳಿಮನಿ (32) ಎಂಬ ಯುವ ರೈತನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ನಿನ್ನೆ(ಸೋಮವಾರ, ಆಗಸ್ಟ್ 23) ರಾತ್ರಿ 2 ಗಂಟೆ ನಂತರ ಸಾಲದ ವಿಷಯ ಬರೆದು ಇಹಲೋಕ ತ್ಯೇಜಿಸುವ ಕುರಿತು ಬರೆದು ತನ್ನ ಮೊಬೈಲ್ ನಲ್ಲಿ ಸ್ಟೇಟಸ್ ಇಟ್ಟು ಇನ್ನೂ ಒಂದು ವರ್ಷ ತುಂಬದ ತನ್ನ ಮಗಳಿಗೆ ಹಾಗೂ ಸ್ನೇಹಿತರಿಗೆ ಕ್ಷಮೆ ಕೇಳಿ ವಿಷ ಸೇವಿಸಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ : ಜಂಕ್ ಫುಡ್ ಬೇಡ, ಸಾಂಪ್ರದಾಯಿಕ ಭಾರತೀಯ ಆಹಾರ ಸೇವಿಸಿ ಆರೋಗ್ಯ: ವೆಂಕಯ್ಯ ನಾಯ್ಡು

ಸಮಗ್ರವಾಗಿ ಬಿಳೆ ಹಾಳೆಯಲ್ಲಿ ಫೈನಾನ್ಸ್ ದವರ ಹೆಸರು ಅವರು ನೀಡಿದ ಕಿರುಕುಳ ತೆಗೆದುಕೊಂಡಿದ್ದ ಸಾಲ ಮತ್ತು ಕಟ್ಟಿದ ಬಡ್ಡಿ ರಿಸಿಪ್ಟ್ ಗಳು ಸೇರಿದಂತೆ ಬಡ್ಡಿಗೆ ಚಕ್ರ ಬಡ್ಡಿ ಅವರು ಹಾಕಿರುವ ಕುರಿತು ಬತೆದಿಟ್ಟು, ಸಾಲದ ಸುಳಿಯಲ್ಲಿ ಬದುಕಲಾಗುತ್ತಿಲ್ಲ. ಕಳೆದ ನಾಲ್ಕು ವರ್ಷದಿಂದ ಸಾಲಕ್ಕೆ ಬಡ್ಡಿ ಕಟ್ಟುತ್ತಲೇ ಬಂದಿದ್ದು, ಸದ್ಯ ಕೈ‌ಮೀರಿದೆ. ಅಷ್ಟೊಂದು ಬಡ್ಡಿ ಅದ್ಹೇಗೆ ಎಂದು ವಿಚಾರಿಸಿದರೆ. ಬ್ಲ್ಯಾಂಕ್ ಚಕ್  ಬೌನ್ಸ್ ಕೇಸ್ ಹಾಕ್ತೇವೆ ಎಂದು ಬೆದರಿಕೆವೊಡ್ಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇ ಖಿಸಿರುವ ನಿಂಗಪ್ಪ, ತೀವ್ರ ನೊಂದು ಪ್ರಾಣ ಕಳೆದುಕೊಂಡಿದ್ದಾನೆ.

Advertisement

ಅಲ್ಲದೆ ಸರಕಾರದವರು ಸರ್ಕಾರಿ ನೌಕರರಿಗೆ ವೇತನ ಜಾಸ್ತಿ ಮಾಡ್ತಾ ಹೋಗ್ತಾರೆ. ರೈತರಿಗೆಲ್ಲಿ ಅವಕಾಶ. ಬೆಳೆದ ಫಸಲು ಬೆಲೆ ದೊರೆಯದ ಕಾರಣ ಮಾಡಿದ ಸಾಲವು ತೀರಿಸಲಾಗದೆ ಸಂಸಾರವು ನಡೆಸಲಾಗದ ಸ್ಥಿತಿಯಲ್ಲಿ ದಿಕ್ಕು ದೋಚದೆ ಹೆಂಡತಿ ಮಕ್ಕಳನ್ನು ಬೀದಿಗೆ ಬಿಟ್ಟು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈಗ ಅದೇ ಸಾಲಿನಲ್ಲಿ ನಾನು ಸೇರುತ್ತಿದ್ದೇನೆ ಎಂದು ನಿಂಗಪ್ಪ ಬರೆದ ಪತ್ರದಲ್ಲಿ ವಿವರಿಸಿದ್ದಾನೆ.

ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಆತ್ಮಹತ್ಯೆ ‌ಮಾಡಿಕೊಂಡ ಯುವಕ‌ ನಿಂಗಪ್ಪನ ದೇಹವನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ದಾಖಲಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದರು. ಈ ಪ್ರಕರಣ ಸಮಗ್ರ ಪರಿಶೀಲಿಸಿ ಆತ್ಮಹತ್ಯೆ ಗೆ ಕಾರಣೀಭೂತರಾದ ಆ ಫೈನಾನ್ಸರಿಗಳಿಗೆ ಕಾನೂನಿನಡಿ ಶಿಕ್ಷೆಗೊಳಪಡಿಸಬೇಕೆಂಬುದೇ ಮೃತ ನಿಂಗಪ್ಪ ಸ್ನೇಹಿತರ ಹಾಗೂ ಬಂಧುಗಳ‌ ಒತ್ತಾಯವಾಗಿದೆ. ಸರ್ಕಾರಿ ಆಸ್ಪತ್ರೆ ಮುಂದೆ ಬಂಧುಗಳ‌ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಕೈಗೊಂಡಿದ್ದು ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ತಾಲಿಬಾನ್ ಹಿಂಸಾಚಾರ : ಭಾರತದಲ್ಲಿ ಡ್ರೈ ಫ್ರುಟ್ಸ್ ಗಳ ಬೆಲೆ ಶೇ.15-20 ರಷ್ಟು ಏರಿಕೆ..!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next