Advertisement

ಓದುಗ ಸಮೂಹದ ಸಂತೃಪ್ತಿಯಿಂದ ಧನ್ಯತೆ: ಡಾ|ಸಂಧ್ಯಾ ಪೈ

02:36 AM Mar 23, 2022 | Team Udayavani |

ಮಂಗಳೂರು: ಉದಯವಾಣಿ ದೀಪಾವಳಿ ಧಮಾಕಾ ಸ್ಪರ್ಧೆಗೆ ಪ್ರತೀ ವರ್ಷ ಓದುಗ ಸಮೂಹದಿಂದ
ವ್ಯಕ್ತವಾಗುತ್ತಿರುವ ಸ್ಪಂದನೆ ಅಪೂರ್ವವಾದುದು. ಓದುಗ ಸಮೂಹದ ಸಂತೃಪ್ತಿ ನಮ್ಮಲ್ಲಿ ಧನ್ಯತಾ ಭಾವ ಮೂಡಿಸಿದೆ. ಇದಕ್ಕೆ ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ಸಹಯೋಗ ಹರ್ಷ ತಂದಿದೆ ಎಂದು “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಹೇಳಿದರು.

Advertisement

ಉದಯವಾಣಿ ಮತ್ತು ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ ಉದಯವಾಣಿ ದೀಪಾವಳಿ ಧಮಾಕಾ ಸ್ಪರ್ಧೆಯ ವಿಜೇತರಿಗೆ ಮಂಗಳೂರಿನಲ್ಲಿ ಮಂಗಳವಾರ ನಡೆದ ಬಹುಮಾನ ವಿತರಣೆ ಸಮಾರಂಭದ ಮುಖ್ಯಅತಿಥಿಗಳಾಗಿ ಅವರು ಮಾತನಾಡಿದರು.

ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ನ ಮಾಲಕ ರವೀಂದ್ರ ಶೇಟ್‌ ಅವರು ಕಳೆದ ಕೆಲವು ವರ್ಷಗಳಿಂದ ಪ್ರಾಯೋಜಕತ್ವ ನೀಡುತ್ತ ಬರುತ್ತಿದ್ದಾರೆ. ಹೃದಯ ವೈಶಾಲ್ಯ ಮತ್ತು ಕೊಡುವ ಮನಸ್ಸು ಇದ್ದಾಗ ಮಾತ್ರ ಇದು ಸಾಧ್ಯವಾಗುತ್ತದೆ. ರವೀಂದ್ರ ಶೇಟ್‌ ಮತ್ತು ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ಸಂಸ್ಥೆಯನ್ನು ಅಭಿನಂದಿಸುತ್ತೇನೆ ಮತ್ತು ಉದಯವಾಣಿಯ ಜತೆಗಿನ ಈ ಸಂಬಂಧ ನಿರಂತರವಾಗಿ ಮುಂದುವರಿಯಲಿ ಎಂದು ಡಾ| ಸಂಧ್ಯಾ ಎಸ್‌. ಪೈ ಅವರು ಹಾರೈಸಿದರು.

ಉದಯವಾಣಿ ದೀಪಾವಳಿ ಧಮಾಕಾ ಸ್ಪರ್ಧೆಯಲ್ಲಿ ರಾಜ್ಯ ಮತ್ತು ದೇಶದಲ್ಲಿ ವ್ಯಾಪಿಸಿರುವ ಓದುಗ ಬಳಗ ಬಹಳ ಆಸಕ್ತಿ ವಹಿಸಿ ಭಾಗವಹಿಸುತ್ತಿದೆ. ಸ್ಪರ್ಧೆಯಲ್ಲಿ ವಿಜೇತರಾದವರನ್ನು ಮತ್ತು ಭಾಗವಹಿಸಿದ ಎಲ್ಲರನ್ನೂ ಅಭಿನಂದಿಸುತ್ತಿದ್ದೇನೆ. ಮುಂದೆಯೂ ಓದುಗರ ಸ್ಪಂದನೆ, ಅಭಿಮಾನ ಇದೇ ರೀತಿ ಮುಂದುವರಿಯಲಿ ಎಂದರು.

ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ನ ಮಾಲಕ ರವೀಂದ್ರ ಶೇಟ್‌ ಅವರು ಅಧ್ಯಕ್ಷತೆ ವಹಿಸಿದ್ದರು. ಕಳೆದ ಕೆಲವು ವರ್ಷಗಳಿಂದ ನಮ್ಮ ಸಂಸ್ಥೆಯು ಉದಯವಾಣಿ ಸಂಸ್ಥೆಯೊಂದಿಗೆ ಈ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ನಮ್ಮ ಸಂಸ್ಥೆಯ ಹಿರಿಯರಾದ ಎಸ್‌.ಎಲ್‌. ಶೇಟ್‌ ಅವರ 100ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇವೆ. ಇದೇ ಸಂದರ್ಭ ನಮ್ಮ ಸಂಸ್ಥೆಯು ವಜ್ರಮಹೋತ್ಸವ ಸಂಭ್ರಮದಲ್ಲಿದ್ದು, ಉದಯವಾಣಿಯ ಸುವರ್ಣ ಸಂಭ್ರಮದೊಂದಿಗೆ ಸೇರಿಕೊಂಡು ಈ ಸ್ಪರ್ಧೆಯನ್ನು ನಡೆಸಲು ಹೆಮ್ಮೆಪಡುತ್ತೇವೆ ಎಂದು ಹೇಳಿದರು.

Advertisement

ಉದಯವಾಣಿ ದೀಪಾವಳಿ ಧಮಾಕಾ ಸ್ಪರ್ಧೆ ಅಚ್ಚುಮೆಚ್ಚಿನ ಸ್ಪರ್ಧೆಯಾಗಿದ್ದು ಪ್ರತೀ ವರ್ಷವೂ ಅತ್ಯಂತ ಸಂತಸದಿಂದ ಭಾಗವಹಿಸುತ್ತಿದ್ದೇವೆ ಎಂದು ಬಹುಮಾನ ವಿಜೇತರ ಪರವಾಗಿ ವೆಂಕಟೇಶ್‌ ಭಟ್‌ ಕಟಪಾಡಿ ಮತ್ತು ಝಯಾನ್‌ ಮುಹಮ್ಮದ್‌ ಝಾಕಿರಾ ಅಭಿಪ್ರಾಯಪಟ್ಟರು. ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ನ ಆಡಳಿತ ಪಾಲುದಾರ ಶರತ್‌ ಶೇಟ್‌ ಮತ್ತು ಪ್ರಸಾದ್‌ ಶೇಟ್‌, ದೀಪ್ತಿ ಶರತ್‌ ಶೇಟ್‌ ಉಪಸ್ಥಿತರಿದ್ದರು.

ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರ್‌ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು.
ಮಂಗಳೂರು ಮಾರುಕಟ್ಟೆ ವಿಭಾಗದ ಸೀನಿಯರ್‌ ಮ್ಯಾನೇಜರ್‌ ಸತೀಶ್‌ ಮಂಜೇಶ್ವರ ಅವರು ವಿಜೇತರ ವಿವರ ನೀಡಿದರು. ವರದಿಗಾರ ದಿನೇಶ್‌ ಇರಾ ನಿರೂಪಿಸಿದರು. ಇದೇ ಸಂದರ್ಭ ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ನ ಆದಿ ಗ್ರೂಪ್‌ನ ಚಿನ್ನದ ಸ್ಕೀಂನ ಮಾಸಿಕ ಡ್ರಾವನ್ನು ಡಾ| ಸಂಧ್ಯಾ ಎಸ್‌. ಪೈ ಅವರು ನೆರವೇರಿಸಿದರು.

ಪ್ರತಿಷ್ಠೆಯ ಸ್ಪರ್ಧೆ
ಉದಯವಾಣಿ ದೀಪಾವಳಿ ಧಮಾಕಾ ಸ್ಪರ್ಧೆಯಲ್ಲಿ ಓದುಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರತೀ ವರ್ಷ ಭಾಗವಹಿಸುತ್ತಿದ್ದಾರೆ. ನೂರಾರು ಮಂದಿ ಈಗಾಗಲೇ ಬಹುಮಾನಗಳನ್ನು ಗಳಿಸಿರುತ್ತಾರೆ. ಅತ್ಯಂತ ಪ್ರತಿಷ್ಠೆಯ ಈ ಸ್ಪರ್ಧೆಯ ಪ್ರಾಯೋಜಕತ್ವವನ್ನು ವಹಿಸಲು ನಾವು ಹೆಮ್ಮೆ ಪಡುತ್ತೇವೆ ಎಂದು ರವೀಂದ್ರ ಶೇಟ್‌ ಅವರು ಹೇಳಿದರು.

ದೀಪಾವಳಿ ಬಹುಮಾನ ವಿಜೇತರು
ವೆಂಕಟೇಶ್‌ ಭಟ್‌ ಕಟಪಾಡಿ ಅವರು ಬಂಪರ್‌ ಬಹುಮಾನ ಚಿನ್ನದ ನೆಕ್ಲೇಸ್‌, ಕುಂದಾಪುರದ ದಿನೇಶ್‌ ಜಿ.ವಿ. ಅವರು ಪ್ರಥಮ ಬಹುಮಾನ ಚಿನ್ನದ ಬ್ರಾಸ್‌ಲೆಟ್‌, ಮಂಗಳೂರಿನ ಎನ್‌. ರಘುವೀರ್‌ ಕಾಮತ್‌ ಹಾಗೂ ಮಾರ್ನಮಿಕಟ್ಟೆಯ ಪ್ರಕಾಶ್‌ ಕೆ.ಬಿ. ಅವರು ದ್ವಿತೀಯ ಬಹುಮಾನ ಚಿನ್ನದ ಉಂಗುರ, ದೇರಳಕಟ್ಟೆಯ ಜಸ್ವಿನ್‌ ಡಿ’ಸೋಜಾ, ಬೆಂಗಳೂರಿನ ಆನಂದ ಮಹಿವೈ, ಕಳತ್ತೂರು ಭಾಗ್ಯಶ್ರೀ ಕಾಮತ್‌ ಅವರು ತೃತೀಯ ಬಹುಮಾನ ಚಿನ್ನದ ಪೆಂಡೆಂಟ್‌ ವಿಜೇತರಾಗಿದ್ದಾರೆ.

ಬಂಟ್ವಾಳದ   ಶ್ರೀನಿವಾಸ ಆಚಾರ್ಯ, ಬ್ರಹ್ಮಾವರ ಹಿಲಿಯಾಣದ ಸುದರ್ಶನ್‌, ಕಿನ್ನಿಗೋಳಿಯ ಪುನರೂರಿನ ಹೇಮಂತ್‌ ಕುಮಾರ್‌, ಕಾಸರಗೋಡು ಬಾಯಾರಿನ ಝಯಾನ್‌ ಮುಹಮ್ಮದ್‌ ಝಾಕಿರಾ, ಮೂಡುಬಿದಿರೆಯ ಎಂ. ರೇಖಾ, ಕಾರ್ಕಳ ಬೈಲೂರಿನ ಭಕ್ತಿ ಶೆಟ್ಟಿ, ರಾಣಿಬೆನ್ನೂರಿನ ರಾಘವೇಂದ್ರ ಶಿವಪ್ಪ ಹಾವನೂರ, ಪರ್ಕಳದ ಲಕ್ಷ್ಮೀ, ಸಾಲೆತ್ತೂರಿನ ಎಂ. ಸಿತಾರಾ ಶೆಟ್ಟಿ, ಶಿರ್ವದ ಸುನೀತಾ ವಿ. ಕಾಸ್ತಲಿನೋ, ಉಪ್ಪುಂದದ ಶಾಂತಾರಾಮ, ಮುಂಡಾಜೆಯ ಶ್ರದ್ಧಾ, ಪುತ್ತೂರಿನ ನಾರಾಯಣ ಕಾರಂತ, ಮೈಸೂರಿನ ಅನುಪಮಾ ಸಿ.ಎಸ್‌., ಕಲ್ಬುರ್ಗಿಯ ವಿಜಯೇಂದ್ರ ಕುಲಕರ್ಣಿ, ಚಳ್ಳಕೆರೆಯ ಎಂ. ವಾಸುದೇವ ರಾವ್‌, ಮುಂಬಯಿ ಬಾಯಂದರ್‌ನ ಎನ್‌. ರಾಜಾರಾಮ್‌ ಹೆಬ್ಟಾರ್‌, ಮಂಗಳೂರು ಮಣ್ಣಗುಡ್ಡೆಯ ವಿಶ್ವತ್‌ ಪಿ. ಭಟ್‌, ಸುಳ್ಳ ಬೆಳ್ಳಾರೆಯ ಕೆ. ವಿಘ್ನೇಶ್ವರ, ಮಂಗಳೂರು ಕೊಡಿಯಾಲ್‌ಬೈಲ್‌ನ ವಿನ್ಸೆಂಟ್‌ ಫ‌ುರ್ಟಾಡೋ ಪ್ರೋತ್ಸಾಹಕ ಬಹುಮಾನ ವಿಜೇತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next