Advertisement

ಗೋವಾ ಗಡಿ ತೆರೆಯಲು ಆತುರು ಬೇಡ : ಕಾಂಗ್ರೆಸ್

06:06 PM Aug 18, 2021 | Team Udayavani |

ಪಣಜಿ : ಗೋವಾದಲ್ಲಿ ಕೋವಿಡ್ ಸೋಂಕಿತರು ಕಡಿಮೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೋವಾ ಗಡಿಗಳನ್ನು ಓಪನ್ ಮಾಡಿ ಹೊರ ರಾಜ್ಯಗಳಿಂದ ಗೋವಾಕ್ಕೆ ಪ್ರವಾಸಿಗರು ಬರಮಾಡಿಕೊಳ್ಳಲು ಸರ್ಕಾರ ನೋಡುತ್ತಿದೆ. ಆದರೆ ಇದಕ್ಕೂ ಮುನ್ನ ಸರ್ಕಾರ ಗೋವಾದ ಎಲ್ಲಾ ಗಡಿಗಳಲ್ಲಿ ಸುಸಜ್ಜಿತ ಕೋವಿಡ್ ತಪಾಸಣಾ ಕೇಂದ್ರವನ್ನು ಸ್ಥಾಪನೆ ಮಾಡಬೇಕು, ನಂತರ ಗಡಿಗಳನ್ನು ತೆರೆಯಬೇಕು ಎಂದು ಗೋವಾ ಕಾಂಗ್ರೇಸ್ ಪಕ್ಷವು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗೆ ಮನವಿ ಮಾಡಿದೆ.

Advertisement

ಕಾಂಗ್ರೇಸ್ ಪ್ರದೇಶ ಸಮೀತಿಯ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಜನಾ ಭಂಡಾರಿ, ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ, ಒಂದು ವೇಳೆ ಸರ್ಕಾರ ಆತುರದಲ್ಲಿ ಯಾವುದೇ ನಿರ್ಣಯ ತೆಗೆದುಕೊಂಡರೂ ಕೂಡ ಕಾಂಗ್ರೇಸ್ ಪಕ್ಷ ಅದಕ್ಕೆ ವಿರೋಧ ವ್ಯಕ್ತಪಡಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಪ್ರವಾಹ ಪರಿಹಾರಕ್ಕಾಗಿ ಮುಖ್ಯಮಂತ್ರಿ ಭೇಟಿ ಮಾಡಿದ ಮಾಜಿ ಸಚಿವ ಹುಕ್ಕೇರಿ ನೇತೃತ್ವದ ನಿಯೋಗ

ಗೋವಾದಲ್ಲಿ ಜುಲೈ 31 ರ ಒಳಗೆ ಶೇ 100 ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡುವ ಉದ್ದೇಶ ಹೊಂದಿದ್ದ ಸರ್ಕಾರದ ಬಳಿ ಅದು ಸಾಧ್ಯವಾಗಲಿಲ್ಲ. ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗೋವಾ ಗಡಿ ತೆರೆಯಲು ಆತುರ ಬೇಡ. ಗೋವಾದಲ್ಲಿ ಕರೋನಾ ಸೋಂಕು ಹರಡಬಾರದು ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸದ್ಯ ಕ್ಯಾಸಿನೊ, ಅದಿರು ಸಾಗಾಟ,ದ ಮೇಲಿನ ನಿರ್ಬಂಧವನ್ನು ಮುಂದುವರಿಸಬೇಕು ಎಂದು ಕಾಂಗ್ರೇಸ್ ಒತ್ತಾಯ ಮಾಡಿದೆ.

ಇದನ್ನೂ ಓದಿ : ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳ ಮುಖ್ಯಮಂತ್ರಿ ಭೇಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next