Advertisement
ಮಹಾನಗರ ಪಾಲಿಕೆಯಿಂದ ಅಲ್ಪ ಸ್ವಲ್ಪ ನೆರವು ಬಿಟ್ಟರೆ ನಮಗೇನೂ ಪರಿಹಾರ ದೊರೆತಿಲ್ಲ.ಈಬಾರಿ ಸರ್ಕಾರ ವಿಳಂಬವಾಗಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ. ದೊಡ್ಡ ಗಾತ್ರದ ಗಣಪತಿ ಬದಲಿಗೆ ಸಣ್ಣ ಗಾತ್ರದ ಗಣಪತಿ ಇಡಲು ಅವಕಾಶ ನೀಡಿದೆ. ಆದರೆ, ಸರ್ಕಾರದ ಷರತ್ತುಬದ್ಧ ಅನುಮತಿ ಗಣೇಶೋತ್ಸವ ಆಚರಣೆಗೆ ಹಿನ್ನಡೆಯಾಗಿದೆ.
Related Articles
Advertisement
ಮಹಾರಾಷ್ಟ್ರ ಸರ್ಕಾರ ಕಳೆದ 4 ತಿಂಗಳ ಹಿಂದೆಯೇ ನಿಬಂìಧಗಳನ್ನು ಹೇರಿತ್ತು. ಆದರೆ ರಾಜ್ಯ ಸರ್ಕಾರ ಕೇವಲ 5 ದಿನಗಳ ಹಿಂದೆ ನಿರ್ಬಂಧ ಹೇರಿರುವುದರಿಂದ ನಷ್ಟ ಅನುಭವಿಸುವಂತಾಗಿದೆ ಎಂದು ಮೂರ್ತಿ ತಯಾರಕರು ಅಸಮಾಧಾನ ವ್ಯಕ್ತಪಡಿಸಿದರು. 400 ರೂ.ಗಳಿಂದ 30 ಸಾವಿರ ರೂ. ವರೆಗಿನ ಗಣಪತಿ ನಿರ್ಮಾಣಕ್ಕೆ ಬೇಡಿಕೆ ಬರುತ್ತಿತ್ತು. ದೊಡ್ಡ ಮೂರ್ತಿಗಳು ಮಾರಾಟವಾದರೆ ಮಾತ್ರ ನಮಗೆ ಆದಾಯ. ಸಣ್ಣ ಗಣಪತಿ ಮೂರ್ತಿಗಳ ಮಾರಾಟದಿಂದ ಆದಾಯ ಕಡಿಮೆ. ಅದರಲ್ಲೂ ಹೊರ ಊರಿನ ವ್ಯಾಪಾರಿಗಳು ಲಗ್ಗೆ ಇಟ್ಟಿದ್ದು, ನಿಯಮ ಬಾಹಿರವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿಯನ್ನು ಕಡಿಮೆ ದರದಲ್ಲಿ ಕೊಡುತ್ತಿದ್ದಾರೆ.
ಸರ್ಕಾರ ಕೂಡಲೇ ಗಮನಹರಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕಲಾವಿದರ ಬದುಕಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಕುಂಬಾರಗುಂಡಿಯ ಗಣೇಶ ಮೂರ್ತಿ ತಯಾರಕರಾದ ಮನೋಜ್, ಗಣೇಶ್ , ರಾಜಣ್ಣ, ಮಂಜುನಾಥ್, ಶಾಂತರಾಜ್ ಮತ್ತು ಅವರ ಕುಟುಂಬದವರು ಮನವಿ ಮಾಡಿದ್ದಾರೆ.
ಸಾರ್ವಜನಿಕ ಗಣೇಶೋತ್ಸವ, ಮೆರವಣಿಗೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ನಿರ್ಬಂಧ ಇರುವುದರಿಂದ ಡೊಳ್ಳು, ಆರ್ಕೆಸ್ಟ್ರಾ ಸೇರಿ ವಿವಿಧ ಕಲಾತಂಡಗಳು, ಪೆಂಡಾಲ್ ನಿರ್ಮಿಸುವವರು, ವಿದ್ಯುತ್ ದೀಪಾಲಂಕಾರ, ತಿಂಡಿ ತಿನಿಸು ಮಾರಾಟಗಾರರು ಮೊದಲಾದವರಿಗೆ ಸಂಕಷ್ಟದ ಹೊತ್ತಲ್ಲೇ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದನ್ನೂ ಓದಿ : ರೈತರ ಹಿತಕಾಪಾಡುವುದೇ ನನ್ನಉದ್ದೇಶ: ಮಾಜಿ ಶಾಸಕ ಬಾಲಕೃಷ್ಣ