Advertisement
ದೀಪಾವಳಿ ಪ್ರಯುಕ್ತ “ಉದಯವಾಣಿ’ ಪತ್ರಿಕೆಯು ಸಂಜೀವ ಶೆಟ್ಟಿಸಿಲ್ಕ್ನವರ ಸಹಯೋಗದಲ್ಲಿ ಆಯೋಜಿಸಿದ್ದ “ರೇಷ್ಮೆ ಜತೆಗೆ ದೀಪಾವಳಿ’ ಫೋಟೋ ಸ್ಪರ್ಧೆಯ ವಿಜೇತರಿಗೆ ಶನಿವಾರ ಬಹುಮಾನ ವಿತರಿಸಿ ಮಾತನಾಡಿದರು.ಮಹಿಳೆ ಎಂದಿಗೂ ತನ್ನಲ್ಲಿ ಇದ್ದುದ ರಲ್ಲೇ ಖುಷಿಪಡುತ್ತಿದ್ದವಳು. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳ ಜೀವನದಲ್ಲಿ ಮದುವೆಗೆ ಸೀರೆ ಖರೀದಿಸುವುದೇ ಒಂದು ಸಂಭ್ರಮ. ಆದರೀಗ ಬದಲಾಗಿದೆ. ಆರ್ಥಿಕ ಸ್ವಾತಂತ್ರ್ಯದ ಹಿನ್ನೆಲೆ ಯಲ್ಲಿ ಮಹಿಳೆಯರು ತಮಗೆ ಇಷ್ಟವಾದದ್ದನ್ನು ಖರೀದಿಸಿ ಖುಷಿ ಪಡು ವಂತಾಗಿದೆ ಎಂದರು. ಮುಂದಿನ ವರ್ಷದಿಂದ ಸ್ಪರ್ಧೆಯಲ್ಲಿ ಪುರುಷರೂ ಭಾಗವಹಿಸುವಂತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಪ್ರೈ.ಲಿ. ಸಿಇಒ ವಿನೋದ್ ಕುಮಾರ್ ಮಾತನಾಡಿ, ಓದುಗರೊಂದಿಗೆ “ಉದಯವಾಣಿ’ಯು ದೀಪಾವಳಿ ಸಂಭ್ರಮದಲ್ಲಿ ಸಹಭಾಗಿಯಾಗ ಬೇಕೆಂದು ಈ ಸ್ಪರ್ಧೆ ಆಯೋಜಿಸಿತ್ತು. ಕಳೆದ ವರ್ಷ ಪ್ರಾರಂಭಿಸಿದ್ದ ವಿನೂತನ ಪರಿಕಲ್ಪನೆಯ ಸಾಂಪ್ರದಾಯಿಕ ಸ್ಪರ್ಶವಿರುವ ಈ ಸ್ಪರ್ಧೆಗೆ ಓದುಗರು ಅಭೂತಪೂರ್ವವಾಗಿ ಸ್ಪಂದಿಸಿದ್ದಾರೆ. ಈ ಬೆಳವಣಿಗೆ ನಮಗೆ ಇನ್ನಷ್ಟು ಉತ್ಸಾಹ ತುಂಬಿದೆ ಎಂದರು. ಪರಂಪರೆ ಮುಂದುವರಿಯಲಿ
ಪ್ರಾಯೋಜಕರಾದ ಎಂ. ಸಂಜೀವ ಶೆಟ್ಟಿ ಸಿಲ್ಕ್ ಆ್ಯಂಡ್ ಸಾರೀಸ್‌ನ ಮಾಲಕರಾದ ಎಂ. ಅಶ್ವಿತಾ ಮಹೇಂದ್ರ ಮಾತನಾಡಿ, ಭಾರತೀಯ ಸಂಸ್ಕೃತಿಯ ಸ್ಪರ್ಶವಿರುವ ರೇಷ್ಮೆ ಸೀರೆಗೆ ಮನ್ನಣೆ ತಂದು ಕೊಡುವ ನಿಟ್ಟಿನಲ್ಲಿ ಉದಯವಾಣಿ ಆಯೋಜಿಸಿದ ಈ ಸ್ಪರ್ಧೆ ಶ್ಲಾಘನೀಯ. ನಮ್ಮನ್ನೂ ಒಳಗೊಂಡಿದ್ದು ಖುಷಿ ತಂದಿದೆ. ಈ ಪರಂಪರೆ ಪ್ರತಿ ವರ್ಷ ಮುಂದುವರಿ ಯಲಿ ಎಂದು ಆಶಿಸಿದರು. ಸಂಸ್ಥೆಯ ಮಾಲಕ ಎಂ. ಮಹೇಂದ್ರ ಅತಿಥಿಯಾಗಿದ್ದರು.
Related Articles
Advertisement
ಬಹುಮಾನ ವಿಜೇತರುಮಲ್ಲಿಕಾ ಶೆಟ್ಟಿ, ವಿನುತಾ, ಶ್ರುತಿ ಹಾಗೂ ಶ್ರೇಯಾ ಬಜಪೆ ತಂಡ (ಪ್ರಥಮ), ಶೀತಲ್ ಎಸ್. ರಾವ್, ಸಿದ್ಧಿ ರಾವ್, ನೇಜಾರ್ ಉಡುಪಿ ತಂಡ (ದ್ವಿತೀಯ), ದೀಪಾ ಮಸ್ಕರೇನ್ಹಸ್, ಸವಿತಾ ಕೋಟ್ಯಾನ್, ಕವಿತಾ ಪಿ. ಸ್ವರೂಪ, ಹೇಮಲತಾ ಪೂಜಾರಿ, ಸರಸ್ವತಿ ಕೆ., ಸಬಾ ಅಫ್ರೀನ್, ಮಿನೋಲ್ ಶಮ್ರಿàನ್, ಉಜ್ವಲಾ ಕುಂಬಾರ್, ಲಲಿತಾ ಶೆಟ್ಟಿ, ಬ್ಲೇನ್ ಡಿಕುನ್ಹ, ತೃಪ್ತಿ ಶೆಟ್ಟಿ ಮಂಗಳೂರು ತಂಡದವರು (ತೃತೀಯ) ಬಹುಮಾನ ಪಡೆದುಕೊಂಡರು.
ಶ್ರಾವ್ಯಾ ಕೃಷ್ಣ, ಸೃಷ್ಟಿ ಕೃಷ್ಣ, ಭೂಮಿಕಾ, ಮೇಧಾ, ಜನಿ¾ತಾ, ಅಪೇಕ್ಷಾ ಬಜಪೆ ತಂಡ; ಶಶಿಕಲಾ ಕೆ. ಹೆಗ್ಡೆ, ಕರ್ತವ್ಯಾ ಜೈನ್ ಹಿರಿಯಂಗಡಿ ಕಾರ್ಕಳ ತಂಡ; ನೀತು ರಾಜೇಶ್, ನಿರೀಕ್ಷಾ, ಮನಸ್ವಿ, ಅಂಕಿತಾ ಪ್ರಿಯೇಶ್ ಶಾಂತಿಗೋಡು ಪುತ್ತೂರು ತಂಡ; ಮನೀಷಾ, ಅಲಿಷಾ, ಸ್ಟೆಫಿ, ಕಲ್ಯಾಣಪುರ, ಉಡುಪಿ ತಂಡ; ಬೆಳ್ಳಿಪ್ಪಾಡಿ ದಯಾ ವಿ. ರೈ, ಶರ್ಮಿಳಾ ಡಿ. ಮಾರ್ತಾ, ಭಾರತಿ ಬಿ. ರೈ, ಬೆಳ್ಳಿಪ್ಪಾಡಿ ಲಲಿತಾ ಭೋಜ ಶೆಟ್ಟಿ ಕೆಯ್ಯೂರು ಪುತ್ತೂರು ತಂಡ; ಸುಪ್ರಿಯಾ, ವಿಜೇತಾ, ಪದ್ಮಾ, ರೇಖಾ, ಮಂಜುಳಾ, ಚಂದ್ರಿಕಾ, ಗಾಯತ್ರಿ, ಸುಲತಾ, ನಿವೇದಿತಾ, ಪಲ್ಲವಿ ರಥಬೀದಿ, ಮಂಗಳೂರು ತಂಡ; ಚಿತ್ರಾ ಪೈ, ರಜನಿ ಪ್ರಭು, ಸುಮನಾ ಪ್ರಭು, ಸುಲತಾ ನಾಯಕ್, ದಿವ್ಯಾ ಶೆಣೈ, ವಿಜಯಾ ನಾಯಕ್, ವಿದ್ಯಾ ಭಟ್, ಶೋಭಾ ಪ್ರಭು ಪುತ್ತೂರು ತಂಡ; ಜ್ಯೋತಿ ಆರ್. ಶೆಟ್ಟಿ, ಅನುಪಮಾ ಬಳ್ಕೂರು ಕುಂದಾಪುರ ತಂಡ; ವಂದನಾ, ಶಿಲ್ಪಾ, ಪ್ರೀತಿ, ಅರ್ಚನಾ, ಶೃತಿ, ದಿವ್ಯಾ, ಪ್ರಿಯಾ, ರೇವತಿ, ಪ್ರಜ್ಞಾ ಕಾರ್ಕಳ ತಂಡವು ಸಮಾಧಾನಕರ ಬಹುಮಾನ ಪಡೆದುಕೊಂಡರು.