ದಾವಣಗೆರೆ: ಬಿಎಸ್‌ಎನ್‌ಎಲ್ ಅಧಿಕಾರಿಗಳು ಗ್ರಾಹಕರಿಗೆ ದೂರು, ದೋಷರಹಿತ ಉತ್ತಮ ಸೇವೆ ಒದಗಿಸುವ ಮೂಲಕ ಸಂಸ್ಥೆಗೆ ಲಾಭ ತರಬೇಕು. ಸಾಧ್ಯವಾಗದೇ ಹೋದಲ್ಲಿ ಸ್ವಯಂ ನಿವೃತ್ತಿ ಪಡೆದು, ಮನೆಗೆ ಹೋಗಿ.. ಇದು ಶುಕ್ರವಾರ ನಡೆದ ದೂರವಾಣಿ ಸಲಹಾ ಸಮಿತಿ ಸಭೆಯಲ್ಲಿ ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳನ್ನ ತರಾಟಗೆ ತೆಗೆದುಕೊಂಡ ಪರಿ.
ಬಿಎಸ್ಸೆನೆಎಲ್ ಸೇವೆ ಅತ್ಯಂತ ಕಳಪೆ ಎಂದು ಅನೇಕ ಬಾರಿ ನಾನೇ ಹೇಳಿದ್ದೇನೆ. ಆದರೂ, ಸೇವೆಯಲ್ಲಿ ಸುಧಾರಣೆ ಆಗಲಿಲ್ಲ. ಹಾಗಾಗಿ ಬಿಎಸ್ಸೆನ್ನೆಲ್‌ನಿಂದ ಬೇರೆ ಕಂಪನಿಗೆ ಬದಲಾಯಿಸಿಕೊಂಡಿದ್ದೇನೆ. ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ಶಿವಮೊಗ್ಗದಲ್ಲಿ ಉತ್ತಮ ಸೇವೆಲಭ್ಯವಾದರೆದಾವಣಗೆರೆಯಲ್ಲಿಯಾವಕಾರಣಕ್ಕೆ ದೊರೆಯುತ್ತಿಲ್ಲ. ಅಧಿಕಾರಿಗಳು ತೆಗೆದುಕೊಳ್ಳುವ ವೇತನಕ್ಕಾದರೂ ಸರಿಯಾಗಿ ಕೆಲಸ ಮಾಡುವುದೇ ಇಲ್ಲ ಎಂದಾದರೆ ಯಾಕೆ ಇರಬೇಕು. ಸರಿಯಾಗಿ ಕೆಲಸ ಮಾಡುವುದಾದರೆ ಮಾಡಿ, ಇಲ್ಲ ಎಂದರೆ ಸ್ವಯಂ ನಿವೃತ್ತಿ ತೆಗೆದುಕೊಂಡು ಮನೆಗೆ ಹೋಗಿ ಎಂದು ಗುಡುಗಿದರು. ರೈಲ್ವೆ ಇಲಾಖಾ ವ್ಯಾಪ್ತಿಯಲ್ಲಿ ಬಿಎಸ್ಸೆನ್ನೆಲ್ ಸೇವೆಯ ಬದಲಿಗೆ ಜಿಯೋ ಸಂಪರ್ಕ ದೊರೆಯುತ್ತದೆ.
ಗ್ರಾಹಕರಿಗೆ ಉತ್ತಮ ಸೌಲಭ್ಯ, ಸೇವೆಯೇ ನೀಡದೇ ಇದ್ದಲ್ಲಿ ಸಂಸ್ಥೆಗೆ ಲಾಭ ಬರುವುದಾದರೂ ಹೇಗೆ. ಅನ್ನ ನೀಡುವಂತಹ ಬಿಎಸ್ಸೆನ್ನೆಲ್ ನನ್ನ ಆಸ್ತಿ. ಅದು ಉಳಿದರೆ ನಾನು ಉಳಿಯುತ್ತೇನೆ ಎಂದು ಎಲ್ಲ ಅಧಿಕಾರಿಗಳು ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಇದೇ ರೀತಿ ಮುಂದುವರೆದರೆ ಖಾಸಗಿಯವರ ಪಾಲಾಗುತ್ತದೆ. ಅವರೇನಾದರೂ ಬಿಎಸ್ಸೆನ್ನೆಲ್ ತೆಗೆದುಕೊಂಡರೆ ಎಲ್ಲರನ್ನೂ ಕೆಲಸದಿಂದ ಕಿತ್ತು ಹಾಕುತ್ತಾರೆ. ಹಾಗಾಗದಂತೆ ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ದಾವಣಗೆರೆಯಲ್ಲಿ 40 ಲಕ್ಷದಷ್ಟು ಲಾಭ ಬರುತ್ತದೆ. ಒಳ್ಳೆಯ ಕೆಲಸ ಮುಂದುವರೆಸಬೇಕು ಎಂದು ಸೂಚಿಸಿದರು.
ಸಲಹಾ ಸಮಿತಿ ಸದಸ್ಯ ಡಿ.ಎಸ್. ಶಿವಶಂಕರ್ ಮಾತನಾಡಿ, ಲ್ಯಾಂಡ್‌ಲೈನ್ ಕೆಟ್ಟು ಹೋದರೆ ಯಾವುದೇ ಅಧಿಕಾರಿಗಳು ಸ್ಪಂದಿಸುವುದೇ ಇಲ್ಲ.198ಗೆ ಕರೆ ಮಾಡಿದರೆ ಸ್ವೀಕಾರ ಮಾಡುವವರೇ ಇಲ್ಲ. ಹಾಗಾಗಿ ಅನೇಕರು ಲ್ಯಾಂಡ್ ಲೈನ್ ವಾಪಾಸ್ಸು ಮಾಡಿದ್ದಾರೆ. ಸಲಹಾ ಸಮಿತಿ ಸದಸ್ಯನಾಗಿರುವ ನನಗೇಅಧಿಕಾರಿಗಳು ಸ್ಪಂದಿಸುವುದೇ ಇಲ್ಲ. ಹಾಗಾಗಿ ನನಗೆ ಉಚಿತವಾಗಿ ನೀಡಿರುವ ಲ್ಯಾಂಡ್‌ಲೈನ್, ಬ್ರಾಡ್‌ಬ್ಯಾಂಡ್‌ನ್ನು ವಾಪಾಸ್ಸು ಮಾಡುವುದಾಗಿ ತಿಳಿಸಿದರು. ಸಲಹಾ ಸಮಿತಿ ಸದಸ್ಯರೇ ಸ್ಪಂದಿಸುವುದಿಲ್ಲ ಎಂದು ಉಚಿತವಾಗಿ ನೀಡಿದ್ದ ಸೌಲಭ್ಯವನ್ನ ವಾಪಾಸ್ಸು ನೀಡುವುದು ಇಲಾಖೆಗೇ ನಾಚಿಕೆ ತರುವ ವಿಷಯ.
ಒಳ್ಳೆಯ ಸೇವೆ, ಸೌಲಭ್ಯ ಕೊಡುವಂತೆ ಅನೇಕ ಬಾರಿ ಹೇಳಿದ್ದೇನೆ. ಈಗಲೂ ಅಧಿಕಾರಿಗಳು ಸುಧಾರಿಸಿಕೊಳ್ಳದೇ ಹೋದಲ್ಲಿ ಮುಂದೆ ಬಿಎಸೆನ್ನೆಲ್ ಕಂಡವರ ಪಾಲಾಗಬಹುದು ಎಂದು ಸಂಸದ ಸಿದೇಶ ª Ìರ್ ಎಚ್ಚರಿಸಿದರು. ಲ್ಯಾಂಡ್‌ಲೈನ್ ಡಿಸ್‌ಕನೆಕ್ಟ್ ಮಾಡಿಸಿದ ಮೂರು ತಿಂಗಳಲ್ಲಿ ಠೇವಣಿ ವಾಪಾಸ್ಸು ನೀಡಬೇಕು. ಲ್ಯಾಂಡ್‌ಲೈನ್ ಸಿದಂತಹ ಗ್ರಾಹಕರಿಗೆ ಒಂದು ವರ್ಷವಾದರೂ ಠೇವಣಿ ಹಣ ಹಿಂತಿರುಗಿಸಿಲ್ಲ ಎಂದು ಅನೇ ಕರು ದೂರುತ್ತಿದ್ದಾರೆ ಎಂದು ಡಿ.ಎಸ್. ಶಿವಶಂಕರ್ ತಿಳಿಸಿದರು.
ಬಿಎಸ್ ಎನ್ ಎಲ್ ವ್ಯಾಪ್ತಿಯಲ್ಲಿನ ಮೊಬೈಲ್ ಟವರ್ ನಿರ್ವಹಣೆಯನ್ನ ಹೊರ ಗುತ್ತಿಗೆ ನೀಡಲಾಗಿದೆ. ವರ್ಷಕ್ಕೆ3ಲಕ್ಷ ಕೊಟ್ಟರೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ. ಸರಿಯಾಗಿ ನಿರ್ವಹಣೆ ಮಾಡದೇ ಇರಲಿಲ್ಲಿ ªಅನುಮತಿ ರದ್ಧುಪಡಿಸಿ, ಬೇರೆ ಸಂಸೆ §ಗೆ ಹೊರ ಗುತ್ತಿಗೆ ನೀಡಿ ಎಂದು ಸೂಚಿಸಿದ ಸಿದ್ದೇಶ್ವರ ಟೆಂಡರ್ ಪ್ರಕ್ರಿಯೆಯಲ್ಲೂ ಭ್ರಷ್ಟಾಚಾರ ನಡೆದರೆ ನಾವೇನು ಮಾಡಲಿಕ್ಕೆ ಆಗುವುದೇ ಇಲ್ಲ.
ಗ್ರಾಹಕರಿಗೆ ಹೊಸ ಸೌಲಭ್ಯ ಒದಗಿಸಲು ಉಪಕರಣ ಇñರೆ ಖರೀದಿಗೆ Öಣಕಾ ಸಿನ ಸಮಸ್ಯೆ ಇದೆ. ನಿರ್ವಹಣಾ ವೆಚ್ಚಕ್ಕಾಗಿ ಬಿಎಸ್ಸೆ®ಲ್ ೆ° ನ ಕಟ್ಟಡಗಳನ್ನ ಸರ್ಕಾರಿ ಇಲಾಖೆಗಳಿಗೆ ಬಾಡಿಗೆ ನೀಡಲು ಪ್ರಸ್ತಾವನೆ ಸಲ್ಲಿಸುವಂತಾಗಿದೆ ಎಂದು ತಿಳಿಸಿದರು.