Advertisement

ಕಲಾವಿದರಿಗೆ ಅವಕಾಶ ಕಲ್ಪಿಸಲು ಯತ್ನ

12:36 PM Sep 04, 2021 | Team Udayavani |

ದಾವಣಗೆರೆ: ಅನುದಾನದ ಕೊರತೆ ಹಾಗೂ ಕೋವಿಡ್‌ ಹಿನ್ನೆಲೆಯಲ್ಲಿ ಬಹುತೇಕ ‌ ಕ ‌ಲಾವಿದರಿಗೆ ಪ್ರಸ್ತುತ ಪ್ರತಿಭಾ ಪ್ರದರ್ಶನಕ್ಕೆ ಅವ‌ಕಾಶ ಸಿಗದೇ ಇರಬಹುದು. ಆದರೇ ಮುಂದಿನ ದಿನಗಳಲ್ಲಿ ಅನುದಾನ ಬಂದ ನಂತರ ‌ ಹೆಚ್ಚು ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಹೇಳಿದರು.

Advertisement

ನಗರದ ‌ ಕುವೆಂಪು ಕನ್ನಡ ‌ ಭವನದಲ್ಲಿ ಕ‌ರ್ನಾಟಕ ‌ ಜಾನಪದ ‌ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನ‌ಡೆದ “ಜಾನಪದ ‌ ಸಂಭ್ರಮ’ ಕಾರ್ಯಕ್ರಮವನ್ನು ರಾಗಿ ಬೀಸುವ ಮೂಲಕ ಹಾಗೂ ಒನಕೆಯಿಂದ ಭತ್ತ ಕುಟ್ಟುವ ‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ತಾವು ಮಾಡುವ ‌ ಕಾಯಕದಲ್ಲಿ ದೇವರನ್ನು ಕಾಣಬೇಕು. ಎಂಥದೇ ಸಂಕಷ್ಟದ ಸಂದರ್ಭಗ‌ಳು ಎದುರಾದರೂ ಧೈರ್ಯವಾಗಿ ಎದುರಿಸಬೇಕು. ಸಂಕಷ್ಟಕ್ಕೆ ಹೆದರಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದರು.

ಜಾನಪದ ವಿದ್ವಾಂಸ ‌ ಡಾ| ಎಂ.ಜಿ. ಈಶ್ವರಪ್ಪ ಮಾತನಾಡಿ, ಜಾಗತೀಕರಣ, ನಗರೀಕರಣ, ಆಧುನೀಕರಣಗಳಿಂದ ಜಾನಪ‌ದದ ಮೂಲ ಗುಣವನ್ನು ಬದಲಾಯಿಸಲು ಸಾಧ್ಯವಿಲ್ಲ. ಶ್ರಮದ ಜೊತೆಗೆ ಸಾಹಿತ್ಯ ಸೃಷ್ಟಿಸುವುದನ್ನು ಜನಪದರಲ್ಲಿ ಕಾಣಲು ಸಾಧ್ಯವಿದೆ. ಜಾನಪದ ಆಧುನಿಕವಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಬೀಸುವ ‌ ಕಲ್ಲು, ಒನಕೆ ಮುಂತಾದ ಹಳ್ಳಿಗರು ಬಳಕೆ ಮಾಡುತ್ತಿದ್ದ ವಸ್ತುಗಳು ಕೇವಲ ಪ್ರದರ್ಶನದ ವಸ್ತುಗಳಾಗಿವೆ ಎಂದು ವಿಷಾದಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್‌ ಡಿಸೋಜ ಮಾತನಾಡಿದರು.ಕ ‌ನ್ನಡ ಸಾಹಿತ್ಯ ಪರಿಷ‌ತ್‌ ಜಿಲ್ಲಾಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ್‌ ಕುರ್ಕಿ, ಕ ‌ನ್ನಡ ‌ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ‌ ರವಿಚಂದ್ರ ಉಪಸ್ಥಿತರಿದ್ದರು. ಜಾನಪದ ಕ ‌ಲಾವಿದ ‌ ಯುಗಧರ್ಮ ರಾಯಣ್ಣ ತತ್ವಪದ ಹಾಡಿದರು. ಜಾನಪದ ಅಕಾಡೆಮಿ ಸದಸ್ಯೆ ರುದ್ರಾಕ್ಷಿಬಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ ‌ರ್ನಾಟಕ ಜಾನಪದ ‌ ಅಕಾಡೆಮಿ ರಿಜಿಸ್ಟ್ರಾರ್‌ ಎನ್‌. ನಮೃತಾ ಸ್ವಾಗತಿಸಿದರು. ರಾಘವೇಂದ್ರ ನಾಯರಿ ನಿರೂಪಿಸಿದರು. ರವಿಚಂದ್ರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next