Advertisement
ಬಿ. ಸರೋಜಾ ದೇವಿಅಭಿನಯ ಸರಸ್ವತಿ ಬಿರುದಾಂಕಿತ ಬಿ.ಸರೋಜಾ ದೇವಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡ, ತಮಿಳು, ತೆಲುಗು, ಹಿಂದಿ ಸಹಿತ ಹಲವು ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಸಿನೆಮಾದಲ್ಲಿ ನಟಿಸಿದ್ದಾರೆ.
ಜಾನಕಿ ಶ್ರೀನಿವಾಸಮೂರ್ತಿ ಎಂದರೆ ಹಲವರಿಗೆ ತಿಳಿಯದು, “ವೈದೇಹಿ’ ಎಂಬ ಕಾವ್ಯನಾಮವೇ ಚಿರಪರಿಚಿತ. ಉಡುಪಿ ಜಿಲ್ಲೆಯ ಕುಂದಾಪುರದವರು, ಪ್ರಸ್ತುತ ಮಣಿಪಾಲದಲ್ಲಿರುವವರು.
ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು.ಸಣ್ಣಕಥೆ, ಕಾವ್ಯ, ಕಾದಂಬರಿ ಸೇರಿ ವಿವಿಧ ಪ್ರಕಾರಗಳಲ್ಲಿ ತೊಡಗಿ ದ್ದಾರೆ. ಇವರ “ಕ್ರೌಂಚ ಪಕ್ಷಿಗಳು’ ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.
Related Articles
ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿಗೆ ಪೂರಕವಾಗಿ ದ್ದು, ಸಿನೆಮಾ ರಂಗದಲ್ಲಿ ತಮ್ಮದೇ ಆದ ಸ್ಥಾನಗಿಟ್ಟಿಸಿಕೊಂಡವರು ಪ್ರಗತಿ ರಿಷಭ್ ಶೆಟ್ಟಿ. ನಟ ರಿಷಭ್ ಶೆಟ್ಟಿ ಅವರನ್ನು ವಿವಾಹವಾದ ಬಳಿಕ ಗಂಡನಿಗೆ ಸಾಥ್ ನೀಡುತ್ತಾ ಈಗ ಕಾಸ್ಟೂಮ್ ಡಿಸೈ ನರ್‌ಅಗಿ ಮೈಲುಗಲ್ಲು ಸೃಷ್ಟಿಸಿದ್ದಾರೆ.
ರಿಷಭ್ ನಿರ್ಮಾಣ, ನಿರ್ದೇಶನದ ಸಿನೆಮಾಗಳಿಗೆ ಕಾಸ್ಟೂéಮ್ ಡಿಸೈನ್ ಜತೆಗೆ “ರಿಷಭ್ ಫಿಲಂಸ್’ನ ನಿರ್ಮಾಣ ಉಸ್ತುವಾರಿ ಇವರದ್ದೇ.
Advertisement
ಎಂ.ಡಿ. ಪಲ್ಲವಿಭಾವಗೀತೆ, ಚಿತ್ರಗೀತೆ, ಜನಪದ, ಭಕ್ತಿಗೀತೆ ಹೀಗೆ ಎಲ್ಲ ಪ್ರಕಾರದ ಗಾಯನದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಗಾಯಕಿ ಎಂ.ಡಿ. ಪಲ್ಲವಿ.
ಕಲಾವಿದರ ಕುಟುಂಬದ ಹಿನ್ನೆಲೆಯ ಪಲ್ಲವಿ, 2 ದಶಕಗಳಿಂದ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದ್ದಾರೆ. “ದೀಪವೂ ನಿನ್ನದೆ ಗಾಳಿಯೂ ನಿನ್ನದೆ’ ಎಂಬುದರಿಂದ ಹಿಡಿದು “ನೋಡಯ್ಯ ಕ್ವಾಟೆಲಿಂಗವೆ’ ಎಂಬ ಹಾಡಿನವರೆಗೂ ಜನಪ್ರಿಯ. ಮಧುರಾ ಆರ್.ಜೆ.
ನಟಿ ಮಧುರಾ ಆರ್.ಜೆ. ತುಳು ಸಿನೆಮಾ ಹಾಗೂ ರಂಗಭೂಮಿಯಲ್ಲಿ ಸಕ್ರಿಯರು. ಅನರ್ಕಲಿ ಸಿನಿಮಾದ ನಾಯಕಿ.
“ನೆಮ್ಮದಿ ಅಪಾರ್ಟ್ ಮೆಂಟ್’, “ಬರ್ಬರಿಕಾ’, “ಮಹಮಾಯಿ’, “ಕಾತ್ಯಾಯಿನಿ’, “ಮರ ಗಿಡ ಬಳ್ಳಿ’ ಎಂಬ ನಾಟಕ, “ಉಂದು ನಾಟಕ’, “ಬಲೆ ಬುಲಿಪಾಲೆ’ ಸಹಿತ ಕಿರುತೆರೆ ಪ್ರದರ್ಶನದಲಿ ನಟನೆ. ನಿಟ್ಟೆ ಶಿಕ್ಷಣ ಸಂಸ್ಥೆಯ ರಿಸರ್ಚ್ ಅಸೋಸಿಯೇಟ್ ಆದ ಮಧುರಾ ಮೂಲತಃ ಮಂಗಳೂರಿನವರು. ಶ್ರೇಯಾಂಕ ಪಾಟೀಲ್
ಕ್ರೀಡಾಪ್ರೇಮಿಗಳಿಗೆ ಚಿರಪರಿಚಿತ ಹೆಸರು ಶ್ರೇಯಾಂಕಾ ಪಾಟೀಲ. ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಆಗಿರುವ ಇವರು ಆರ್‌ಸಿಬಿ ಪರವೂ ಮಿಂಚಿದ್ದಾರೆ.
ಜೇವರ್ಗಿ ಕೋಳಕೂರು ಗ್ರಾಮದವರಾದ ಇವರು ಹೆಚ್ಚಾಗಿ ಬೆಂಗಳೂರಿನಲ್ಲೇ ಇದ್ದು, ಸದ್ಯ ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಕಾಂ ಪದವಿ ಕಲಿಯುತ್ತಲೇ ಕ್ರೀಡಾ ಕ್ಷೇತ್ರಕ್ಕೆ ಹೊರಳಿದವರು. ದೀಪಾ ಪೈ
ದೇಶದ ಪ್ರಮುಖ ಐಸ್‌ಕ್ರೀಂ ಬ್ರ್ಯಾಂಡ್ ಗಳಲ್ಲಿ ಒಂದಾದ ಹಾಂಗ್ಯೋ ಐಸ್‌ಕ್ರೀಂನ ಬ್ರ್ಯಾಂಡಿಂಗ್ ಹಾಗೂ ವ್ಯಾಪಾರಾಭಿವೃದ್ಧಿ ವಿಭಾ ಗದ ಉಸ್ತುವಾರಿ ದೀಪಾ ಪ್ರದೀಪ್ ಪೈ ಅವರದ್ದು.
ಉತ್ಪನ್ನ ವಿನ್ಯಾಸ, ಆಡಳಿತಾತ್ಮಕ ವಿಭಾಗ, ಹೊಸ ಉತ್ಪನ್ನದ ಆವಿಷ್ಕಾರ ಸಹಿತ ವಿವಿಧ ಚಟುವಟಿಕೆ ಅವರದ್ದು. ಹಾಂಗ್ಯೋ ಎಂಡಿ ಪ್ರದೀಪ್ ಜಿ.ಪೈ ಅವರ ನೇತೃತ್ವದ ಸಂಸ್ಥೆಯ ಶ್ರೇಯಸ್ಸಿನಲ್ಲಿ ದೀಪಾ ಅವರದ್ದು ಅದ್ವಿತೀಯ ಕೊಡುಗೆ ಸೇರಿದೆ. ರುಕ್ಮಿಣಿ ವಸಂತ್
“ಸಪ್ತ ಸಾಗರದಾಚೆ ಎಲ್ಲೊ’ ಸಿನೆಮಾ ಸರಣಿ ಮೂಲಕ ಪ್ರಸಿದ್ಧ ರಾದ ನಟಿ ರುಕ್ಮಿಣಿ ವಸಂತ್ ಲಂಡನ್‌ನ ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ಸ್ ನಲ್ಲಿ ನಟನೆಯ ತರಬೇತಿ ಪಡೆದರು.
“ಬೀರ್‌ಬಲ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, “ಬಾನ ದಾರಿಯಲ್ಲಿ’ ಮತ್ತಿತರ ಚಿತ್ರಗಳ ಮೂಲಕ ಮತ್ತಷ್ಟು ಮನೆಮಾತಾದರು. ಸದ್ಯ ಬಹು ನಿರೀಕ್ಷಿತ “ಬಘಿರ’ ಹಾಗೂ “ಭೈರತಿ ರಣಗಲ್’ ಚಿತ್ರಗಳಲ್ಲೂ ನಟಿಸಿದ್ದಾರೆ. ಸಂಧ್ಯಾ ಕಾಮತ್
ಉಡುಪಿಯ ಸಂಧ್ಯಾ ಸುಭಾಷ್ ಕಾಮತ್ ಸಂಗೀತ, ಉದ್ಯಮ, ಆರೋಗ್ಯ ಕ್ಷೇತ್ರಗಳಲ್ಲಿ ಕ್ರಿಯಾ ಶೀಲರು. “ಆಭರಣ’ ಸಂಸ್ಥೆಯ ನವನವೀನ ಚಿನ್ನಾಭರಣ ಮಾದರಿಗಳ ಹಿಂದಿರುವ ಶಕ್ತಿ. ಇದರ ಜತೆ ಸಂಗೀತ, ಯೋಗವೂ ಅಭಿರುಚಿ.
ಮಣಿಪಾಲದ ಸಂಗೀತ ಸಭಾದ ಟ್ರಸ್ಟಿ ಸಹ. ಮೂರೂ ಕ್ಷೇತ್ರಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿರುವ ಮಹಿಳೆ ಸಂಧ್ಯಾ.