ಪಣಜಿ : ಕೋವಿಡ್ ಎರಡೂ ಲಸಿಕೆ ಪಡೆದು 14 ದಿನ ಕಳೆದ ಪ್ರವಾಸಿಗರಿಗೆ ಗೋವಾ ಪ್ರವೇಶಕ್ಕೆ ಅನುಮತಿ ನೀಡಬಹುದು ಎಂದು ತಜ್ಞ ಸಮೀತಿಯು ನೀಡಿದ್ದ ನಿರ್ಣಯದಂತೆಯೇ ಬಾಂಬೆ ಹೈ ಕೋರ್ಟ್ ನ ಗೋವಾ ಪೀಠ ಕೂಡ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಕೋರ್ಟ್ ನೀಡಿರುವ ಅನುಮತಿಯ ಹಿನ್ನೆಲೆಯಲ್ಲಿ ಕೋವಿಡ್ ಎರಡೂ ಲಸಿಕೆ ಪಡೆದ ಪ್ರವಾಸಿಗರು ಗೋವಾಕ್ಕೆ ಆಗಮಿಸಲು ಇದ್ದ ತೊಂದರೆ ದೂರವಾದಂತಾಗಿದೆ.
ಇದನ್ನೂ ಓದಿ : ಮದರಸಗಳಲ್ಲಿ ತಾಲಿಬಾನಿಗಳು ಸೃಷ್ಠಿಯಾಗುತ್ತಾರೆ, ಅಫ್ಘಾನ್ ಸ್ಥಿತಿ ನಮಗೂ ಬರಬಹುದು: ಸಿ.ಟಿ.ರವಿ
ಪ್ರತಿ ವರ್ಷ ಅಕ್ಟೋಬರ್ ತಿಂಗಳಿಂದ ಗೋವಾದಲ್ಲಿ ಪ್ರವಾಸೋದ್ಯಮ ಸೀಸನ್ ಆರಂಭಗೊಳ್ಳುತ್ತದೆ. ಆದರೆ ಕಳೆದ ವರ್ಷ ಕೋವಿಡ್ ಸೋಂಕಿನಿಂದಾಗಿ ಪ್ರವಾಸಿ ಸೀಸನ್ ನಲ್ಲೂ ಗೋವಾಕ್ಕೆ ಪ್ರವಾಸಿಗರು ಆಗಮಿಸಲು ಸಾಧ್ಯವಾಗಿರಲಿಲ್ಲ.
ಲಾಕ್ ಡೌನ್ ಸಡಿಲಿಕೆಯ ನಂತರವೂ ಗೋವಾಕ್ಕೆ ಪ್ರವಾಸಿಗರು ಆಗಮಿಸಲು ಸಾಧ್ಯವಾಗಿರಲಿಲ್ಲ. ಇದೀಗ ಬಾಂಬೆ ಹೈ ಕೋರ್ಟ್ ನ ಗೋವಾ ನ್ಯಾಯ ಪೀಠವು ಕೋವಿಡ್ ಎರಡೂ ಲಸಿಕೆ ಪಡೆದ ಪ್ರವಾಸಿಗರಿಗೆ ಗೋವಾ ಪ್ರವೇಶಕ್ಕೆ ಅನುಮತಿ ನೀಡಿರುವುದರಿಂದ ಪ್ರವಾಸಿಗರು ಕೋವಿಡ್ ತಪಾಸಣೆ ಮಾಡಿಸದೆಯೇ ನೇರವಾಗಿ ಗೋವಾಕ್ಕೆ ಆಗಮಿಸಬಹುದಾಗಿದೆ.
ಇದನ್ನೂ ಓದಿ : ನಿಮ್ಮಿಷ್ಟದ ಬೈಕ್ ಗಳನ್ನು ಹಬ್ಬಗಳ ಸೀಸನ್ ನಲ್ಲಿ ರಿಯಾಯಿತಿಯೊಂದಿಗೆ ನಿಮ್ಮದಾಗಿಸಿಕೊಳ್ಳಿ..!