Advertisement
“ಉದಯವಾಣಿ’ ದೀಪಾವಳಿ ವಿಶೇಷಾಂಕವು ಲೇಡಿಹಿಲ್‌ನ ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಸಹಯೋಗದಲ್ಲಿ ನಡೆಸಿದ್ದ “ದೀಪಾವಳಿ ಧಮಾಕಾ’ದಲ್ಲಿ ವಿಜೇತರಾದವರಿಗೆ ಡೈಮಂಡ್ ಹೌಸ್ ಮಳಿಗೆಯಲ್ಲಿ ಗುರುವಾರ ಆಯೋಜಿಸಿದ್ದ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸ್.ಎಲ್. ಶೇಟ್ ಡೈಮಂಡ್ ಹೌಸ್ “ಉದಯವಾಣಿ’ಯೊಂದಿಗೆ ಆರಂಭದಿಂದಲೂ ಉತ್ತಮ ಸಂಬಂಧ ಹೊಂದಿದೆ. ಕಳೆದ 72 ವರ್ಷಗಳಲ್ಲಿ ಸಂಸ್ಥೆ ಬೆಳೆದು ಬಂದ ದಾರಿ ಅದ್ವಿತೀಯ. ಇಂತಹ ಸಂಸ್ಥೆಯೊಂದಿಗೆ ಸೇರಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಖುಷಿಯ ವಿಚಾರ ಎಂದರು.
ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ. ಸಿಇಒ ವಿನೋದ್ ಕುಮಾರ್ ಮಾತನಾಡಿ, ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಜತೆ ಸೇರಿ ಇಂತಹ ಕಾರ್ಯಕ್ರಮ ಆಯೋಜಿಸಲು ಸಂಸ್ಥೆಯ ಮಾಲಕರಾದ ರವೀಂದ್ರ ಶೇಟ್ ಅವರ ಪ್ರೋತ್ಸಾಹ ಮತ್ತು ಪ್ರೇರಣೆಯೇ ಕಾರಣ. ಉದಯವಾಣಿ ಆರಂಭವಾದಾಗ ಮೊದಲು ಜಾಹೀರಾತು ನೀಡಿ ಸಹಕರಿಸಿದ್ದ ಸಂಸ್ಥೆಗಳ ಪೈಕಿ ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಕೂಡ ಒಂದು ಎನ್ನಲು ಹೆಮ್ಮೆಯಾಗುತ್ತಿದೆ ಎಂದರು. ಸುವರ್ಣ ಸಂಭ್ರಮದಲ್ಲಿರುವ ಉದಯವಾಣಿ ಈ ವರ್ಷ ಓದುಗರೊಂದಿಗೆ ಸನಿಹವಾಗಲು ಮುಂದೆಯೂ ಹಲವಾರು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು. ಬಂಪರ್ ಬಹುಮಾನ ವಿಜೇತೆ ಹೆಬ್ರಿ ಸಂತೆಕಟ್ಟೆಯ ನಂದಿತಾ ಕಾಮತ್ ಮತ್ತು ಪ್ರಥಮ ಬಹುಮಾನ ವಿಜೇತರಾದ ಮಂಗಳೂರು ಮೇರಿಹಿಲ್‌ನ ಕಾವೇರಿ ಜಿ. ಭಟ್ ಅನಿಸಿಕೆ ವ್ಯಕ್ತಪಡಿಸಿದರು. ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನ ಶರತ್ ಶೇಟ್, ದೀಪಾ ಶರತ್ ಶೇಟ್, ಪ್ರಸಾದ್ ಶೇಟ್, ಪ್ರಸನ್ನ ಶೇಟ್, ಕಂಚನ್ ಶೇಟ್ ಮೊದಲಾದವರು ಉಪಸ್ಥಿತರಿದ್ದರು. ಉದಯವಾಣಿ ಮ್ಯಾಗಝಿನ್ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಆನಂದ್ ಕೆ. ಬಹುಮಾನಿತರ ಪಟ್ಟಿ ವಾಚಿಸಿದರು. ಮ್ಯಾಗಝಿನ್ ಎಡಿಟರ್ ಪೃಥ್ವಿರಾಜ್ ಕವತ್ತಾರು ಸ್ವಾಗತಿಸಿದರು. ಉದಯವಾಣಿ ಮಾರುಕಟ್ಟೆ ವಿಭಾಗ ಮುಖ್ಯಸ್ಥ ರಾಮಚಂದ್ರ ಮಿಜಾರ್ ವಂದಿಸಿದರು. ಮಂಗಳೂರು ಸುದ್ದಿ ವಿಭಾಗ ಮುಖ್ಯಸ್ಥ ಮನೋಹರ ಪ್ರಸಾದ್ ನಿರೂಪಿಸಿದರು.
Related Articles
ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಮಾಲಕ ರವೀಂದ್ರ ಶೇಟ್ ಮಾತನಾಡಿ, ಓದುಗರಿಗೆ ಪ್ರೋತ್ಸಾಹ ನೀಡುವಲ್ಲಿ ಉದಯವಾಣಿ ಮುಂಚೂಣಿಯಲ್ಲಿದೆ. ಪತ್ರಿಕೆಯ ದೀಪಾವಳಿ ವಿಶೇಷಾಂಕಕ್ಕೆ ಹಲವರು ಎದುರು ನೋಡುತ್ತಿರುತ್ತಾರೆ. ಇದರಲ್ಲಿ ಬರಹ ಶೈಲಿ, ವಿಚಾರ ಅನಾವರಣ ಮತ್ತು ಸಂಸ್ಕೃತಿಗೆ ಒತ್ತು ನೀಡುತ್ತಾ ಬರುತ್ತಿರುವುದೇ ಈ ತವಕಕ್ಕೆ ಕಾರಣ. ಇಂಥ ಪತ್ರಿಕೆಯೊಂದಿಗೆ ಬಹುಮಾನ ಪ್ರಾಯೋಜಿಸಲು ಅವಕಾಶ ಪಡೆದು ಕೊಂಡಿರುವುದಕ್ಕೆ ಖುಷಿಯಿದೆ. ಅದರಲ್ಲಿಯೂ ಈ ಬಹುಮಾನ ವಿತರಣೆ ಸಮಾರಂಭವನ್ನು ನಮ್ಮ ಈ ಡೈಮಂಡ್ ಶೋರೂಂನಲ್ಲಿಯೇ ಆಯೋಜಿಸಿರುವುದು ಸರಸ್ವತಿ (ಉದಯವಾಣಿ) ಮತ್ತು ಲಕ್ಷ್ಮಿಯ (ಎಸ್.ಎಲ್. ಶೇಟ್ ಡೈಮಂಡ್ ಹೌಸ್) ಸಮಾಗಮದಂತೆ ಎಂದು ಹರ್ಷ ವ್ಯಕ್ತಪಡಿಸಿದರು.
Advertisement