Advertisement

ಉಡುಪಿ ಬಿಷಪ್‌ರಿಂದ ಪೋಸ್ಟರ್‌ ಬಿಡುಗಡೆ

02:00 AM Dec 20, 2018 | Karthik A |

ಉಡುಪಿ: ಉದಯವಾಣಿ ಪತ್ರಿಕೆ ಕ್ರಿಸ್ಮಸ್‌ ಅಂಗವಾಗಿ ಏರ್ಪಡಿಸಿರುವ ಕ್ರಿಸ್ಮಸ್‌ ಗೋದಲಿ ಫೋಟೋ ಸ್ಪರ್ಧೆಯ ಪೋಸ್ಟರ್‌ಗಳನ್ನು ಬುಧವಾರ ಬಿಷಪ್‌ ಹೌಸ್‌ನಲ್ಲಿ ಬಿಷಪ್‌ ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಬಿಡುಗಡೆಗೊಳಿಸಿ ಶುಭಕೋರಿದರು. ನೈಸರ್ಗಿಕವಾಗಿ ನಿರ್ಮಿಸುವ ಗೋದಲಿ ಕಲಾತ್ಮಕವಾಗಿರುತ್ತದೆ. ಈಗ ಸಿದ್ಧ ಗೋದಲಿ ತಂದಿಡುವ ಪ್ರವೃತ್ತಿ ಇದೆ. ಹಸಿಹುಲ್ಲು ಮೊದಲಾದ ನೈಸರ್ಗಿಕ ವಸ್ತುಗಳಿಂದಲೇ ಗೋದಲಿ ನಿರ್ಮಿಸಿದರೆ ಚೆನ್ನ. ನಾವು ಚಿಕ್ಕಂದಿನಲ್ಲಿದ್ದಾಗ ಹಾಗೆಯೇ ಮಾಡುತ್ತಿದ್ದೆವು ಎಂದು ಬಿಷಪ್‌ ಹೇಳಿದರು.

Advertisement

ಸಮುದಾಯಗಳ ಮಧ್ಯೆ ಧಾರ್ಮಿಕ ಸೌಹಾರ್ದ ಹೆಚ್ಚಿಸುವ ಕುರಿತು ಕೆಲಸವಾಗ ಬೇಕಿದೆ. ಎಲ್ಲ ಮತ ಧರ್ಮಗಳ ಕುರಿತು ತಿಳಿದುಕೊಳ್ಳುವಂಥ ವೇದಿಕೆ ನಿರ್ಮಾಣವಾಗಬೇಕಿದೆ. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರೂ ಆಸಕ್ತಿ ವಹಿಸಿದ್ದಾರೆ. ಕ್ರಿಸ್ಮಸ್‌, ದೀಪಾವಳಿ ಸಂದರ್ಭ ವಿವಿಧೆಡೆ ಸೌಹಾರ್ದ ಮಿಲನ ನಡೆಯುತ್ತದೆ. ಇದು ತಳಸ್ತರದ ಸೌಹಾರ್ದ ಪ್ರಕ್ರಿಯೆಯಾದರೆ, ಅಂತರ್‌ಧರ್ಮೀಯ ಸಂವಹನ ಚಿಂತಕರ ನಡುವಿನ ಸೌಹಾರ್ದ ಪ್ರಕ್ರಿಯೆ ಎಂದರು. ಮುಖ್ಯವಾಗಿ ಬಡವರ್ಗದ ಜನರು ಸೌಲಭ್ಯಗಳನ್ನು ಪಡೆಯಲು ಪರದಾಡುವ ಸ್ಥಿತಿ ಇದೆ. ಇದರತ್ತ ಗಮನಹರಿಸಬೇಕಿದೆ ಎಂದು ಅಭಿಪ್ರಾಯಪಟ್ಟ ಅವರು, ಇಂಟರ್‌ನೆಟ್‌, ಮೊಬೈಲ್‌ನ್ನು ಮಕ್ಕಳು ಹೆಚ್ಚಾಗಿ ಬಳಸುತ್ತಿದ್ದು, ಅದರಿಂದಾಗುವ ರೇಡಿಯೇಶನ್‌ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು. ‘ಉದಯವಾಣಿ’ ದೈನಿಕ ಬಹು ಹಿಂದೆಯೇ ‘ಕುಗ್ರಾಮ’ ಗುರುತಿಸಿ ಅಭಿಯಾನ ಕೈಗೊಂಡಿತ್ತು. ಇಂಥ ಜನೋಪಯೋಗಿ ಕೆಲಸಗಳಿಗೆ ಒತ್ತು ನೀಡಲಿ ಎಂದು ಹಾರೈಸಿದರು.

ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ಲಿ. ಸಿಇಒ ವಿನೋದಕುಮಾರ್‌ ಮಾತನಾಡಿ, ಜನವರಿಯಲ್ಲಿ ಉದಯವಾಣಿ 50ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭ ಸಮಾಜೋಪಯೋಗಿ ಸಮಯೋಚಿತ ಸಲಹೆ ಸೂಚನೆಗಳನ್ನು ನೀಡುವಂತೆ ವಿನಂತಿಸಿದರು. ಈ ಸಂದರ್ಭ ಉದಯವಾಣಿ ತಂಡದ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next