Advertisement
ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ತಹಸೀಲ್ದಾರ್ ಅವರ ನೇತೃತ್ವದಲ್ಲಿ ಕರೆದಿದ್ದ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
Related Articles
Advertisement
ಹಿರಿಯ ದಲಿತ ಮುಖಂಡ ಸಿ.ಜಿ,ಗಂಗಪ್ಪ ಮಾತನಾಡಿ ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಅದು ದಲಿತ ಕೇರಿಗಳಲ್ಲಿ ರಾತ್ರಿ ವೇಳೆಯಲ್ಲಿ ಶಾಂತಿ ಕದಡುವಂತೆ ಮಾಡಿದೆ, ಇದಕ್ಕೆ ಅಬಕಾರಿ ಅಧಿಕಾರಿಗಳು ಕಾರಣ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿದ ದಲಿತ ಅಶ್ವಥ್ ಇಡಗೂರು, ಗಂಗಸಂದ್ರ, ನಾಮಗೊಂಡ್ಲು ಇನ್ನಿತರೆ ಗಡಿ ಗ್ರಾಮದಲ್ಲಿ ಹೆಂಡ ಮದ್ಯ ಮಾರಾಟ ನಡೆಯುತ್ತಿದೆ ಇದನ್ನು ತಡೆಯಬೇಕು ಎಂದು ಒತಾಯ್ತಿಸಿದರು.
ದಲಿತರು ಸಾಗುವಳಿ ಮಾಡುತ್ತಿರುವ ಸರ್ಕಾರಿ ಜಮೀನನ್ನು ಬಗರ್‌ಹುಕಂ ಅಡಿಯಲ್ಲಿ ಪಾರಂ 50. 53 ಅರ್ಜಿಯಲ್ಲಿ ಸಲ್ಲಿಸಿದರವರಿಗೆ ಕೂಡಲೇ ಸಾಗುವಳಿ ಚೀಟಿ ನೀಡಬೇಕು ಎಂದು ಸನಂದ್‌ಕುಮಾರ್, ಚೆನ್ನಪ್ಪ, ಹುಲಿಕುಂಟೆ ಅಶ್ವಥ್ಥಪ್ಪ, ಸತ್ಯನಾರಾಯಣ್ ಜೆ.. ಗಂಗಾಧರ್ ಒತ್ತಾಯಿಸಿದರು.
ನರೇಗಾ ಕಾಮಗಾರಿಯಲ್ಲಿ ಅವ್ಯಹಾರ ನಡೆಯುತ್ತಿದೆ ಜೆಸಿಬಿ ಯಂತ್ರಗಳ ಮೂಲಕ ಕೆಲಸ ಮಾಡುತ್ತಿದ್ದಾರೆ ಎಂದು ದಲಿತ ಮುಖಂಡರಾದ ಜೆಕೆ ಗಂಗಾಧರ್ ಚೆನ್ನಪ್ಪ ಹುಲಿಕುಂಟೆ ಅಶ್ವತ್ಥಪ್ಪ ಆರೋಪಿಸಿದರು.
ಶೇಕಡಾ 22. 75 ಭಾರೀ ಗೋಲ್‌ಮಾಲ್ : ತಾಪಂ ಸೇರಿದ ಕಟ್ಟಡ ಇನ್ನಿತರೆ ಕಡೆಗಳಿಂದ ಬರುವ ಆಧಾಯದಲ್ಲಿ ಪ.ಜಾತಿ ಮತ್ತು ಪ.ಪಂಗಡ ಅಭಿವೃದ್ದಿಗೆ ಮೀಸಲು ಇಟ್ಟಿರುವ ಶೇ. 22. 75 ಹಣದವನ್ನು ಪ್ರತ್ಯೇಕ ಖಾತೆಯಲ್ಲಿಟ್ಟು ಅದನ್ನು ಪ.ಜಾತಿ, ಪ.ಪಂಗಡ ಅಭಿವೃದ್ದಿಗೆ ಬಳಕೆಮಾಡಬೇಕು ಆದರೆ ಅಧಿಕಾರಿಗಳು ಈ ತನಕ ಖಾತೆ ತೆರೆದಿಲ್ಲ ಹಾಗೂ ಕಾಟಚಾರಕ್ಕೆ ಕುಂದುಕೊರತೆ ಸಭೆಗಳನ್ನು ಕರೆಯುತ್ತಾರೆ ಎಂದು ಮಾಜಿ ತಾ.ಪಂ ಸದಸ್ಯ ನರಸಿಂಹಮೂರ್ತಿ ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ತಹಸೀಲ್ದಾರ್ ಎಚ್.ಶ್ರೀನಿವಾಸ್ ಸಮಾಜ ಕಲ್ಯಾಣ ಅಧಿಕಾರಿ ಮಹದೇವಸ್ವಾಮಿ,ವೃತ್ತ ನಿರೀಕ್ಷಕ ಶಶಿಧರ್, ಇ.ಒ.ಮುನಿರಾಜು,ಪರಿಶಿಷ್ಟ ವರ್ಗಗಳ ಇಲಾಖೆ ಮ್ಯಾನೇಜರ್ ಕೆ.ರವಿ ದಲಿತ ಮುಖಂಡರಾದ ಬಿಕೆ.ನರಸಿಂಹಮೂರ್ತಿ ಬಾಲಕೃಷ್ಣ, ವೆಂಕಟೇಶ್, ಬಾಲು,ಗಂಗಾಧರಪ್ಪ,ಇಡಗೂರು ವೈ.ಟಿ. ಪ್ರಸನ್ನಕುಮಾರ್ ಎಲ್‌ಎಲ್‌ಬಿ ಗಂಗಾಧರ್, ಕೃಷ್ಣಪ್ಪ ಮಾ.ಕ.ರಾಮಚಂದ್ರ ಎಸ್‌ಎಸ್‌ಡಿ ಸತ್ಯನಾರಾಯಣ್,ವೆಂಕಟೇಶ್,ನಾರಾಯಣಸ್ವಾಮಿ. ಮುಂತಾದವರು ಹಾಜರಿದ್ದರು.
ಇದನ್ನೂ ಓದಿ : ಜೆಡಿಎಸ್ ಗೆ ಹೋಗಿದ್ದಾಗ ಎಲ್ಲಿತ್ತು ಹಿಂದುತ್ವ: ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ