ಕುಷ್ಟಗಿ (ಕೊಪ್ಪಳ) : ಕನ್ನಡ ಭವನಗಳು ಯುವ ಸಾಹಿತಿಗಳು, ಬರಹಗಾರರ ಹುಮ್ಮಸ್ಸಿಗೆ ಪ್ರೇರಣೆ ಆಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಹೇಳಿದ್ದಾರೆ
ತಾಲೂಕಿನ ಹನುಮಸಾಗರ ದಲ್ಲಿ ವೆಬಿನಾರ್ ನಲ್ಲಿ ಕನ್ನಡ ಭವನ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇದನ್ನೂ ಓದಿ : ಹು-ಧಾ ಪಾಲಿಕೆಯಲ್ಲಿ ಮತ್ತೆ ಬಿಜೆಪಿಗೆ ಗೆಲುವು: ನಳಿನ್ ಕಟೀಲು ವಿಶ್ವಾಸ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ, ಗುಮಗೇರಾ, ತಾವರಗೇರಾ ದಲ್ಲಿ ಕನ್ನಡ ಸಾಹಿತ್ಯ ಭವನಗಳನ್ನು ಏಕಕಾಲದಲ್ಲಿ ಉದ್ಘಾಟಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕನ್ನಡ ಭವನಗಳ ನಿರ್ವಹಣೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷರಿಗೆ ವಹಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಈ ಭವನಗಳನ್ನು ಕನ್ನಡ ಸಾಹಿತ್ಯ ಕಾರ್ಯ ಚಟುವಟಿಗಳಿಗೆ ಬಳಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಕಸಾಪ ರಾಜ್ಯ ಪದಾಧಿಕಾರಿ ಶೇಖರ ಗೌಡ ಮಾಲಿಪಾಟೀಲ, ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ಬಾಕಳೆ, ಗ್ರಾ.ಪಂ. ಅದ್ಯಕ್ಷೆ ಶಂಕರಮ್ಮನಿರ್ವಾಣಿ, ಉಪಾದ್ಯಕ್ಷ ಮಂಜುನಾಥ ಹುಲ್ಲೂರು, ಕಸಾಪ ಅದ್ಯಕ್ಷ ಉಮೇಶ ಹಿರೇಮಠ, ಮಹಾಂತೇಶ ಅಗಸಿಮುಂದಿನ, ಬಸವರಾಜ ಹಳ್ಳೂರು, ವಿಶ್ವನಾಥ ಕನ್ನೂರು, ಅಬ್ದುಲ್ ಕರೀಂ ವಂಟೆಳಿ, ಮಹಾಂತೇಶ ಹಳ್ಳೂರು, ಲೆಂಕೆಪ್ಪ ವಾಲೀಕಾರ, ಶ್ರೀನಿವಾಸ ಜಾಗೀರದಾರ, ಪಿಡಿಓ ನಿಂಗಪ್ಪ ಮೂಲಿಮನಿ, ಮತ್ತೀತರಿದ್ದರು.
ಇದನ್ನೂ ಓದಿ : ಗುರುನಾರಾಯಣ “ಯಕ್ಷಗಾನ ಕಲಾ ಪ್ರಶಸ್ತಿ – 2021′ ಗೆ ಜಬ್ಟಾರ್ ಸಮೋ ಆಯ್ಕೆ