Advertisement

ಕೆಎಫ್‌ಸಿ: ಕಟ್ಟಿ ಬೆಳೆಸಿದ ಸಾಹಸಗಾಥೆ

03:12 PM Jul 24, 2020 | Karthik A |

ಎಷ್ಟೋ ಮಂದಿ ಜೀವನದಲ್ಲಿ ತಮ್ಮದೇ ಆದ ಗುರಿ ಹೊಂದಿರುತ್ತಾರೆ. ಆದರೆ ಇಂಥವರಲ್ಲಿ ಕೆಲವರು ತಾವು ಅಂದುಕೊಂಡಿದ್ದನ್ನು ಸಾಧಿಸುವಲ್ಲಿ ವಿಫ‌ಲರಾಗುತ್ತಾರೆ. ಯಾಕೆಂದರೆ ಅಂತಹವರಿಗೆ ತಾಳ್ಮೆ ತುಂಬಾ ಕಡಿಮೆ.

Advertisement

ಒಂದೆರಡು ಸಲ ಗುರಿಯನ್ನು ಸಾಧಿಸಲು ಹೊರಡುತ್ತಾರೆ. ಅದರಲ್ಲಿ ವಿಫ‌ಲವಾದರೆ “ನನ್ನಿಂದ ಸಾಧ್ಯವಿಲ್ಲ’ ಎಂದು ಕೈ ಚೆಲ್ಲಿ ಕುಳಿತು ಬಿಡುತ್ತಾರೆ. ಆದರೆ ಸಾಧನೆಯ ಹಾದಿ ಅಲ್ಲಿಗೆ ಕೊನೆಯಾಗಬಾರದು. ಸತತ ಪ್ರಯತ್ನದಿಂದ ಗೆಲುವಿನ ಶಿಖರ ಏರಿದವರೊಬ್ಬರ ಯಶಸ್ಸಿನ ಕಥೆ ಇಲ್ಲಿದೆ.

ಕೆಎಫ್ಸಿ ಚಿಕನ್‌ ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಸಂಸ್ಥೆ ರಾತ್ರಿ ಬೆಳಗಾಗುವುದರೊಳಗೆ ಬೆಳೆದು ನಿಂತಿಲ್ಲ. ಇದರ ಹಿಂದೆ ಅಪಾರ ಶ್ರಮವಿದೆ, ಗೆಲ್ಲಲೇಬೇಕೆಂಬ ಶ್ರದ್ಧೆ ಇದೆ. ಅಮೆರಿಕದ ಕರ್ನಲ್‌ ಹಾರ್ಲಂಡ್‌ ಸ್ಯಾಂಡರ್ಸ್‌ ಎಂಬುವವರು ಈ ಕೆಎಫ್ಸಿ ಚಿಕನ್‌ ಅನ್ನು ಆರಂಭಿಸಿದವರು.

ಹದಿನೆಂಟು ಬಾರಿ ನಿರಾಶೆಗೊಂಡರೂ ಛಲ ಬಿಡದೆ ಕನಸನ್ನು ನನಸಾಗಿಸಿದ ರೀತಿಯೇ ಸ್ಫೂರ್ತಿದಾಯಕ. ಸ್ಯಾಂಡರ್ಸ್‌ ಅನೇಕ ಉದ್ಯಮಗಳನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದರು. ಆದರೆ ಪ್ರತಿ ಬಾರಿಯೂ ವಿಫ‌ಲರಾಗುತ್ತಿದ್ದರು.

ಕೊನೆಗೆ ತಮ್ಮ 40ನೇ ವಯಸ್ಸಿನಲ್ಲಿ ಕೋಳಿ ಮಾಂಸದ ಆಹಾರ ಮಾರಾಟ ಮಾಡಲು ಪ್ರಾರಂಭಿಸಿದರು. ಆದರೆ ಸಂಘರ್ಷ ಮತ್ತು ಯುದ್ಧಗಳಿಂದಾಗಿ ರೆಸ್ಟೋರೆಂಟ್‌ನ ಕನಸು ಅನೇಕ ಬಾರಿ ಕಮರಿತ್ತು. ಅನಂತರ ಅವರು ರೆಸ್ಟೋರೆಂಟ್‌ ಅನ್ನು ಪ್ರಾಂಚೈಸ್‌ ಮಾಡಲು ಪ್ರಯತ್ನಿಸಿದರು.

Advertisement

ಅವರ ಪಾಕ ವಿಧಾನ ಅಂತಿಮ ಅನುಮೋದನೆಗೆ ಮೊದಲು ಬರೋಬ್ಬರಿ 1,009 ಬಾರಿ ತಿರಸ್ಕರಿಸಲ್ಪಟ್ಟಿತ್ತು. ಸೋಲಿಗೆ ಕುಗ್ಗದೆ ನಿರಂತರವಾಗಿ ಪರಿಶ್ರಮ ಪಟ್ಟ ಫ‌ಲವಾಗಿ ಕೆಂಟುಕಿ ಫ್ರೈಡ್‌ ಚಿಕನ್‌ ಭಾರೀ ಯಶಸ್ಸು ಕಂಡಿತು. ಬಳಿಕ ಕೆಎಫ್ಸಿಯನ್ನು ಜಾಗತಿಕವಾಗಿ ವಿಸ್ತರಿಸಲಾಯಿತು. ಸ್ಯಾಂಡರ್ಸ್‌ ಅವರ ಮುಖದ ಚಿತ್ರವನ್ನು ಇಂದಿಗೂ ಲೋಗೊಗಳಲ್ಲಿ ಬಳಸಲಾಗುತ್ತಿದೆ.

ಕಂಪೆನಿಯನ್ನು ಸ್ಯಾಂಡರ್ಸ್‌ ಅವರು ಅದನ್ನು 1964ರಲ್ಲಿ ಜಾನ್‌ ವೈ. ಬ್ರೌನ್‌ ಜೂನಿಯರ್‌ ಮತ್ತು ಜ್ಯಾಕ್‌ ಸಿ. ಮಾಸ್ಸಿ ನೇತೃತ್ವದ ಸಂಸ್ಥೆಗೆ ಮಾರಾಟ ಮಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದ ಮೊದಲ ಅಮೆರಿಕನ್‌ ತ್ವರಿತ ಆಹಾರ ಸರಪಳಿಗಳಲ್ಲಿ ಕೆಎಫ್ಸಿ ಒಂದಾಗಿದೆ. 1960ರ ದಶಕದ ಮಧ್ಯಭಾಗದಲ್ಲಿ ಕೆನಡಾ, ಇಂಗ್ಲೆಂಡ್‌, ಮೆಕ್ಸಿಕೊ ಮತ್ತು ಜಮೈಕಾದಲ್ಲಿ ಮಳಿಗೆಗಳನ್ನು ತೆರೆಯಿತು. ಮುಂದಿನ ದಶಕಗಳಲ್ಲಿ ಕೆಎಫ್ಸಿ ಹಲವು ಏಳು ಬಿಳುಗಳನ್ನು ಕಂಡಿದ್ದು, ಹಲವು ಬ್ಯುಸಿನೆಸ್‌ ಮೆನ್‌ಗಳ ಕೈ ಪಾಲಾಗಿತ್ತು.  ಇವೆಲ್ಲದರ ನಡುವೆ ಕೆಎಫ್ಸಿ ಇಂದೂ ತನ್ನ ಆಹಾರಗಳಿಗೆ ತುಂಬಾ ಜನಮನ್ನಣೆಯನ್ನು ಉಳಿಸಿಕೊಂಡಿದೆ.

-ಶುಭಾ ಶರತ್‌, ಉರ್ವಸ್ಟೋರ್‌, ಮಂಗಳೂರು

(ಅತಿಥಿ ಅಂಗಳ: ಅಂಕಣ)

 

Advertisement

Udayavani is now on Telegram. Click here to join our channel and stay updated with the latest news.

Next