Advertisement

ಅಮೃತಾಪುರ ಸರ್ಕಾರಿ ಶಾಲೆಗೆ ಹೈಟೆಕ್‌ ಸ್ಪರ್ಶ

05:49 PM Sep 04, 2021 | Team Udayavani |

ರಾಜ ಸಿರಿಗೆರೆ

Advertisement

ಸಿರಿಗೆರೆ : ಶಿಕ್ಷಕರಿಗೆ ಇಚ್ಛಾಶಕ್ತಿ ಇದ್ದರೆ ಸರ್ಕಾರಿ ಶಾಲೆಯನ್ನೂ ಹೈಟೆಕ್‌ ಆಗಿಸಬಹುದು ಎಂಬುದಕ್ಕೆ ಗಡಿ ಗ್ರಾಮ ಅಮೃತಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಸಾಕ್ಷಿ. ಈ ಶಾಲೆಯ ಬಹುಮುಖ ಪ್ರತಿಭೆ ಹೊಂದಿರುವ ಸಹಶಿಕ್ಷಕರೊಬ್ಬರ ಶ್ರಮದಿಂದ ನಗರ ಪ್ರದೇಶದ ಶಾಲೆಗಳನ್ನೂ ನಾಚಿಸುವಂತಹ ಸೌಲಭ್ಯಗಳನ್ನು ಪಡೆದು ಚಿತ್ರದುರ್ಗ ಜಿಲ್ಲೆಯಲ್ಲಿಯೇ ಮಾದರಿ ಶಾಲೆಯಾಗಿ ರೂಪುಗೊಂಡಿದೆ. ಅವರ ಸಾಧನೆಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಅರಸಿ ಬಂದಿದೆ.

ಈ ಶಾಲೆಯಲ್ಲಿ 1-5 ತರಗತಿ ನಡೆಯುತ್ತದೆ. 82 ವಿದ್ಯಾರ್ಥಿಗಳಿಗೆ ಮೂವರು ಶಿಕ್ಷಕರಿದ್ದಾರೆ. ಅವರಲ್ಲಿ ಸಹಶಿಕ್ಷಕ ಟಿ.ಪಿ. ಉಮೇಶ್‌ ಅವರ ಶ್ರಮ ಶಾಲೆಯ ಬೆಳವಣಿಗೆಯಲ್ಲಿ ಗಮನಾರ್ಹವಾಗಿದೆ. ಆರು ವರ್ಷಗಳ ಹಿಂದಿನ ಮಾತು. ಭಾರೀ ಮಳೆಯಿಂದ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದವು. ಮಕ್ಕಳು ಪ್ರಾಣಭಯದಿಂದಲೇ ಪಾಠ ಆಲಿಸುವ ಸ್ಥಿತಿ ಇತ್ತು. ದುರಸ್ತಿಗೆ ಸರ್ಕಾರದಿಂದ ಆರ್ಥಿಕ ನೆರವು ಸಿಗದೇ ಹೋದಾಗ ಮಕ್ಕಳನ್ನು ಬಯಲಲ್ಲಿ, ಗಿಡ-ಮರಗಳ ಕೆಳಗೆ ಕುಳ್ಳಿರಿಸಿ ಪಾಠ ಹೇಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆಗ ಬೆಂಗಳೂರಿನ ಖಾಸಗಿ ಸಂಸ್ಥೆ ಓಸಾಟ್‌ ಸಂಪರ್ಕಿಸಿ 40 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ತರಗತಿ ಕೊಠಡಿಗಳನ್ನು ನಿರ್ಮಿಸಲಾಯಿತು. ಬೆಂಗಳೂರಿನ ರೋಟರಿ ಸಂಸ್ಥೆ ಅತ್ಯಾಧುನಿಕ ಡೆಸ್ಕ್, ನಲಿ-ಕಲಿ ಮಕ್ಕಳಿಗೆ ಓದುವ ಟೇಬಲ್‌ ಕೊಡುಗೆಯಾಗಿ ನೀಡಿತು. ಇದರಿಂದ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದ ಮಕ್ಕಳು ಸರ್ಕಾರಿ ಶಾಲೆಯತ್ತ ಆಕರ್ಷಿತರಾದರು. ಯಾವುದೇ ಹೆಸರಾಂತ ಖಾಸಗಿ ಶಾಲೆಗಳಲ್ಲಿಯೂ ಇರದಂತಹ ಸೌಲಭ್ಯಗಳು ಇದೀಗ ಅಮೃತಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿವೆ. ಈ ಶಾಲೆಯ ಪುಟಾಣಿ ಮಕ್ಕಳು ಇದೀಗ ಸೂಕ್ಷ್ಮದರ್ಶಕ ಯಂತ್ರವನ್ನು ಭೌತಿಕವಾಗಿ ನೋಡುವುದಲ್ಲದೆ ಪ್ರಾಯೋಗಿಕವಾಗಿಯೂ ಬಳಸುತ್ತಿದ್ದಾರೆ.

ಅಲ್ಲದೆ ದಾನಿಗಳು ನೀಡಿರುವ ಲ್ಯಾಪ್‌ಟಾಪ್‌ಗ್ಳನ್ನು ಪರಿಣಾಮಕಾರಿಬೋಧನೆಗೆಬಳಸಿಕೊಳ್ಳಲಾಗುತ್ತಿದೆ.ಈ ಶಾಲೆಯಮಕ್ಕಳು ಚಿತ್ರದುರ್ಗ ಆಕಾಶವಾಣಿ ನಡೆಸುವ “ಚಿಗುರು’ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ಮಕ್ಕಳಲ್ಲಿ ಪರಿಸರ ಹಾಗೂ ವಿಜ್ಞಾನದತ್ತ ಆಸಕ್ತಿ ಬೆಳೆಸಲು ವಿಜ್ಞಾನ ಪ್ರಯೋಗಾಲಯ ನಿರ್ಮಿಸಲಾಗಿದೆ. ಪಾಠೊಪಕರಣಗಳ ಕೊಠಡಿಯೂ ಆಕರ್ಷಣೀಯವಾಗಿದೆ. ಇದೆಲ್ಲದರ ಹಿಂದೆ ಉಮೇಶ್‌ ಹಾಗೂ ಉಳಿಸ ಶಿಕ್ಷಕರ ಶ್ರಮ ಎದ್ದು ಕಾಣುತ್ತಿದೆ.

Advertisement

ಮಿಸ್ಡ್ ಕಾಲ್‌ ಕೊಡಿ ಪಾಠ ಕೇಳಿ: ಆನಲೈನ್‌ ಶಿಕ್ಷಣ ನೀಡಲು ಮಕ್ಕಳ ಬಳಿ ಸ್ಮಾರ್ಟ್‌ಫೋನ್‌ ಇರಲಿಲ್ಲ. ಹಾಗಾಗಿ ಅವರ ಕೀಪ್ಯಾಡ್‌ ಮೊಬೈಲ್‌ ಉಮೇಶ್‌ಅವರೇಕರೆಮಾಡಿಪಾಠಹೇಳಿದ್ದಾರೆ.ಯಾವುದೇಸಮಯದಲ್ಲಿ ಕರೆ ಮಾಡಿದರೂ ಒಂದಿನಿತೂ ಬೇಸರಪಟ್ಟುಕೊಳ್ಳದೆ ವಿದ್ಯಾರ್ಥಿಗಳ ಸಂದೇಹ ಬಗೆಹರಿಸಿದ್ದಾರೆ. ಅಲ್ಲದೆ ತಮ್ಮ ಸೈಕಲ್‌ ಏರಿ ಹಳ್ಳಿಗಳಿಗೆ ತೆರಳಿ ಮಕ್ಕಳನ್ನು ಹುಡುಕಾಡಿ ಪಾಠ ಹೇಳಿದ್ದು ಅವರ ಕಾರ್ಯತತ್ಪರತೆಗೆ ನಿದರ್ಶನ.

ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಮೂರು ತಿಂಗಳ ಕಾಲ ಬಹುಪಾಲು ಶಾಲೆಯಲ್ಲಿಯೇ ಉಳಿದು ಪಾಳಿ ಪದ್ಧತಿಯಲ್ಲಿ ಗ್ರಾಮದ ದೇವಾಲಯ, ಜಗಲಿ ಕಟ್ಟೆಗಳ ಮೇಲೆ ಸಾಮಾಜಿಕ ಅಂತರ ಪಾಲಿಸಿ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಅಲ್ಲದೆ ಕೋವಿಡ್‌ ಜಾಗೃತಿ ಕಾರ್ಯಕ್ಕೂ ಕೈ ಜೋಡಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಇವರ ಈ ಕಾರ್ಯ ಇತರ ಶಿಕ್ಷಕರಿಗೆ ಮಾದರಿಯಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next